ಮಾಜಿ ಶಾಸಕರಿಂದ ಬನಹಟ್ಟಿ ಪರ ಭರ್ಜರಿ ಪ್ರಚಾರ

ಸಿರವಾರ.ಡಿ.೬-ವಿಧಾನ ಪರಿಷತ್ತು ಚುನಾವಣೆ ಹಿನ್ನಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ಪರ ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ ಮತ್ತು ಗಂಗಾಧರ ನಾಯಕ, ಮಾಜಿ ಜಲ್ಲಾದ್ಯಕ್ಷ ಜೆ.ಶರಣಪ್ಪಗೌಡ ನೇತೃತ್ವದಲ್ಲಿ ತಾಲೂಕಿನ ವಿವಿಧ ಗ್ರಾಮಪಂಚಾಯತಿಗಲ್ಲಿ ಇಂದು ಬೆಳಗ್ಗೆ ಮತಯಾಚನೆ ಮಾಡಲಾಯಿತು.
ತಾಲೂಕಿನ ಕಲ್ಲೂರು, ಗಣದಿನ್ನಿ, ಕಪಗಲ್, ನೀರಮಾನ್ವಿ, ಹರವಿ, ಮಾಡಗಿರಿ, ಚಾಗಭಾವಿ, ಗುಡದಿನ್ನಿ ಗ್ರಾಮಪಂಚಾಯತಿ ಸದಸ್ಯರಲ್ಲಿ ಮತಯಾಚನೆ ಮಾಡಿದರು.
ನಂತರ ಮಾಜಿ ಶಾಸಕ ಗಂಗಾಧರ ನಾಯಕ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ ಒಂದು ವೇಳೆ ಬಿಜೆಪಿ ಅಭ್ಯರ್ಥಿ ವಿಶ್ವನಾಥ ಅವರನ್ನು ಗೆಲ್ಲಿಸಿದರೆ ಗ್ರಾಮೀಣ ಭಾಗದ ಜನರಿಗೆ ತುಂಬಾ ಅನುಕೂಲವಾಗುತ್ತದೆ. ಹೀಗಾಗಿ ಬಿಜೆಪಿ ಪರ ಮತ ಮೂಲಕ ಬಹುಮತದಿಂದ ಆಯ್ಕೆಮಾಡಲು ಸಹಕರಿಸಿ ಎಂದರು.
ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ್ ಮಾತನಾಡಿ ವಿಶ್ವನಾಥ ಬನಹಟ್ಟಿ ಬೇರೆ ಊರಿನವರಾಗಿರಬಹುದು ಆದರೆ ಜಿಲ್ಲೆಗೆ ಚಿರಪರಿಚಿತರು, ಪಕ್ಷಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಗ್ರಾಮೀಣ ಪ್ರದೇಶದ ಸಮಸ್ಯೆಗಳಿಗೆ ಬಿಜೆಪಿ ಸ್ಪಂದನೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡುತ್ತದೆ. ಗ್ರಾಮಪಂಚಾ ಯತಿ ಸದಸ್ಯರು ಕಾಂಗ್ರೇಸ್ ನವರು ತೊರಿಸುವ ಹಣದ ಆಸೆಗೆ ಮಾರು ಹೋಗದೆ ವಿಶ್ವನಾಥರಿಗೆ ಮತ ನೀಡಿ ಎಂದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ ಮಾತನಾಡಿ ಬಿಜೆಪಿ ಸರ್ವ ಜನಾಂಗದ ಅಭಿವೃದ್ದಿ ಮಾಡುತ್ತಿದೆ. ಮುಖಂಡರು ಒಗ್ಗೂಡಿ ಪ್ರಚಾರ ಮಾಡುತ್ತಿದ್ದೂ, ನಮ್ಮ ಅಭ್ಯರ್ಥಿ ಗೆಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ತಾಲೂಕಾ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ನಯೋಪ್ರಾ ಅಧ್ಯಕ್ಷ ವಿರೇಶ ನಾಯಕ ಬೆಟ್ಡದೂರು, ಮಾಜಿ ಜಿ.ಪಂ ಸದಸ್ಯ ಗೋಪಾಲ ನಾಯಕ, ಶಿವಶರಣಗೌಡ ಲಕ್ಕಂದಿನ್ನಿ, ಸಿರವಾರ ತಾ.ಪಂ ಮಾಜಿ ಅಧ್ಯಕ್ಷ ದೇವರಾಜ ನಾಯಕ ಕುರುಕುಂದಾ, ಕೃಷಿ ವಿವಿ ಸಲಹಾ ಮಂಡಳಿ ಸದಸ್ಯ ಕೋಟ್ರೇಶಪ್ಪ ಕೋರಿ, ಎಪಿಎಂಸಿ ಸದಸ್ಯ ಮೌಲಸಾಬ ಗಣದಿನ್ನಿ, ಬಿಜೆಪಿ ಕಾರ್ಯಕರ್ತರಾದ ಶ್ರೀಕಾಂತ ಗೂಳಿ ಪಾಟೀಲ್, ಆಂಜಿನೇಯ್ಯ ಕಲ್ಲೂರು ಸೇರಿದಂತೆ ಗ್ರಾಪಂ ಸದಸ್ಯರು ಇದ್ದರು.