ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ.

ಸಂಜೆವಾಣಿ ವಾರ್ತೆ
ಹೊಸಪೇಟೆ ನ 9ದಲಿತರು ಹೊಟ್ಟೆ ಪಾಡಿಗಾಗಿ ಬಿಜೆಪಿ ಪಕ್ಷವನ್ನ ಸೇರ್ಪಡೆಗೊಳ್ಳುತ್ತಿದ್ದಾರೆ ಎಂಬ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಎಸ್ಸಿ ಮೋರ್ಚ ಪ್ರತಿಭಟನೆ ನಡೆಸಿತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆಯನ್ನು ಉದ್ದೇಶಿಸಿ ಎಸ್ಸಿ ಮೋರ್ಚಾ ಅಧ್ಯಕ್ಷ ಜೆ.ಬಿ ರಾಘವೇಂದ್ರ ಮಾತನಾಡಿ,ಕಳೆದ ಹಾನಗಲ್ ಚುನಾವಣೆ ವೇಳೆಯ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ದಲಿತರು ಹೊಟ್ಟೆ ಪಾಡಿಗಾಗಿ ಬಿಜೆಪಿ ಪಕ್ಷವನ್ನ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಹೇಳಿಕೆಯನ್ನು ನೀಡಿದ್ದರು ಇದು ಇಡೀ ರಾಜ್ಯದ ದಲಿತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ, ಅವರು ಯಾವ ಪಕ್ಷ ಒಳ್ಳೆಯ ಕೆಲಸಗಳನ್ನ ಮಾಡುತ್ತವೆ ಅನ್ನುವುದನ್ನ ಗಮನಿಸಿ ಪಕ್ಷಗಳಿಗೆ ಹೋಗುತ್ತಾರೆ. ಇಂತಹ ಹೇಳಿಕೆ ದಲಿತ ನಾಯಕರಿಗೆ ಮತ್ತು ಸಮುದಾಯಗಳಿಗೆ ಅಪಮಾನ ಮಾಡಿದ್ದಾರೆ.ಇಡೀ ರಾಜ್ಯದ ದಲಿತ ಸಮುದಾಯಕ್ಕೆ ಕ್ಷಮೆಯಾಚನೆ ಮಾಡಬೇಕು,
ಅವರು ಈ ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿದ್ದರಾಮಯ್ಯನ ವಿರುದ್ಧ ಘೋಷಣೆಗಳನ್ನ ಹಾಕಿದರು.
ಈ ಸಂದರ್ಭದಲ್ಲಿ ತಾಲೂಕು ಮಂಡಲ ಅಧ್ಯಕ್ಷ ಬಸವರಾಜ್ ನಲತವಾಡದ, ಶಂಕರ್ ಮೇಟಿ,
ಜೀವರತ್ನಂ, ಮಧುಸೂದನ್, ಎಸ್ ಎಚ್ ಮಲ್ಲಪ್ಪ, ತಾಯಪ್ಪ,ದೇವಪ್ಪ, ಚೆನ್ನಕೇಶ್ವ ಚಿದಾನಂದ ಹುಲುಗಪ್ಪ, ಶಿವರಾಜ್ ನಾಯ್ಕ್,ಮಹಿಳಾ ಮೋರ್ಚಾ
ರೇಷ್ಮಾ ಭರಾಡೆ, ಚೈತ್ರ ಸೇರಿದಂತೆ ಇತರರು ಹಾಜರಿದ್ದರು.