ಮಾಜಿ ದೇವದಾಸಿಯರಿಗೆ ನೆರವು’

ಕೊಟ್ಟೂರು ಮಾ 30: ಸಾಮಾಜಿಕ ಅನಿಷ್ಟ ಪದ್ಧತಿ­ಯಾದ ದೇವದಾಸಿ ಪದ್ಧತಿಯುನ್ನು ಇಂದು ಸಂಪೂರ್ಣ ನಿಷೇಧಿಸಲಾಗಿದೆ, ಮೊದಲಿದ್ದ ದೇವದಾಸಿಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸರ್ಕಾರವು ಹೆಚ್ಚಿನ ನೆರವು ನೀಡಿದೆ. ಇದರ ಲಾಭ ಪಡೆದುಕೊಳ್ಳಬೇಕು’ ಪಿಎಂ.ಈಶ್ವರಯ್ಯಹೇಳಿದರು.
ಪಟ್ಟಣದ ಭೂತ ಭುಜಂಗ ಮಠದಲ್ಲಿ ಕರ್ನಾಟಕ ಮಹಿಳಾ ಅಭಿವೃದ್ದಿ ನಿಗಮ, ದೇವದಾಸಿ ಪುರ್ನವಸತಿ ಯೋಜನೆ ಬಳ್ಳಾರಿ ಹಮ್ಮಿಕೊಂಡ ‘ಮಾಜಿ ದೇವದಾಸಿ ಮಹಿಳೆಯರಿಗೆ ಕಾನೂನು’ ಅರಿವು ಕಾರ್ಯಕ್ರಮದಲ್ಲಿ ಮಾತ ನಾಡಿದರು. ರುದ್ರೇಶ ಸೇರಿದಂತೆ ಆನೇಕರಿದ್ದರು