
ಭಾಲ್ಕಿ:ಫೆ.27: ‘ಪಟ್ಟಣದಲ್ಲಿ ಮಡಿವಾಳ ಮಾಚಿದೇವರ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ಅನುದಾನ ನೀಡುವುದಾಗಿ’ ಶಾಸಕ ಈಶ್ವರ ಖಂಡ್ರೆ ಭರವಸೆ ನೀಡಿದರು.
ಪಟ್ಟಣದ ಬೊಮ್ಮಗೊಂಡೇಶ್ವರ ವೃತ್ತ ಸಮೀಪದ ಮಾಚಿದೇವ ಮಡಿವಾಳ ಸಂಘದ ವತಿಯಿಂದ ಭಾನುವಾರ ನಡೆದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಟ್ಟಣದಲ್ಲಿ ಈಗಿರುವ ಮಡಿವಾಳ ಸಮುದಾಯ ಭವನ ಚಿಕ್ಕದು ಮತ್ತು ಶಿಥಿಲಾವಸ್ಥೆಗೆ ತಲುಪಿದ್ದು, ಹಾಗಾಗಿ ಹೊಸದಾಗಿ ಭವನ ನಿರ್ಮಾಣ ಆಗಬೇಕು ಎನ್ನುವುದು ಸಮುದಾಯದ ಜನರ ಬೇಡಿಕೆ ಆಗಿದೆ. ಅದಕ್ಕೆ ಸ್ಪಂದಿಸುತ್ತೇನೆ ಎಂದು ತಿಳಿಸಿದರು.
ಕಾಯಕ ನಿಷ್ಠೆಯ ಮೂಲಕ ಸಮಾಜದಲ್ಲಿ ಅರಿವು ಉಂಟುಮಾಡಿದ ಮಡಿವಾಳ ಮಾಚಿದೇವ ಬಿಜ್ಜಳನ ಆಸ್ಥಾನದಲ್ಲಿ ಶರಣರ ಮೇಲೆ ದಾಳಿ ನಡೆದಾಗ ಶರಣರು ರಚಿಸಿದ ವಚನಗಳನ್ನು ಗಂಟು ಕಟ್ಟಿ ಹೆಗಲಮೇಲೆ ಹೊತ್ತು ಸಂರಕ್ಷಿಸಿದರು. ಇಂದು ವಚನ ಸಾಹಿತ್ಯ ಉಳಿಯಲು ಕಾರಣೀಭೂತರಾದರು. ಅವರ ಚಿಂತನೆ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ತಿಳಿಸಿದರು.
ಯುವ ಮುಖಂಡ ಸಾಗರ ಖಂಡ್ರೆ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಎಸ್.ಜಿ.ಹುಗ್ಗೆ ಉಪನ್ಯಾಸ ಮಂಡಿಸಿದರು.
ಮಡಿವಾಳ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ದಿಲೀಪ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ಹಿರೇಮಠ ಸಂಸ್ಥಾನದ ಮಹಾಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷ ಅನಿಲ್ ಸುಂಟೆ, ಮಾಜಿ ಅಧ್ಯಕ್ಷ ಬಸವರಾಜ ವಂಕೆ, ನಗರಸಭೆ ಸದಸ್ಯ ಡಿಗಂಬರ ಮಡಿವಾಳ, ಮಡಿವಾಳ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಮಡಿವಾಳ, ಮಾಜಿ ಅಧ್ಯಕ್ಷ ಧನರಾಜ ಮಡಿವಾಳ, ಶಿವಕುಮಾರ ಕಂದಗೂಳ, ಸುಧೀರ ಮಡಿವಾಳ, ಬಸವರಾಜ ಮಡಿವಾಳ, ಗಣಪತಿ ಸಸ್ತಾಪೂರೆ, ವೀರಶೆಟ್ಟಿ ಮಡಿವಾಳ, ಶರಣಪ್ಪ ಮಡಿವಾಳ, ವೈಜಿನಾಥ ಮಡಿವಾಳ, ಸಂತೋಷ ಮಡಿವಾಳ, ಪ್ರಭು ಮಡಿವಾಳ, ಶಿವು ಮಡಿವಾಳ, ಸದಾನಂದ ಮಡಿವಾಳ, ಸಹಾದೇವ ಮಡಿವಾಳ, ವಿಜಯಕುಮಾರ ಮಡಿವಾಳ, ಗುಂಡಪ್ಪ ಮಡಿವಾಳ, ಸಂದೀಪ ಮಡಿವಾಳ, ವಿಜಯಕುಮಾರ ಮಡಿವಾಳ ಹಾಗೂ ರಾಜಕುಮಾರ ಮಡಿವಾಳ ಇದ್ದರು.
ಬಸವರಾಜ ಮಡಿವಾಳ ಸ್ವಾಗತಿಸಿದರು. ಸತೀಶ ಮಡಿವಾಳ ನಿರೂಪಿಸಿದರು. ಬಸವರಾಜ ಮಡಿವಾಳ ಆನಂದವಾಡಿ ವಂದಿಸಿದರು.