ಮಾಚಿದೇವರ ಆದರ್ಶ ಎಲ್ಲರೂ ಪಾಲಿಸಲಿ

ದೇವದುರ್ಗ.ನ.೨೨-೧೨ನೇ ಶತಮಾನದ ಬಸವಾದಿ ಶರಣರಲ್ಲಿ ಒಬ್ಬರಾದ ಮಡಿವಾಳ ಮಾಚಿದೇವರು ತಮ್ಮ ಕಾಯದ ಮೂಲಕ ಗುರುತಿಸಿಕೊಂಡಿದ್ದಾರೆ. ನಮ್ಮ ಮನದ ಮೈಲಿಗೆಯನ್ನು ಶುದ್ಧಗೊಳಿಸುವುದನ್ನು ತಮ್ಮ ವಚನದ ಮೂಲಕ ತಿಳಿ ಹೇಳಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಶಂಕ್ರಪ್ಪ ಹೇಳಿದರು.
ತಾಲೂಕಿನ ಮದರಕಲ್ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀಮಡಿವಾಳ ಮಾಚಿದೇವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಸಮಾಜದಲ್ಲಿ ಬೇರೂರಿದ ಮೇಲು ಕೀಳು ಎನ್ನುವ ಭಾವನೆ ತೊಲಗಿಸಲು ಬಸವಾದಿ ಶರಣರು ಶ್ರಮಿಸಿದ್ದಾರೆ. ಬಸವಣ್ಣನವರ ವಚನ ಕ್ರಾಂತಿಯಲ್ಲಿ ಮಡಿವಾಳ ಮಾಚಿದೇವ ಒಬ್ಬರಾಗಿದ್ದಾರೆ. ಅವರ ಆದರ್ಶಗಳನ್ನು ಮಡಿವಾಳ ಸಮುದಾಯ ಮಾತ್ರವಲ್ಲ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸುಲ್ತಾನಪುರದ ಶ್ರೀಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಲ್ಲೂರಿನ ಶ್ರೀಶಂಭುಲಿಂಗ ಸ್ವಾಮೀಜಿ, ಜಾಗಟಗಲ್ ಬೆಟ್ಟದಯ್ಯಪ್ಪ ತಾತ, ಮರಡಿ ಸುಲ್ತಾನಪುರದ ಫಕೀರ್ ಸಾಹೇಬರು, ಮಲದಕಲ್ ನಾಗಯ್ಯತಾತ, ಸಮುದಾಯದ ಜಿಲ್ಲಾಧ್ಯಕ್ಷ ಜಿ.ಸುರೇಶ, ನರಸಪ್ಪ ಯಕ್ಲಾಸಪುರ, ಪರಶುರಾಮ್, ಜಿ.ವೆಂಕಟೇಶ ಇತರರಿದ್ದರು.

೨೧-ಡಿವಿಡಿ-೨