ಮಾಜರ್ ಆಡಿಯೋ ಬಿಡುಗಡೆ

ಹೊಸಬರೇ ಹೆಚ್ಚಾಗಿ ಸೇರಿಕೊಂಡು ನಿರ್ಮಿಸಿ ನಿರ್ದೇಶನ ಮಾಡಿರುವ “ಮಜರ್ ” ಆಡಿಯೋ ಬಿಡುಗಡೆಯಾಗಿದೆ. ಬಿಜೆಪಿ ಮುಖಂಡ ಹಾಗು  ಸಚಿವ ಗೋಪಾಲಯ್ಯ  ಹಾಡು ಬಿಡುಗಡೆ ಮಾಡಿ ಶುಭ ಹಾರೈಸಿದರು.

ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ ಹರೀಶ್, ನಟ ಶ್ರೀನಗರ ಕಿಟ್ಟಿ, ವಿತರಕ ವೆಂಕಟ್ ಗೌಡ  ಸೇರಿ ಹಲವರು ಚಿತ್ರಕ್ಕೆ ಒಳ್ಳೆಯದಾಗಲಿ ಎಂದರು.

ಈ ವೇಳೆ ಮಾತಿಗಿಳಿದ ನಿರ್ಮಾಪಕ ಡಾ. ಎಂ.ಮುರುಗನಂದನ್,  ಚಿಕ್ಕ ವಯಸ್ಸಿನಿಂದ ಚಿತ್ರ ಮಾಡುವ ಆಸೆ ಇತ್ತು. ಇಲ್ಲೇ ದುಡಿದು, ಇಲ್ಲೇ  ಚಿತ್ರ ಮಾಡುವ ಆಸೆ ಈಗ ಈಡೇರಿದೆ. ಹೊಸತನದ ಕಥೆ ಚಿತ್ರದಲ್ಲಿದೆ ಎಲ್ಲರ ಸಹಕಾರ ಬೆಂಬಲ‌ಬೇಕು ಎಂದು ಕೇಳಿಕೊಂಡರು.

ನಿರ್ದೇಶಕ ಲೋಕಲ್ ಲೋಕಿ, ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯದ ಸುತ್ತ ನಡೆಯುವ ಕಥಾ ಹಂದರ ಹೊಂದಿರುವ ಚಿತ್ರ. ಅತ್ಯಾಚಾರಿಗಳಿಗೆ ಶಿಕ್ಷೆ ಘೋರವಾಗಬೇಕು ಎನ್ನುವುದನ್ನು ಚಿತ್ರದ ಮೂಲಕ‌ ಹೇಳುವ ಪ್ರಯತ್ನ ಮಾಡಲಾಗಿದೆ ಎಂದರು.

ಚಿತ್ರೀಕರಣ ಸಮಯದಲ್ಲಿ ಯಾರಿಗಾದರೂ ಬೇಜಾರಾಗಿದ್ರೆ ಕ್ಷಮಿಸಿ,ಚಿತ್ರ ಚೆನ್ನಾಗಿ ಮೂಡಿ ಬರಲಿ ಎನ್ನುವುದು ನಮ್ಮ ಉದ್ದೇಶವಾಗಿತ್ತು ಎಂದರು. ನಾಯಕರಲ್ಲಿ ಒಬ್ಬರಾದ  ಅರ್ಜುನ್ ನಾಲ್ಕು ವರ್ಷದ ಚಿತ್ರ. ನಿರ್ಮಾಪಕರು ಸಿಕ್ಕಾಗ ಚಿತ್ರ. ಒಂದೂವರೆ ವರ್ಷದಲ್ಲಿ 35 ದಿನದಲ್ಲಿ ಚಿತ್ರೀಕರಣ ಮಾಡಲಾಗಿದೆ.ಮುದ್ದಾದ ಲವ್ ಸ್ಟೋರಿ ಇರುವ ಚಿತ್ರ ಸಹಕಾರವಿರಲಿ ಎಂದರು.

ವಿತರಕ ವೆಂಕಟ್ ಗೌಡ ಚಿತ್ರ ವಿತರಣೆ ಮಾಡಲು ಮುಂದಾಗಿದ್ದಾರೆ. ರಂಜಿತ್, ಡಾನ್ಯರ್, ನೃತ್ಯ ಸಂಯೋಜಕಿ ಗೀತಾ , ಸಂಗೀತ ನಿರ್ದೇಶಕ ಎ.ಟಿ ರವೀಶ್ ಸೇರಿದಂತೆ ಇಡೀ ತಂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.