ಮಾಂಸ, ದಿನಸಿ ಖರೀದಿಗೆ ಮುಗಿಬಿದ್ದ ಜನ

ಕೋಲಾರ,ಏ.೨೬:ಕೋಲಾರದಲ್ಲಿ ನಿನ್ನೆ ಎರಡನೇ ದಿನವೂ ಸಹ ವೀಕೆಂಡ್ ಕರ್ಫ್ಯೂ ಮುಂದುವರೆದಿದ್ದು, ಭಾನುವಾರದ ಹಿನ್ನಲೆ ಬೆಳ್ಳಂ ಬೆಳಗ್ಗೆ ಜನರು ಮಾಂಸದಂಗಡಿ, ತರಕಾರಿ ಹಾಗೂ ದಿನಸಿ ಅಂಗಡಿಗಳಿಗೆ ಮುಗಿಬಿದ್ದಿದ್ದರು.
ಕೊರೊನಾ ಅಲೆ ಹೆಚ್ಚಾಗಿದ್ದರು ಸಹ ಕೋಲಾರ ನಗರದ ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ಕೊರೊನಾದ ಆತಂಕದ ನಡುವೆಯೂ ಮೈಮರೆತಿರುವ ಜನತೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಇಲ್ಲದೆ, ಮಾರುಕಟ್ಟೆಯಲ್ಲಿ ತರಕಾರಿ ಖರೀದಿ ಮಾಡಲು ಮುಗಿಬಿದ್ದಿದ್ದಾರು. ಅಲ್ಲದೆ ಇಂದು ಮಹಾವೀರ ಜಯಂತಿ ಹಿನ್ನಲೆ ಮಾಂಸ ಮಾರಾಟ ನಿಷೇಧ ಮಾಡಿದ್ದರೂ ಸಹ ಚಿಕನ್ ಮಟನ್ ಅಂಗಡಿಗಳ ಮುಂದೆ ಜನರು ಸಾಲುಗಟ್ಟಿ ನಿಂತಿದ್ದಾರು. ಇನ್ನು ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಅಧಿಕಾರಿಗಳಿಂದ ಮಾಂಸದಂಗಡಿಗಳನ್ನ ಮುಚ್ಚಿಸಲಾಯಿತು. ಅಲ್ಲದೆ ವೀಕೆಂಡ್ ಕರ್ಫ್ಯೂ ಹಿನ್ನಲೆ ಜಿಲ್ಲೆಯಾದ್ಯಂತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.