ಮಾಜಿ ಪ್ರಧಾನಿ ವಾಜಪೇಯಿ ಜಯಂತಿ


ಸಂಜೆವಾಣಿ ವಾರ್ತೆ
ಬಳ್ಳಾರಿ, ಡಿ.27: ತಾವು ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗ, ದೇಶದ ಅಭಿವೃದ್ಧಿ ಹಾಗೂ ಪ್ರಗತಿಯ ದೃಷ್ಟಿಯಿಂದ ಮಾತ್ರ ಆಡಳಿತ ರೂಢ ಸರ್ಕಾರದ ತಪ್ಪುಗಳನ್ನು ಎತ್ತಿಹಿಡಿದು ಸರಿದಾರಿಯಲ್ಲಿ ನಡೆಯುವಂತೆ ನೋಡಿಕೊಂಡವರು ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ 99ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ವಾಜಪೇಯಿ ಅವರು ಮೂರು ಸಾರಿ ಪ್ರಧಾನಮಂತ್ರಿಯಾಗಿ ಆಡಳಿತ ನಡೆಸುವ ಸಂದರ್ಭದಲ್ಲಿ ಪೋಖ್ರಾನ್-2 ಅಣುಶಕ್ತಿ ಪ್ರಯೋಗ, ಕಾರ್ಗಿಲ್ ಯುದ್ಧ,ವಿವಾನ ಅಪಹರಣ ಹಾಗೂ ಸಂಸತ್ತಿನ ಮೇಲೆ ದಾಳಿ ಇಂತಹ ಘಟನೆಗಳು ನಡೆದಾಗಲು ಎದೆಗುಂದದೆ ಎದುರಿಸಿ, ಸಂಸತ್ತಿನಲ್ಲಿ ವಿರೋಧ ಪಕ್ಷ ಹಾಗೂ ಮಾಧ್ಯಮಗಳ ಪ್ರಶ್ನೆಗಳಿಗೆ ಸಕ್ರಿಯವಾಗಿ ಉತ್ತರಿಸಿ,ಅಜಾಥ ಶತ್ರುವಾಗಿದ್ದರು.
ಆದ್ದರಿಂದ ನಾಡು ಹಾಗೂ ದೇಶವನ್ನಾಳುವ ಜನಪ್ರತಿನಿಧಿಗಳು ಸಮಾಜದ ಕಟ್ಟಕಡೆಯ ವ್ಯಕ್ತಿ ಮುಖ್ಯವಾಹಿನಿಗೆ ಬರುವಂತಹ ಕಾನೂನು ಜಾರಿಗೆ ತಂದು ಸಂವಿಧಾನದ ಆಶಯಗಳನ್ನು ಈಡೇರಿಸಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ಬಸವರಾಜ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಾದ ಎಂಟನೇ ತರಗತಿ ನಡವಿ ಗೋವರ್ಧನ, ಆರನೇ ತರಗತಿಯ ಸುನೀತಾ ಹಾಗೂ ವನಜಾಕ್ಷಿ ಗೆ ಬಹುಮಾನ ವಿತರಿಸಲಾಯಿತು.
ಶಿಕ್ಷಕರಾದ ಮೋದಿನ್ ಸಾಬ್, ಚನ್ನಮ್ಮ, ಶಶಮ್ಮ, ರಾಮಾಂಜಿನೇಯ, ವಿದ್ಯಾರ್ಥಿ ಪ್ರತಿನಿಧಿ ಮಹೇಶ,ನಾಗವೇಣಿ, ವಾಲ್ಮೀಕಿ ಯಶೋಧ ಮುಂತಾದವರು ಉಪಸ್ಥಿತರಿದ್ದರು.