ಮಾಜಿ ಪೈಲ್ವಾನರ ಸ್ಮರಣಾರ್ಥ ಜಂಗಿ ಕುಸ್ತಿ.
 ಕೂಡ್ಲಿಗಿ ಅಖಾಡದಲ್ಲಿ  ಜಗಜಟ್ಟಿಗಳ ಕಾಳಗ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.15 :- ಪಟ್ಟಣದಲ್ಲಿ  ಮಾಜಿ ಪೈಲ್ವಾನರ ಸ್ಮರಣಾರ್ಥವಾಗಿ ಜೈ ಕಿಸಾನ್, ಜೈ ಪೈಲ್ವಾನ್ ಗೆಳೆಯರ ಬಳಗದಿಂದ ಶ್ರೀಸೊಲ್ಲಮ್ಮದೇವಿಯ ಮರ ಆವರಣದಲ್ಲಿ ಭಾನುವಾರ ನಡೆದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಯಲ್ಲಿ ಜಗಜಟ್ಟಿಗಳ ಕಾಳಗ ನೋಡುಗರ ಮೈನವಿರೇಳಿಸಿತು.
ಈ ಕುಸ್ತಿ ಪಂದ್ಯಾವಳಿಯಲ್ಲಿ ಸ್ಥಳೀಯ ಪೈಲ್ವಾನರು ಸೇರಿ ಬೆಳಗಾವಿ, ಶಿವಮೊಗ್ಗ, ದಾವಣಗೆರೆ, ಹರಪನಹಳ್ಳಿ, ಲಕ್ಕುಂಡಿ, ಬಾಗಲಕೋಟೆ, ವಿಜಯಪುರ ಹಾಗೂ ಮಹಾರಾಷ್ಟ್ರದ ಸಾಂಗ್ಲಿಯ ಜಟ್ಟಿಗಳು ಅಖಾಡದಲ್ಲಿ ಮದಗಜಗಳಂತೆ ಸೆಣಸಾಟ ನಡೆಸಿದರು. ಅಲ್ಲದೆ, ಮಹಿಳಾ ಕುಸ್ತಿಪಟುಗಳು ಸಹ ಜಂಗಿ ಕುಸ್ತಿಯ ಪಟ್ಟುಗಳನ್ನು ಪ್ರಯೋಗಿಸುವ ಮೂಲಕ ತಮ್ಮ ಪರಾಕ್ರಮ ಮೆರೆದರು.
ಕುಸ್ತಿ ಪಂದ್ಯಾವಳಿಗೂ ಮುನ್ನ ಪಟ್ಟಣದ ಕೊತ್ತಲ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪೈಲ್ವಾನರು ಹಾಗೂ ಆಯೋಜಕರು ಅದ್ದೂರಿ ಮೆರವಣಿಗೆಯ ಮೂಲಕ ಆಖಾಡದ ಬಳಿಗೆ ಆಗಮಿಸಿದರು. ಕುಸ್ತಿ ಪೈಲ್ವಾನರಿಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾ್ ಡಾ.ಎನ್.ಟಿ.ಶ್ರೀನಿವಾಸ್, ಲೋಕೇಶ್ ವಿ.ನಾಯಕ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ನಾರಿ ಶ್ರೀನಿವಾಸ್, ಬಿಜೆಪಿ ಟಿಕೆಟ್ ಆಕಾಂಕ್ಷಿ ಬಂಗಾರು ಹನುಮಂತು ಸೇರಿ ಅನೇಕ ಮುಖಂಡರು ಅಖಾಡದಲ್ಲಿ ಇಳಿದು ಕುಸ್ತಿಪಟುಗಳಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿದರು.
ಈ ಪಂದ್ಯಾವಳಿಯ ನಿರ್ಣಾಯಕರಾಗಿ ಸೋಮಯ್ಯನವರ ನಾಗರಾಜ್’, ಹುಸೇನ್ ಸಾಬ್,ಮಾಳಗಿ ನಾಗರಾಜ,ಅಂಜಿ ಪುಟ್ಟಿ, ಮಲ್ಲಾಪುರದ ನಾಗರಾಜ,ಹತಾಮನ್ ಸಾಬ್,ಸಾಲುಮನೆ ನಾಗರಾಜ
ಡಾಣಿ ಕೊಟ್ರೇಶಣ್ಣ,ಹರಪನಹಳ್ಳಿ ಶಿವಣ್ಣ ಇತರೆ  ಹಿರಿಯ ನಿರ್ಣಾಯಕರ ಉಪಸ್ಥಿತಿಯಲ್ಲಿ ಕುಸ್ತಿ ಪಟುಗಳ ನಿರ್ಣಾಯಕ ಫಲಿತಾಂಶದಂತೆ
ವಿಜೇತರಾದವರು :- ಸಂಗಮೇಶ್ ಬಿರಾದರ್ ಪ್ರಥಮ, ಪ್ರದೀಪ್ ಸಂಜಯ್ ಠಾಕೂರ್ ದ್ವಿತೀಯ,
 ಶಿವಾನಂದ ಪೂಜಾರಿ ಬೆಳಗಾವಿ ಪ್ರಥಮ
ಕಿರಣ್ ಸಿಂಧೆ ಸಾಂಗ್ಲಿ ದ್ವಿತೀಯ, ಹೊಳೆ ಬಸು ದಾವಣಗೆರೆ ಪ್ರಥಮ, ಭಾವೆ ಸಾವಂತ್ ದ್ವಿತೀಯ
 ರವಿ ಕೆಂಪಣ್ಣ ಬಾಗಲಕೋಟೆ ಪ್ರಥಮ, ಸಂಗ್ರಾಮ್ ಸಾಂಗ್ಲಿ ದ್ವಿತೀಯ, ಸಂಜಯ್ ರಾಣ ಶಿವಮೊಗ್ಗ ಪ್ರಥಮ, ಗಜ್ಜು ದ್ವಿತೀಯ,  ತಿಪ್ಪೇಶ್ ಹರಪನಹಳ್ಳಿ ಪ್ರಥಮ, ಶ್ರೀಕಾಂತ್ ಸಾಂಗ್ಲಿ ದ್ವಿತೀಯ, ಅಂಜನಿ ಕೂಡ್ಲಿಗಿ ಪ್ರಥಮ, ಪರಶುರಾಮ ಹರಪನಹಳ್ಳಿ ದ್ವಿತೀಯ, ಕೆಂಪಣ್ಣ ತೋರನಹಳ್ಳಿ
ಇರ್ಷಾದ್ ಹರಪನಹಳ್ಳಿ ಡ್ರಾ ಮಾಡಲಾಗಿದೆ.
ತಿಪ್ಪೇಸ್ವಾಮಿ ಕೂಡ್ಲಿಗಿ ಪ್ರಥಮ, ದಾನೇಶ್ ಲಕ್ಕುಂಡಿ ದ್ವಿತೀಯ, ಅರುಣ ಪಾಟೀಲ್ ಬಾಗಲಕೋಟೆ
ಗಿರೀಶ್ ಬೆಳಗಾವ್ ಡ್ರಾ ಮಾಡಲಾಗಿದೆ. ರಾಜು ಗಂಡಿವಾಡ, ಶಮ್ಮು ಹರಪನಹಳ್ಳಿ ಡ್ರಾ ಮಾಡಲಾಗಿದೆ,  ರೂಪೇಶ್ ಕುಬ್ಚಿ
ಹಾಲೇಶ್ ಹರಬನಹಳ್ಳಿ ಡ್ರಾ ಮಾಡಲಾಗಿದೆ.
ಶಿವಾನಂದ ತಳವಾರ್ ಬಾಗಲಕೋಟೆ ಪ್ರಥಮ,
ದಯಾನಂದ್ ಬೆಳಗಾಂ ದ್ವಿತೀಯ,  ಶರತ್ ಹರಪನಹಳ್ಳಿ ಪ್ರಥಮ, ಶರವಣ ಬಾಗಲಕೋಟೆ ದ್ವಿತೀಯ,  ಕೃಷ್ಣ ಬಾಗಲಕೋಟೆ ಪ್ರಥಮ,
ಅಮೀರ್ ಹರಪನಹಳ್ಳಿ ದ್ವಿತೀಯ, ಸೋಮಶೇಖರ ಚೋರ್ನರ್ ಪ್ರಥಮ, ಮಂಜುನಾಥ ಹಾವೇರಿ ದ್ವಿತೀಯ, ಆದಿಲ್ ಕೂಡ್ಲಿಗಿ ಪ್ರಥಮ,
ಗೌಸ್ ಮರಿಯಮ್ಮನಹಳ್ಳಿ ದ್ವಿತೀಯ,
ಮಹಿಳಾಕುಸ್ತಿಪಟುಗಳ ಕಾಳಗದಲ್ಲಿ ವಿಜೇತರು : ಪ್ರೇಮ ಮತ್ತು ಶಾಹಿರ ಡ್ರಾ ಮಾಡಲಾಗಿದೆ.
ಸೋನಿಯಾ ಬಿಜಾಪುರ್ ಭುವನೇಶ್ವರಿ ಕಣಿವೆ ಡ್ರಾ ಮಾಡಲಾಗಿದೆ.ರಾಧಿಕಾ ಪ್ರಥಮ, ಸಂಗೀತ ದ್ವಿತೀಯ, ವರಮಹಾಲಕ್ಷ್ಮಿ ಬೆಟಿಗೇರಿ ಪ್ರಥಮ,
ವೈಷ್ಣವಿ ಗದಗ್ ದ್ವಿತೀಯ,
ಆಯೋಜಕರು:-
*”ಜೈ ಕಿಸಾನ್ ಜೈ ಪೈಲ್ವಾನ್ ಗೆಳೆಯರ ಬಳಗ ಕೂಡ್ಲಿಗಿ ಆಯೋಜಕರಾಗಿ ನಿರ್ಕಲಿ, ಸೋಮಣ್ಣ ನಾಗರಾಜ್, ಮಲ್ಲಾಪುರದ ನಾಗರಾಜ್, ಕುಸ್ತಿ ದುರ್ಗಣ್ಣ, ರಾಘವೇಂದ್ರ,  ಪ್ರದೀಪ್ ತಳವಾರ್,ರಾಘವೇಂದ್ರ,  ಮುನ್ನ,  ಮಂಜುನಾಥ,
ಭೀಮ, ಗುರುರಾಜ್,  ವಿನೋದ, ಮಹೇಶ, ರಮೇಶ ಬೆಟ್ಟಪ್ಪ, ಅಂಜನಿ,  ತಿಪ್ಪೇಸ್ವಾಮಿ, ಜಿಂಕಲ್ ನವೀನ್
ಹಾಗೂ ವಿವೇಕಾನಂದ ಉಪನ್ಯಾಸಕರು ಆಯೋಜಕರಾಗಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿದರು.