ಮಾಜಿ ಮೇಯರ್ ರಕ್ಷಣೆಗೆ ನಿಂತ ಕಾಂಗ್ರೆಸ್ ಮುಖಂಡರು; ರೇಣುಕಾಚಾರ್ಯ ಆರೋಪ

ದಾವಣಗೆರೆ.ನ.೧೭; ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ರನ್ನ ಕಾಂಗ್ರೆಸ್ ಮುಖಂಡರು ರಕ್ಷಿಸುತ್ತಿದ್ದಾರೆ ಎಂದು ದಾವಣಗೆರೆಯಲ್ಲಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.
ಪ್ರಚೋದನೆ ನೀಡಿ ಸಂಪತ್ ರಾಜ್ ಅವರನ್ನು ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಕಳುಹಿಸಿರಬಹುದು.ಬೆಂಕಿ ಹಚ್ಚುವುದು,ಗಲಾಟೆ ಮಾಡುವವರು ದೇಶದ್ರೋಹಿಗಳು.ಇಂದಿರಾಗಾಂಧಿ, ರಾಜೀವ್ ಗಾಂಧಿ ಬೆಳೆಸಿದವರೇ ಅವರನ್ನು ಕೊಂದರುನೀಚ ಕೃತ್ಯ ಮಾಡುವವರಿಗೆ ಬೆಂಬಲ ಕೊಡಬೇಡಿ

ಶಾಸಕ ಅಖಂಡ ಶ್ರೀನಿವಾಸ್ ಮನೆ ಮೇಲೆ ದಾಳಿ ಆದರೂ ಕಾಂಗ್ರೆಸ್ ಮುಖಂಡರು ಹೋಗಲಿಲ್ಲ. ಸಂಪತ್ ರಕ್ಷಿಸಿದರೆ ಮುಂದೆ ನೀವೇ ಅದರ ಪರಿಣಾಮ ಎದುರಿಸ್ತೀರಿ.ರಾಜಕಾರಣಿಗಳು ಇನ್ನೊಬ್ಬರಿಗೆ ಮಾದರಿಯಾಗಿರಬೇಕು
ಕಾಂಗ್ರೆಸ್ ನವರು ಆದರ್ಶ ಉಳಿಸಿಕೊಂಡಿದ್ದೀರಾ.ಕಾಂಗ್ರೆಸ್ ಮೋಸ ರಾಜಕಾರಣ ಮಾಡುತ್ತಿದೆ ಸಮಾಜದಲ್ಲಿ ವಿಷಬೀಜ ಬಿತ್ತಿದ್ದಕ್ಕೆ ದೇಶದಲ್ಲಿ ಕಾಂಗ್ರೆಸ್ ಸೋಲು ಕಾಣುತ್ತಿದೆ ಎಂದು.ಕಾಂಗ್ರೆಸ್ ಮುಖಂಡರ ಮೇಲೆ ಹರಿಹಾಯ್ದಿದ್ದಾರೆ.