ಮಾಜಿ ಪ್ರಧಾನಿಗಳ 89ನೇ ಹುಟ್ಟು ಹಬ್ಬಕ್ಕೆ 89 ಜನರಿಂದ ರಕ್ತದಾನ

ಯಾದಗಿರಿ:ಮೇ.19: ಸಧ್ಯ ಕೋವಿಡ್-19 ರೋಗವು ಹೆಚ್ಚಾಗಿ ಹರಡಿರುವುದರಿಂದ ಜಿಲ್ಲೆಯಲ್ಲಿ ರಕ್ತದ ಅಭಾವ ಹೆಚ್ಚಿರುವುದರಿಂದ ಗರ್ಭಿಣಿಯರಿಗೆ, ಬಡರೋಗಿಗಳಿಗೆ ರಕ್ತದ ಅಭಾವ ವಿರುವವರೆಗೆ ಅನುಕೂಲವಾಗಲೆಂದು ರಕ್ತದಾನ ಶಿಬಿರವನ್ನು ಕಳೆದ ವರ್ಷದಂತೆ ಈ ವರ್ಷವು ಕೂಡಾ ಮಾನ್ಯ ಗುರುಮಿಠಕಲ್ ಶಾಸಕರ ಜನ ಸಂಪರ್ಕ ಕಛೇರಿ ಯಾದಗಿರಿಯಲ್ಲಿ ಶಿಬಿರವನ್ನು ಯಶಸ್ವಿಯಾಗಿ ಪೂರೈಸಿದ ಯುವ ಜನತೆಗೆ ಧನ್ಯವಾದಗಳು ಹಾಗೂ ಆಧುನಿಕ ಜಗತ್ತಿನಲ್ಲಿ ಮನುಷ್ಯ ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದಿದ್ದರೂ ಅಮೂಲ್ಯವಾದ ರಕ್ತವನ್ನು ಕೃತಕವಾಗಿ ಸೃಷ್ಠಿಸಲು ಸಾಧ್ಯವಾಗಿಲ್ಲ ಎಂದು ರಾಜ್ಯ ಜೆಡಿಎಸ್ ಯುವ ನಾಯಕ ಶರಣಗೌಡ ಕಂದಕೂರ ತಿಳಿಸಿದರು.

ಮಂಗಳವಾರ ನಗರದ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಅವರ ಜನಸಂಪರ್ಕ ಕಚೇರಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ 89ನೇ ಜನ್ಮದಿನಾಚರಣೆ ನಿಮಿತ್ತ ಕಂದಕೂರ ಅಭಿಮಾನಿ ಬಳಗದಿಂದ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್-19 ವೇಳೆ ದೇಶದಲ್ಲಿ ಸಾಕಷ್ಟು ಜನರಿಗೆ ರಕ್ತ ಅವಶ್ಯಕತೆ ಇದ್ದು, ಮಣ್ಣಿನ ಮಗನಾದ ದೇವೇಗೌಡರ ಜನ್ಮದಿನಾಚರಣೆ ನಿಮಿತ್ಯ ಈ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.

ಸಧ್ಯ ದೇಶ ಸಂಕಷ್ಟದ ಸ್ಥಿತಿಯಲ್ಲಿದ್ದು, ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಹೆಮ್ಮಾರಿ ಕರೊನಾವನ್ನು ಹೊಡೆದೋಡಿಸಬೇಕಾಗಿದೆ. ನಮ್ಮ ಮಾರ್ಗದರ್ಶಕರೂ ಜೆಡಿಎಸ್‍ನ ವರೀಷ್ಠರಾದ ದೇವೇಗೌಡರ ಆಶಯವೂ ಇದೇ ಆಗಿದ್ದು, ಎಲ್ಲರೂ ಒಗ್ಗಟ್ಟಾಗಿ ದೇಶಕ್ಕೆ ಅಂಟಿಕೊಂಡಿರುವ ಈ ಪಿಡುಗನ್ನು ದೂರ ಮಾಡಬೇಕಿದ್ದು, ಅನಗತ್ಯವಾಗಿ ಯಾರೂ ಮನೆಯಿಂದ ಹೊರಗಡೆ ಬರಕೂಡದು ಎಂದು ಸಲಹೆ ನೀಡಿದರು.

ಶಿಬಿರದಲ್ಲಿ ಒಟ್ಟು 89 ಜನ ಅಭಿಮಾನಿಗಳಿಂದ ರಕ್ತದಾನ ಮಾಡಿದರು. ಎಲ್ಲಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು. ಅಲ್ಲದೆ ಪ್ರತಿಯೊಬ್ಬರಿಗೆ ಮಾಸ್ಕ್ ಹ್ಯಾಂಡ್ ಗ್ಲೋಸ್ ಮತ್ತು ಸ್ಯಾನಿಟೈಜರ್ ವಿತರಣೆ ಮಾಡಿದ್ದು, ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಅಜಯರೆಡ್ಡಿ ಯಲ್ಹೇರಿ, ಮಲ್ಲಣ್ಣಗೌಡ ಕೌಳೂರು, ಮಹೇಂದ್ರರೆಡ್ಡಿ ಕಂದಕೂರ್, ಸುಭಾಶ್ಚಂದ್ರ ಹೊನಗೇರಾ, ಸಾಬಣ್ಣ ಗಜ್ಜಿ ಹೊನಗೇರಾ, ಸತೀಶ ಕಾಕಲವಾರ, ದೊಡ್ಡಣ್ಣಗೌಡ ಅರಿಕೇರಾ (ಬಿ), ರಾಜು ಉಡುಪಿ, ಶರಣಗೌಡ ಕ್ಯಾತನಾಳ, ತಾಯಪ್ಪ ಬದ್ದೇಪಲ್ಲಿ, ಮೈನು ಜಾಗರದಾರ, ಲಕ್ಷ್ಮಣ ನಾಯಕ ಕೂಡ್ಲೂರು, ಅಯ್ಯಪ್ಪ ಹೆಡಗಿಮದ್ರಿ, ಮಾರ್ಥಂಡ ಮಾನೇಗಾರ, ಪ್ರಕಾಶ ನಿರಟಿ ಗುರುಮಿಠಕಲ್, ನರಸಪ್ಪ ದನವಾಡ ಗುರುಮಿಠಕಲ್, ಬಾಲರಾಜ ದಾಸರಿ ಗುರುಮಿಠಕಲ್, ಅಶೋಕ ಕಲಾಲ್, ಅಂಬಾದಾಸ್ ಜಿತ್ರಿ, ಮಲ್ಲಿಕಾರ್ಜುನ ಅರುಣಿ, ಈಶ್ವರ ರಾಠೋಡ ಗುರುಮಿಠಕಲ್ ತಾಲೂಕ ಪಂಚಾಯತ್ ಅಧ್ಯಕ್ಷರು, ಮಲ್ಲು ಗೌಡು ಹೊಸಳ್ಳಿ, ಶಾಂತು ಸಾಹುಕಾರ್ ಕೊಟಗೇರಾ, ನಾಗರಾಜ ದೆಶಮುಖ, ನಾಗರೆಡ್ಡಿ ಕಣೆಕಲ್, ಶಿವು ಸೈದಾಪೂರ, ಜಲ್ಲಪ್ಪ ಚಿಂತನಹಳ್ಳಿ, ಅಲ್ಲಾವುದ್ದೀನ್ ನಿಲಹಳ್ಳಿ, ಗೋಪಲ ಖಾನಳ್ಳಿ ತಾಂಡ, ವಿಕ್ರಮ ಬಸವಂತಪೂರ ತಾಂಡ, ವಿನಯ ಕಮ್ಮಟಿಗಿ ಸುರುಪೂರ, ಶರಣು ಹಿರೆಮಠ ಕುಡ್ಲೂರು, ಎಸ್.ಬಿ.ಟೀಮ್ ಹಾಗೂ ಇನ್ನಿತರರು ಇದ್ದರು ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿವರ್ಗದವರಾದ ಶ್ರೀಮತಿ ಶೈಲಜಾ ಶರಣಭೂಪಲರೆಡ್ಡಿ, ಶ್ರೀ ಚೇತನಕುಮಾರ, ಶ್ರೀ ಶ್ರೀನಿವಾಸ, ಶ್ರೀಮತಿ ತ್ರಿವೇಣಿ ಇವರುಗಳು ಕೂಡಾ ಬಾಗಿಯಾಗಿದ್ದರು.