ಮಾಗಿ ಉಳಿಮೆಯ ಮೂಲಕ ಭೂಮಿಗೆ ಜೀವ ಕಳೆ ತುಂಬಲು ಸಂಕಷ್ಟದ ಕಸರತ್ತು

ಆಳಂದ:ಎ.27: ಮುಂದಿನ ಕೃಷಿ ಹಂಗಾಮಿಗಾಗಿ ವೈಜ್ಞಾನಿಕವಾಗಿ ಅತಿ ಮಹತ್ವ ಪಡೆದಿರುವ ಮಾಗಿ ಉಳುಮೆಗೆ ರೈತರು ಅನಿವಾರ್ಯವಾಗಿ ಭೂಮಿಗೆ ಜೀವ ಕಳೆ ತುಂಬಲು ಸಂಕಷ್ಟದೊಂದಿಗೆ ಕಸರತು ಆರಂಭಿಸಿದ್ದಾರೆ.

ತೊಗರಿ, ಜೋಳ, ಕಡಲೆ, ಗೋಧಿ ರಾಶಿಗಳು ಬಹುತೇಕ ಮುಗಿದು ಹೋಗಿವೆ. ಇನ್ನೇನು ಮುಂದಿನ ಹಂಗಾಮಿಗಾಗಿ ಭೂಮಿ ಹದಗೊಳ್ಳುವುದಕ್ಕಾಗಿ ಎರಡ್ಮೂರು ಬಾರಿ ಉಳುಮೆ ಮಾಡುವುದು ಸಾಮಾನ್ಯವಾಗಿದೆ.

ಆದರೆ ಇಂದಿನ ದುಬಾರಿಯ ಪರಿಸ್ಥಿತಿಯಲ್ಲಿ ಮಾಗಿ ಉಳುಮೆಯೂ ರೈತರಿಗೆ ಸಾಧನ ಸಲಕರಣಗಳ ದುಬಾರಿಯಿಂದಾಗಿ ಹಿಂದೆ ಮುಂದೆ ನೋಡುತ್ತಿದ್ದಾರೆ.

ಸರಣಿ ವರ್ಷಗಳಲ್ಲಿ ಬರಗಾಲ ಹಾಗೂ ಅತಿವೃಷ್ಟಿ ಅನಾವೃಷ್ಟಿಯಿಂದಾಗಿ ರೈತರಿಗೆ ಎದುರಾದ ಆರ್ಥಿಕ ಸಂಕಷದ ನಿವಾರಣೆಗೆ ಶೇ 60 ರಷ್ಟು ಮಂದಿ ತಮ್ಮ ಎತ್ತು, ದನ ಕರುಗಳನ್ನು ಮಾರಿಕೊಂಡಿದ್ದಾರೆ. ಹೀಗಾಗಿ ಸದ್ಯ ಮಾಗಿ ಉಳುಮೆಗೆ ಎತ್ತುಗಳ ಕೊರತೆ ಎದುರಾಗಿದ್ದು, ರೈತರು ಉಳುಮೆಗೆ ಇನ್ನೊಬ್ಬರ ಮೇಲೆ ಎತ್ತುಗಳಿಗಾಗಿ ಅವಲಂಭಿತರಾಗಿದ್ದಾರೆ. ಸಾಲದಕ್ಕೆ ಬಹುತೇಕ ಮಂದಿ ಟ್ಯ್ರಾಕ್ಟರ್‍ಗಳಿಂದ ಮಾಗಿ ಉಳುಮೆಗೆ ಕೈಗೊಳ್ಳತೊಡಗಿದ್ದಾರೆ.

ಏಪ್ರಿಲ್- ಮೇ ಈ ಎರಡು ತಿಂಗಳ ಕಳೆಯುವುದೇ ಹೇಗಪ್ಪ ಎನ್ನುತ್ತಲೇ ಇನ್ನೇನು ಜೂನ್ ಸಮೀಪಿಸಿ ಮಳೆ ಬಂದರೆ ಬಿತ್ತನೆ ಹೇಗಪ್ಪ ಮಾಡಬೇಕು. ಆದರೆ ಇದ್ದ ಎತ್ತುಗಳು ಹಿಂದಿನ ಬರಲಗಾದಿಂದಾಗಿ ಅನೆಕರು ಮಾರಿಕೊಂಡು ಕೈ ಖಾಲಿಯಾಗಿದೆ. ಬಿತ್ತನೆ ಮಾಡಲು ಮುಂದಾದರೆ ಬೀಜ, ಗೊಬ್ಬರ ಖರೀದಿಗೂ ಹಣವಿಲ್ಲ. ಸಕಾಲಕ್ಕೆ ಬ್ಯಾಂಕುಗಳು ಸಹ ಸಾಲ ನೀಡುವುದಿಲ್ಲ. ಸಾಹೂಕಾರಿ ಸಾಲಗಳು ಈ ಬಾರಿ ದೊರೆಯದ ಪರಿಸ್ಥಿತಿ ಉಂಟಾಗಿದ್ದು, ರೈತರಿಗೆ ಬರದ ಹಸಿವಿನ ನಡುವೆ ಮುಂಗಾರು ಹಂಗಾಮಿನ ಸಿದ್ಧತೆಯ ಹೋರಾಟ ಮಾಡುವ ಅನಿವಾರ್ಯತೆ ತಂದೊಡ್ಡಿದೆ. ಅನಿರ್ವಾವಾಗಿ ನಿತ್ಯ ಹೊತ್ತೆರುವ ಮುನ್ನ ಹಾಗೂ ಇಳಿ ಹೊತ್ತಿನ ನಡುವೆ ಕುಂಟಿಯನ್ನು (ಗಳ್ಯಾ), ಹೊಡೆದು ಭೂಮಿಯ ಸಾಗಮಾಡುವಲ್ಲಿ ಮಗ್ನವಾಗಿದ್ದಾರೆ.

ಮಾಗಿ ಉಳುಮೆ ಕೈಗೊಂಡರೆ ಮಾತ್ರ ಬಿತ್ತನೆಗೆ ಭೂಮಿ ಹದವಾಗಿ ಪರಿಣಮಿಸುವ ಹಿನ್ನೆಲೆಯಲ್ಲಿ ಮತ್ತು ಇದರಿಂದ ಬೆಳೆಗೆ ವೈಜ್ಞಾನಿಕವಾಗಿ ಲಾಭ ಆಗುವುದರಿಂದ ರೈತರು ಪ್ರತಿ ವರ್ಷ ಭೂಮಿಯನ್ನು ಕನಿಷ್ಟ ಎರಡ್ಮೂರು ಬಾರಿಯಾದರು ಉಳಿಮೆಯನ್ನು ಮಾಡಿ ಸ್ವಚ್ಛಗೊಳಿಸಿದಂತೆ ಬಹುತೇಕ ತಾಲೂಕಿನ ಎಲ್ಲ ರೈತಾಪಿಗಳು ಈ ಕಾರ್ಯವನ್ನು ಭರದಿಂದ ಕೈಗೊಳ್ಳತೊಡಗಿದ್ದಾರೆ.

ವಿಜ್ಞಾನಿಗಳ ಸಲಹೆ:

ಬೆಳೆ ಕಟಾವು ಆದ ಮೇಲೆ ಮಾಗಿ ಉಳಿಮೆ ನಿರಂತರವಾಗಿ ಮಾಡಬೇಕು. ಮೂರು ರೀತಿಯಲ್ಲಿ ಲಾಭವಾಗುತ್ತದೆ. ಹೊಲದಲ್ಲಿ ಬಿದ್ದ ಹುಲ್ಲು, ಕಸ ಕಣಿಕೆ ಮಣ್ಣಿನಲ್ಲಿ ಸಿಕ್ಕು ಮಳೆ ಬಂದಾಗ ಕೊಳೆತು ಗೊಬ್ಬರವಾಗಿ ಪರಿಣಮಿಸುತ್ತದೆ. ನೆಟೆ ರೋಗ ನಿರ್ವಹಣೆ, ಉಳುಮೆಯಿಂದ ಭೂಮಿ ನೀರು ಇಂಗಿಸಿಕೊಳ್ಳುತ್ತದೆ. ಅಲ್ಲದೆ, ರೋಗಾಣು ಜೀವಿಗಳು ಬಿಸಿಲಿಗೆ ಬಿದ್ದಾಗ ಪಕ್ಷಿಗಳು ತಿಂದ್ದುಹಾಕುತ್ತಿವೆ. ಅಲ್ಲದೆ, ಕೆಲವೊಂದು ಸತ್ತು ಹೋಗುವುದರಿಂದ ರೋಗವು ನಿರ್ವಹಣೆಯಾಗಿ ಬೆಳೆಗೆ ಅನುಕೂಲವಾಗುತ್ತದೆ.


ಅನ್ನದ ಜವಾಬ್ದಾರಿ ನಮ್ಮ ಮೇಲಿದೆ: ಎತ್ತುಗಳ ಅವಲಂಬಿತ ಕೃಷಿ ವರ್ಷ ಕಳೆದಂತೆ ಕ್ಷೀಣಿಸುತ್ತಿದ್ದರಿಂದ ಈಗ ಟ್ಯ್ರಾಕ್ಟರ್‍ಗಳ ಮೊರೆಹೋಗಿ ಭೂಮಿಯ ಸಾಗಮಾಡುತ್ತಿರುವುದು ಕೂಡ ಹೆಚ್ಚುತೊಡಗಿದೆ. ಬರ ಆವರಿಸಿದ್ದರಿಂದ ಅಷ್ಟಕ್ಕಷ್ಟೇ ಬೆಳೆ ಕೈಗೆ ಬಂದಿದೆ ಆದರೆ ಬೆಲೆ ಬರಲಿಲ,್ಲ ಖಾಸಗಿ ಮಾರುಕಟ್ಟೆಯಲ್ಲಿ ತೊಗರಿಗೆ ಬೆಲೆಯಿಲ್ಲ. ಸರ್ಕಾರದ ಖರೀದಿ ಸಹ ನಡೆಯುತ್ತಿಲ್ಲ. ರೈತರಿಗೆ ತಂದ ಸಾಲಮುಟ್ಟಿಸವಲ್ಲೇ ಸಾಕುಬೇಕಾಗುತ್ತಿದೆ. ಸದ್ಯ ಕೈಯಲ್ಲಿ ಕಾಸಿಲ್ಲ. ಸಾಲದ ಹೊರೆ ಸಾಮಾನ್ಯವಾಗಿದೆ. ಕೃಷಿ ಬಿಟ್ಟರೆ ಬೇರೆನು ಕೆಲಸ ಮಾಡುವಂತ್ತಿಲ್ಲ. ಅನ್ನದ ಉತ್ಪಾದನೆಯ ಜವಾಬ್ದಾರಿಯ ನಮ್ಮ ಮೇಲಿದೆ. ಇಂಥ ಕೆಲಸಕ್ಕೆ ಸರ್ಕಾರ ರೈತರ ಖಾತೆಗಳಿಗೆ ಸಬ್ಸಿಡಿ ಬದಲು ನೇರವಾಗಿ ಹಣ ಜಮಾಗೊಳಿಸಬೇಕು.-ಡಾ| ರಾಜು ತೆಗ್ಗಳ್ಳಿ ಕಲಬುರಗಿ ಕೃಷಿ ಸಂಶೋಧನ ಕೇಂದ್ರದ ಮುಖ್ಯಸ್ಥರು.


ಸಬ್ಸಿಡಿ ನಾಮಕೆವಾಸ್ತೆ ಬೇಡ: ಬಿತ್ತನೆ ಬೀಜವು ಕೃಷಿ ಇಲಾಖೆಗೆ ಪೂರೈಕೆ ಮಾಡುವಾಗ ಕಂಪನಿಗಳು ಬೆಲೆ ಹೆಚ್ಚಿಸಿ ಪೂರೈಕೆ ಮಾಡುತ್ತವೆ. ಕಂಪನಿಗಳಿಂದ ಖರೀದಿಸುವ ಬೀಗಳು ಕೃಷಿ ಇಲಾಖೆ ಶೇ 50ಷ್ಟು ಸಬ್ಸಡಿ ಕಡಿತ ಮಾಡಿ ವಿತರಣೆ ಮಾಡಿದ ಮೇಲೂ ಬೆಲೆಯಲ್ಲಿ ಹೊರಗಡೆ ಯಾವುದೇ ವ್ಯಾತಾಸವಾಗದೆ ಇರುವುದು ರೈತರಿಗೆ ಬೀಜಗಳು ಯಥಾಸ್ಥಿತಿಯಲ್ಲೇ ಖರೀದಿಸುಸಂತಾಗುತ್ತದೆ. ಇದು ಸರ್ಕಾರದ ಸಬ್ಸಿಡಿಯ ಯಾವ ಪರುಷಾರ್ಥಕ್ಕೆ. ಸರ್ಕಾರದ ನಿಜವಾದ ಸಬ್ಸಿಡಿ ವಿತರಣೆ ಕಾನ್ಸೆಪ್ಟ್ ಜಾರಿಯಾಗಬೇಕು.-ಗುರುಶರಣ ಪಾಟೀಲ ಕೊರಳ್ಳಿ, ಕೃಷಿಕ ಸಮಾಜದ ಅಧ್ಯಕ್ಷರು.