ಮಾಗನೂರು ಬಸಪ್ಪ  ಕಾಲೇಜಿನಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಜೂ.೧; ನಗರದ ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನಲ್ಲಿ “ವಿಶ್ವ ತಂಬಾಕು ರಹಿತ ದಿನ” ಆಚರಿಸಲಾಯಿತು. ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರಸಾದ್ ಎಸ್ ಬಂಗೇರ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಕಾಲೇಜಿನ ಜೀವಶಾಸ್ತ್ರ ವಿಭಾಗದ ಹಿರಿಯ ಉಪನ್ಯಾಸಕರಾದ ಶ್ರೀಮತಿ ಅನುರಾಧ ಎಸ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು.ಇಂಗ್ಲೀಷ್ ಉಪನ್ಯಾಸಕರಾದ ಶ್ರೀಮತಿ ಸುರೇಖಾ ಜಗದೀಶ್  ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ . ಎಸ್.ಆರ್ ಸಿದ್ದೇಶ್  ವಿದ್ಯಾರ್ಥಿಗಳಿಗೆ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳೆಲ್ಲರಿಗೂ ಪ್ರತಿಜ್ಞಾ ವಿಧಿ ಬೋಧಿಸಿದರು.ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಶ್ರೀಮತಿ ಅನುರಾಧ ಎಸ್  ವಿಶ್ವ ತಂಬಾಕು ರಹಿತ ದಿನ ಕುರಿತು ಮಾತನಾಡುತ್ತಾ, “ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸಬೇಕು ಎಂಬ ಧ್ಯೇಯ ವಾಕ್ಯದ” ಹಿನ್ನೆಲೆಯಲ್ಲಿ ತಂಬಾಕು ಉತ್ಪನ್ನಗಳಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳ ಗಮನ ಸೆಳೆದರು. ಹೊಗೆಸಹಿತವಾದ ತಂಬಾಕು ಉತ್ಪನ್ನಗಳಾದ ಬೀಡಿ ಸಿಗರೇಟ್ ಹುಕ್ಕಾ ಚುಟ್ಟಾದಂತಹ ತಂಬಾಕು ಉತ್ಪನ್ನಗಳು ಉಪಯೋಗಿಸುವವರಿಗೆ ಮಾತ್ರವಲ್ಲದೆ ಉಪಯೋಗಿಸದೆ ಇರುವವರಿಗೂ ಹಾನಿ ಉಂಟು ಮಾಡುತ್ತಿವೆ. ಈ ಉತ್ಪನ್ನಗಳಿಂದ ನಿಕೋಟಿನ್, ಕಾರ್ಬನ್ ಮಾನಾಕ್ಸೆöÊಡ್, ತಾರ್, ಬೆನ್‌ಜಿನ್, ಆರ್ಸೆನಿಕ್ ಮತ್ತು ಫಾರ್ಮಾಲ್ಡಿಹೈಡ್ ಗಳಂತಹ ವಿಷಪೂರಿತವಾದ ರಾಸಾಯನಿಕಗಳು ಬಿಡುಗಡೆಯಾಗುತ್ತಿದ್ದು, ನಮ್ಮ ಆರೊಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಮೊದಲು ನಾವುಗಳು ಈ ತಂಬಾಕು ಉತ್ಪನ್ನಗಳಿಗೆ ಬೆಂಕಿ ಹಚ್ಚುತ್ತೇವೆ. ನಂತರ ನಾವು ಬೆಂಕಿದ ಹಚ್ಚಿದ ಆ ಉತ್ಪನ್ನಗಳೇ ನಮ್ಮನ್ನು ಸುಟ್ಟು ಸರ್ವನಾಶ ಮಾಡಿಬಿಡುತ್ತವೆ ಎಂದು ಎಚ್ಚರಿಸಿದರು.