ಮಾಜಿ ಅಧ್ಯಕ್ಷರಿಗೆ ವಾರ್ಷಿಕ 1.6 ಕೋಟಿ ಪಿಂಚಣಿ

ವಾಷಿಂಗ್ಟನ್ ,. ನ.8- ಅಮೇರಿಕಾದ ಮಾಜಿ ಅಧ್ಯಕ್ಷರಿಗೆ ವಾರ್ಷಿಕ 2 ಲಕ್ಷದ 19ಸಾವಿರದ 200 ಡಾಲರ್‌ ಅಥವಾ ಸುಮಾರು 1.6 ಕೋಟಿ ರೂ. ಪಿಂಚಣಿ ಸಿಗಲಿದೆ.

ಜನವರಿ 20 ಬಳಿಕ ಮಾಜಿ ಆಗುವ ಹಾಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರಿಗೂ, ಈ ಪಿಂಚಣಿ ಅನಗವಯವಾಗಲಿದೆ.

ಪ್ರತಿ ವರ್ಷ ಪಿಂಚಣಿ ಮೊತ್ತವನ್ನು ಪರಿಷ್ಕರಿಸಲಾಗುತ್ತಿದರ. ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಕೂಡಲೇ ಪಿಂಚಣಿ ಪಾವತಿಸುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ.

ಮಾಜಿ ಅಧ್ಯಕ್ಷರಲ್ಲದೆ ಅವರ ಪತ್ನಿಗೂ ವಾರ್ಷಿಕ 20,000 ಡಾಲರ್ ಪಿಂಚಣಿ ಸಿಗಲಿದ್ದುಖಜಾನೆಯ ಕಾರ್ಯದರ್ಶಿ ಪಿಂಚಣಿ ಮಂಜೂರು ಮಾಡುತ್ತಾರೆ.

ಅಮೇರಿಕಾದಲ್ಲಿ ಆರಂಭದಲ್ಲಿ ಮಾಜಿ ಅಧ್ಯಕ್ಷರಿಗೆ ಯಾವುದೇ ಸೌಲಭ್ಯಗಳಿರಲಿಲ್ಲ. ಆದರೆ, 1912 ರಲ್ಲಿ, ಆಂಡ್ರ್ಯೂ ಕಾರ್ನೆಗಿ ಎಂಬ ಉದ್ಯಮಿ ಮಾಜಿ ಅಧ್ಯಕ್ಷರುಗಳಿಗೆ ಆರ್ಥಿಕ ಸಹಾಯ ಕಲ್ಪಿಸಲು ಆರಂಭಿಸಿದರು.

ಆರಂಭದಲ್ಲಿ ವರ್ಷಕ್ಕೆ 25,000 ಡಾಲರ್ ಪಿಂಚಣಿ ಪಿಂಚಣಿ ಸೌಲಭ್ಯವಿತ್ತು ನಂತರ ಸರ್ಕಾರ 1958 ರಲ್ಲಿ ‘ಫಾರ್ಮರ್ ಪ್ರೆಸಿಡೆಂಟ್ ಆಕ್ಟ್’ ಜಾರಿಗೆ ತಂದ ಬಳಿಕ, ಮಾಜಿ ಅಧ್ಯಕ್ಷರಿಗೆ ಪಿಂಚಣಿ, ಸಿಬ್ಬಂದಿ ವೇತನ, ಆರೋಗ್ಯ ವಿಮೆಯೊಂದಿಗೆ, ರಹಸ್ಯ ಭದ್ರತೆ ಒದಗಿಸುತ್ತದೆ.