ಮಾಜಿ ಮೇಯರ್ ಮನೆಯಲ್ಲಿಕೋಟ್ಯಂತರ ಚಿನ್ನಾಭರಣ ಲೂಟಿ

ಬೆಂಗಳೂರು,ಏ.೨೧-ಮಾಜಿ ಮೇಯರ್ ಆರ್.ನಾರಾಯಣಸ್ವಾಮಿ ಅವರ ಸಂಜಯನಗರದ ಆರ್‌ಎಂವಿ ೨ನೇ ಹಂತದ ಮನೆಯಲ್ಲಿ ನಗದು, ಚಿನ್ನಾಭರಣಗಳು ಸೇರಿ ಕೋಟ್ಯಂತರ ಮೌಲ್ಯದ ವಸ್ತುಗಳನ್ನು ದುಷ್ಕರ್ಮಿಗಳು ಕಳವು ಮಾಡಿ ಪರಾರಿಯಾಗಿದ್ದಾರೆ.
ಆರ್.ನಾರಾಯಣಸ್ವಾಮಿ ಅವರ ಮನೆಯಲ್ಲಿದ್ದ ೪ ಲಕ್ಷ ನಗದು, ೯೯,೭೫ ಲಕ್ಷ ಮೌಲ್ಯದ ೧,೪೨೫ ಗ್ರಾಂ ಚಿನ್ನಾಭರಣ, ೧೮,೯೨ ಲಕ್ಷ ರೂ. ಮೌಲ್ಯದ ೨೨ ಕೆಜಿ ಬೆಳ್ಳಿ, ೬.೫೦ ಲಕ್ಷ ರೂ. ಮೌಲ್ಯದ ೩ ವಾಚ್‌ಗಳು ಸೇರಿ ೧,೨೯,೧೭,೦೦೦ ಮೌಲ್ಯದ ಮಾಲುಗಳನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದು,ಈ ಸಂಬಂಧ ನಾರಾಯಣಸ್ವಾಮಿ ಅವರು ಸಂಜಯನಗರ ಪೊಲೀಸರಿಗೆ ದೂರು ನೀಡಿದ್ದಾರೆ.
ಮನೆಯ ಸೆಕ್ಯೂರಿಟಿ ಗಾರ್ಡ್ ನರಬಹದ್ದೂರ್ ಶಾಯಿಯಿಂದ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಸೆಕ್ಯೂರಿಟಿ ಗಾರ್ಡ್ ಬಂಧನಕ್ಕೆ ಸಂಜಯನಗರ ಪೊಲೀಸರು ಶೋಧ ನಡೆಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.