ಮಾಜಿ ಶಾಸಕರಿಂದ ಸೋಂಕಿತರಿಗೆ ಮೆಡಿಸನ್ ಕಿಟ್ ವಿತರಣೆ

ಪಿರಿಯಾಪಟ್ಟಣ. ಜೂ.03: ತಾಲೂಕಿನಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿರುವವರಿಗೆ ಚಿಕಿತ್ಸೆಗೆಂದು ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ ಎಂದು ಮಾಜಿ ಶಾಸಕ ಕೆ.ವೆಂಕಟೇಶ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಾಜಿ ಶಾಸಕ ಕೆ ವೆಂಕಟೇಶ್ ಕೊರೋನಾ ಸೋಂಕಿತರಿಗೆ ಮೆಡಿಸನ್ ಕಿಟ್ ಮತ್ತು ಆಕ್ಸಿಜನ್ ಕಾನ್ಸನ್ ಟ್ರೇಟರ್‍ಗಳನ್ನು ತಹಶೀಲ್ದಾರ್‍ಗೆ ಬುಧವಾರ ನೀಡಿ ಮಾತನಾಡಿದರು. ತಾಲೂಕಿನಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದ್ದು ಜನರು ಎಚ್ಚರಿಕೆಯಿಂದ ಇದ್ದರೆ ಮಾತ್ರ ಇದನ್ನು ಪರಿಣಾಮಕಾರಿಯಾಗಿ ಹತೋಟಿಗೆ ತರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಎಲ್ಲರೂ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದು ಇದನ್ನು ಮನಗಂಡು ನಾನು ಸಹ ಕೊಡುಗೆಯನ್ನು ತಾಲೂಕು ಆಡಳಿತಕ್ಕೆ ನೀಡುತ್ತಿದ್ದೇನೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ತಹಶೀಲ್ದಾರ್ ಚಂದ್ರಮೌಳಿ ತಾಪಂ ವಿವೋ ಕೃಷ್ಣಕುಮಾರ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ ಶ್ರೀನಿವಾಸ್ ಸಿಬ್ಬಂದಿ ಪ್ರಕಾಶ್ ಕಾಂಗ್ರೆಸ್ ಮುಖಂಡರಾದ ಬಿ.ಜೆ ಬಸವರಾಜು, ಭುಜಂಗ, ಸಿಗುರು ವಿಜಯಕುಮಾರ್ ಮೋಹನ್ ಮುರಳಿ ಮಹೇಂದ್ರ ಕಿರನೆಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಹಾಜರಿದ್ದರು.