ಮಾಗಳ ಆಂಜನೇಯ ಸ್ವಾಮಿ ರಥೋತ್ಸವ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಏ.09 : ತಾಲೂಕಿನ ಮಾಗಳ ಗ್ರಾಮದಲ್ಲಿ ಆಂಜನೇಯ ಸ್ವಾಮಿ ರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು.
ಹನುಮ ಜಯಂತಿ ದಿನದಂದು ಜಾತ್ರೆಗೆ ಚಾಲನೆ ನೀಡಲಾಯಿತು. ಅಂದಿನಿಂದ ಪ್ರತಿದಿನ ಸ್ವಾಮಿಗೆ ನಿತ್ಯ ಎಲೆ ಪೂಜೆ, ಕುಂಕುಮ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜೆ ನಡೆದವು.
ದೇವಸ್ಥಾನದಿಂದ ಉತ್ಸವ ಮೂರ್ತಿಯನ್ನು ದೇವಸ್ಥಾನ ಧಾರ್ಮಿಕ ಪೂಜೆ ನೆರವೇರಿಸಿ ತೇರಿನಲ್ಲಿ ತಂದು ಪ್ರತಿಷ್ಠಾಪಿಸಲಾಯಿತು. ಧ್ವಜ ಹರಾಜು ಪ್ರಕ್ರಿಯೆ ಮುಗಿದ ಬಳಿಕ ತೇರಿಗೆ ಚಾಲನೆ ನೀಡಲಾಯಿತು. ವಿವಿಧ ಹೂವುಗಳಿಂದ ಅಲಂಕೃತಗೊಂಡ ತೇರನ್ನು ಭಕ್ತರು ರಾಮ್ ರಾಮ್ ಗೋವಿಂದಾ, ಗೋವಿಂದಾ… ಎಂಬ ಭಕ್ತರ ಜಯ ಘೋಷದೊಂದಿಗೆ ತೇರನ್ನು ಎಳೆದು ಪುನೀತರಾದರು. ಸಕಲ ವಾದ್ಯಗಳೊಂದಿಗೆ ಗ್ರಾಮದ ಮುಖ್ಯ ಬೀದಿಯ ಮೂಲಕ ಪಾದಗಟ್ಟೆಗೆ ತೆರಳಿ ಮತ್ತೆ ದೇವಸ್ಥಾನದ ಬಳಿ ತೇರನ್ನು ತಂದು ನಿಲ್ಲಿಸಲಾಗಿಯಿತು. ರಥೋತ್ಸವಕ್ಕೆ ನಂದಿಕೋಲು ಸಮಾಳ ಸೇರಿದಂತೆ ಮಂಗಳ ವಾದ್ಯಗಳು ಮೆರಗು ತಂದವು.
ಈ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಕೆ.ಸತ್ಯನಾರಾಯಣ ರೆಡ್ಡಿ, ಇಟಿಗಿ ಹೇಮರೆಡ್ಡಿ, ಗ್ರಾಪಂ ಅಧ್ಯಕ್ಷ ಎಸ್.ಆರ್.ಹಿರೇಗೌಡರ್, ಸದಸ್ಯ ಯಳಮಾಲಿ ವಿರುಪಣ್ಣ, ಎ.ಜಯಕೀರ್ತಿ, ಹುಲಕೋಟಿ ಬಸವರೆಡ್ಡಿ ಸೇರಿದಂತೆ ಇತರರಿದ್ದರು.
ಹೂವಿನಹಡಗಲಿ ತಾಲೂಕಿನ ಮಾಗಳ ಆಂಜನೇಯ ಸ್ವಾಮಿ ಜಾತ್ರೆ ಅಂಗವಾಗಿ ರಥೋತ್ಸವವು ಸಡಗರ ಸಂಭ್ರಮದಿಂದ ಜರುಗಿತು.