ಮಾಂಸದ ಗೂಡಂಗಡಿಗಳನ್ನು ತೆರವು ಗೊಳಿಸಲು ಜಯಕರ್ನಾಟಕ ಆಗ್ರಹ

ಗುರುಮಠಕಲ್:ಜು.17: ಪಟ್ಟಣದ ಕೆಎಚ್ ಡಿ ಸಿ ಕಾಲೋನಿ ಯಲ್ಲಿ ಆಕ್ರಮವಾಗಿ ಮಾಂಸದ ಗೂಡಗಂಡಿಗಳನ್ನು ನಿರ್ಮಿಸಿಕೊಂಡಿದ್ದು ಅವುಗಳನ್ನು ತೆರವು ಗಳಿಸಬೇಕೆಂದು ತಾಲ್ಲೂಕು ಜಯಕರ್ನಾಟಕ ಸಂಘಟನೆ ಅಧ್ಯಕ್ಷ ರಾದ ನಾಗೇಶ್ ಗದ್ದಿಗಿ ಆಗ್ರಹಿಸಿದರು. ಪಟ್ಟಣದ ಪುರಸಭೆ ಕಾರ್ಯಲಯದಲ್ಲಿ ಪುರಸಭೆ ಮುಖ್ಯಾಧಿಕಾರಿ ಭಾರತಿ ಅವರಿಗೆ ಶನಿವಾರ ಮನವಿಯನ್ನು ನೀಡಿ ಮಾತನಾಡಿದರು. ರಾಜರೋಷವಾಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಅದು ಕೂಡ ಪಶು ಸಂಗೋಪನೆ ಇಲಾಖೆ ವತಿಯಿಂದ ಕುರಿ ಮತ್ತು ಮೇಕೆಗಳ ಆರೋಗ್ಯ ತಪಾಸಣಾ ದೃಡೀಕರಣ ಪತ್ರ ಪಡೆಯದೆ ನಾಲ್ಕೈದು ದಿನಗಳ ರೋಗ ಗ್ರಸ್ತ ಮಾಂಸವನ್ನು ಎಗ್ಗಿಲದೆ ಮಾರಾಟ ಮಾಡುತ್ತಿದ್ದು ಇದರಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ದೂರಿದರು. ಪಟ್ಟಣದ ಮುಖ್ಯ ರಸ್ತೆಯ ಮೇಲೆ ಮಾಂಸದ ಕಸವನ್ನು ಹಾಕುತ್ತಿದ್ದು ಇದರಿಂದ ದುರ್ನಾತ ಹರಡಿ ಜನರು ಮೂಗು ಮುಚ್ಚಿಕೊಂಡು ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಕೆ ಎಚ್ ಡಿಸಿ ಬಡಾವಣೆಯನ್ನು ಸರಕಾರ ನೇಕಾರರಿಗೆ ಉಚಿತ ಮನೆಗಳನ್ನು ಕೊಟ್ಟಿತ್ತು ನೇಕಾರರ ಜೀವನ ಸಾಗಿಸಲು ವಸತಿ ಯೋಜನೆ ಇದೆ ನೇಕಾರ ವೃತ್ತಿ ಮಾಡಿಕೊಂಡು ಬದುಕು ಬೇಕು ಆದರೆ ಇಲ್ಲಿ ಮಾಂಸದ ಅಂಗಡಿಗಳನ್ನು ತೆರೆಯಲಾಗಿದೆ ಇವುಗಳ ಅಂಗಡಿಗಳ ಮುಂದೆ ವಾಹನಗಳನ್ನು ನಿಲ್ಲಿಸುವುದರಿಂದ ಸುಗಮ ರಸ್ತೆ ಸಂಚಾರಕ್ಕೆ ತೊಂದರೆ ಯಾಗುತ್ತಿತ್ತು ಕೂಡಲೇ ಆಕ್ರಮವಾಗಿ ನಿರ್ಮಿಸಿಗೊಂಡ ಗೂಡಗಂಡಿಗಳನ್ನು ತೆರವುಗೊಳಿಸಬೇಕು ಇಲ್ಲ ದಿದ್ದರೆ ಮುಂದಿನ ದಿನಗಳಲ್ಲಿ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು ಇದೆ ವೇಳೆ ಸಂಘದ ಗೌರವಾಧ್ಯಕ್ಷ ರಾದ ಮಲ್ಲಿಕಾರ್ಜುನ ಕಾಕಲವಾರ. ಪ್ರದಾನ ಕಾರ್ಯದರ್ಶಿ ಗೊಪಾಲ ಕ್ರುಷ್ಣ ಮೆಧಾ. ನಗರ ಘಟಕದ ಅಧ್ಯಕ್ಷ ರಾದ ಮಹೇಶ್ ಕಲಾಲ್. ಉಪಾಧ್ಯಕ್ಷ ಕಾಶಪ್ಪ ದೊರೆ. ಶಂಕರ್ ನಾಗವೋಳ್. ಭೀಮು ಸಣ್ಣ ನಾಗನೂರ. ಜಗ್ಗಪ್ಪ ನಕ್ಕ. ಆಯಾಜ್ ಅಲಿ ಸೇರಿದಂತೆ ಇತರರು ಇದ್ದರು.