ಮಾಜಿ ಮೇಯರ್ ಸಂಪತ್ ರಾಜ್ ನಾಳೆವರೆಗೆ ಸಿಸಿಬಿ ಕಸ್ಟಡಿಗೆ

ಬೆಂಗಳೂರು,ನ.೧೯- ಕೆಜಿ ಹಳ್ಳಿ ಡಿಜೆ ಹಳ್ಳಿ ಗಲಭೆ ಪ್ರಕರಣದ ಬಂಧಿತ ಮಾಜಿ ಮೇಯರ್ ಸಂಪತ್ ರಾಜ್ ರನ್ನು ನಾಳೆ ಮಧ್ಯಾಹ್ನ ೧.೩೦ರವರೆಗೆ ಮತ್ತೆ ಒಂದು ದಿನ ಸಿಸಿಬಿ ವಶಕ್ಕೆ ನ್ಯಾಯಾಲಯ ನೀಡಿ ಆದೇಶಿಸಿದೆ.
ಗಲಭೆ ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿ ಎರಡು ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು ಅವಧಿ ಅಂತ್ಯಗೊಂಡಿದ್ದ ಹಿನ್ನಲೆಯಲ್ಲಿ ಇಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ನ್ಯಾಯಾಲಯದಲ್ಲಿ ಸಂಪತ್ ರಾಜ್ ಪರವಾಗಿ ವಕೀಲ ಸಿವಿ ನಾಗೇಶ್ ಅವರು ಘಟನೆಗೂ ಸಂಪತ್ ರಾಜ್ ಗೂ ಯಾವುದೇ ಸಂಬಂಧವಿಲ್ಲ.
ಶಾಸಕರ ಮನೆಗೆ ಏನು ಆಗಿದೆ ಎನ್ನುವುದನ್ನು ಗಲಭೆ ದಿನದಂದು ನೋಡಲು ಹೋಗಿದ್ದರು. ಮೇಯರ್ ಅದವರಿಗೆ ಬಹಳಷ್ಟು ಪೋನ್ ಕಾಲ್ ಗಳು ಬರಲಿವೆ ಪೋನ್ ಕರೆಗಳನ್ನು ಆಧಾರವಾಗಿಟ್ಟುಕೊಂಡು ಅವರನ್ನು ಆರೋಪಿಯಾಗಿಸುವುದು ಸರಿಯಲ್ಲ. ಸಂಪತ್ ರಾಜ್ ಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದಯ ವಾದಿಸಿದರು.
ವಾದವನ್ನು ಆಲಿಸಿದಂತ ನ್ಯಾಯಾಲಯವು, ಮತ್ತೆ ವಿಚಾರಣೆಯನ್ನು ನಾಳೆಗೆ ಮುಂದೂಡಿ, ನಾಳೆ ಮಧ್ಯಾಹ್ನ ೧.೩೦ರವರೆಗೆ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಸಿಸಿಬಿ ವಶಕ್ಕೆ ನೀಡಿ ಆದೇಶಿಸಿದೆ.