ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬೇಗ ಗುಣಮುಖರಾಗಲಿ ಎಂದು ಆಂಜನೇಯ ನಿಗೆ ವಿಶೇಷ ಪೂಜೆ, ಅನ್ನಸಂತರ್ಪಣೆ

ಅಥಣಿ:ಸೆ.11: ಇತ್ತೀಚೆಗೆ ಕಾರು ಅಪಘಾತದಲ್ಲಿ ಗಾಯಗೊಂಡ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಶೀಘ್ರ ಗುಣಮುಖರಾಗಲಿ ಎಂದು ತಾಲೂಕಿನ ಇತಿಹಾಸ ಪ್ರಸಿದ್ದ ಅವರಖೊಡ ಗ್ರಾಮದ ಸ್ವಯಂಭು ಮಾರುತಿ ದೇವಸ್ಥಾನದಲ್ಲಿ ಮುಖಂಡ ಪ್ರಶಾಂತ ಅಕ್ಕೋಳ ಅವರು ವಿಶೇಷ ಪೂಜೆ ಮಾಡಿಸಿ, ಭಕ್ತರಿಗೆ ಅನ್ನಸಂತರ್ಪಣೆ ಮಾಡಿ ಗಮನ ಸೆಳೆದಿದ್ದಾರೆ.
ಕಾರು ಅಪಘಾತದಿಂದ ಚೇತರಿಸಿಕೊಳ್ಳುತ್ತಿರುವ ಅಥಣಿ ಕ್ಷೇತ್ರದ ಮಾಜಿ ಉಪಮುಖ್ಯಮಂತ್ರಿ ವಿಧಾನ ಪರಿಷತ್ ಸದಸ್ಯ, ಲಕ್ಷ್ಮಣ್ ಸವದಿ ಅವರು ಬೇಗ ಗುಣಮುಖರಾಗಿ ಜನರ ಸೇವೆ ಮಾಡಬೇಕೆಂದು ಪ್ರಾರ್ಥಿಸಿ ಇಂದು ಅವರಖೊಡ ಗ್ರಾಮದ ಸ್ವಯಂಭು ಮಾರುತಿ ದೇವಸ್ಥಾನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇದೇ ವೇಳೆ ಮುಖಂಡ ಪ್ರಶಾಂತ ಅಕ್ಕೋಳ ಮಾತನಾಡಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ನಮ್ಮ ಕ್ಷೇತ್ರದ ಜನಪ್ರಿಯ ನಾಯಕರು ಬಡವರ ಹಿತಚಿಂತಕರು ಕ್ಷೇತ್ರದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಲಕ್ಷ್ಮಣ ಸವದಿ ಅವರು ಆದಷ್ಟು ಬೇಗ ಚೇತರಿಸಿಕೊಂಡು ಇನ್ನೂ ಹೆಚ್ಚಾಗಿ ಜನರ ಸೇವೆ ಮಾಡುವಂತಾಗಲಿ. ಅವರ ಸಕಲ ವಿಘ್ನಗಳು ತೊಲಗಿ ಅವರಿಗೆ ರಾಜಕೀಯದಲ್ಲಿ ಯಶಸ್ಸು ಹಾಗೂ ಇನ್ನೂ ಉನ್ನತ ಸ್ಥಾನ ಮಾನ ಸಿಗುವಂತಾಗಲಿ ಆ ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ಈ ವೇಳೆ ಯುವ ಮುಖಂಡ ಚಿದಾನಂದ ಸವದಿ, ಸುಮೀತ್ ಸವದಿ, ಪ್ರದೀಪ್ ನಂದಗಾಂವ, ಗ್ರಾಮಸ್ಥರಾದ ಧಶರಥ ಅಂಬಿ, ಅಶೋಕ್ ಲಡಗಿ, ಶಂಕರ ನಾಯಕ, ಮಲ್ಲಪ್ಪ ದರೂರ, ರಾಯಗೊಂಡ ಪಾಟೀಲ, ಈರನಗೌಡ ಪಾಟೀಲ, ಪಾಂಡು ನಿಕ್ಕಂ, ಪ್ರಕಾಶ್ ಅಕ್ಕೋಳ, ಧಶರಥ ಕಾಂಬಳೆ, ಮರೇಯಪ್ಪ ಲೊಕುರ ಸೇರಿದಂತೆ ಅವರಖೋಡ ಗ್ರಾಮಸ್ಥರು ಹಾಗೂ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.