ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಜನ್ಮದಿನ ಆಚರಣೆ

ರಾಯಚೂರು ನ ೧೪:- ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಮುಂಜಾನೆ ೧೦.೩೦ ಗಂಟೆಗೆ ಮಾಜಿ ಪ್ರಧಾನಿ ದಿ|| ಜವಾಹರಲಾಲ್ ನೆಹರುರವರ ಜನ್ಮದಿನಾಚರಣೆ ಆಚರಿಸಲಾಯಿತು. ನೆಹರುರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಜಯವಂತರಾವ್ ಪತಂಗೆ, ಭೀಮನಗೌಡ ನಾಗಡದಿನ್ನಿ, ಜಿ.ಸುರೇಶ, ನಜೀರ್ ಪಂಜಾಬಿ, ಸಿದ್ಧಪ್ಪ ಭಂಡಾರಿ, ನಿರ್ಮಲಾ ಬೆಣ್ಣಿ, ಅರುಣ ದೋತರಬಂಡಿ, ಪವನ ಪಾಟೀಲ್, ಬಿ.ರಮೇಶ, ಹರಿಬಾಬು, ತಿಮ್ಮಪ್ಪ ಅಸ್ಕಿಹಾಳ, ವಂದನಾ, ಶಶಿಕಲಾ ಭೀಮರಾಯ, ಮಾಲಾ ಭಜಂತ್ರಿ, ರಾಚನಗೌಡ, ಲಕ್ಷ್ಮಣ ಮ್ಯಾದಾರ, ಇಲ್ಲೂರು ಗೋಪಾಲಯ್ಯ, ಕೆ.ಇ.ಕುಮಾರ, ಶಂಕರ ಕಲ್ಲೂರು, ಮಲ್ಲೇಶ ಕೊಲಮಿ, ಹನುಮಂತು ಜೂಕೂರು, ಕೆ.ನಲ್ಲಾರೆಡ್ಡಿ ನಾಯಕ, ಈರಣ್ಣ, ದಸ್ತಗಿರಿ, ಸತ್ಯರೆಡ್ಡಿ, ಬಿ.ವಿ.ರಾಜುಗೌಡ, ಜೆ.ಮುನಿ, ಶಂಶುದ್ದೀನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.