ಮಾಂಸದಂಗಡಿ ಮೇಲೆ ಪಟ್ಟಣ ಪಂಚಾಯತ ಅಧಿಕಾರಿಗಳಿಂದ ದಾಳಿ

ಕಾಳಗಿ. ಏ.22 : ಪಟ್ಟಣದಲ್ಲಿ ಅನಧಿಕೃತವಾಗಿ ಹಾಗೂ ಸರ್ಕಾರದ ಆದೇಶ ಮೀರಿ ಕೊವಿಡ-19 ಸುರಕ್ಷತೆಯಿಲ್ಲದೆ ಮಾಂಸ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ಬುಧವಾರ ದಾಳಿ ನಡೆಸಿರುವ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಕಟ್ಟು ನಿಟ್ಟಿನಕ್ರಮ ಕೈಗೊಂಡು 5,000/-.ರೂ. ದಂಡವಿಧಿಸಿ, 15ಕೆಜಿ ಮಾಂಸ ವಶಪಡಿಸಿಕೊಂಡರು.
ಕಾನೂನು ಪರಿಪಾಲನೆ ಮಾಡದೆ ಅಂಗಡಿಗಳ ಪರವಾನಗಿಯಿಲ್ಲದೆ ಅಕ್ರಮ ಮದ್ಯ ಹಾಗೂ ಮೌಂಸದಂಗಡಿಗಳ ಹಾವಳಿ ಹೆಚ್ಚಾಗಿದ್ದು, ರಾಜಾರೋಷವಾಗಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯುವಲ್ಲಿ ಸಾರ್ವಜನಿಕರು, ಎಚ್ಚೆತ್ತುಕೊಂಡು, ಸರ್ಕಾರಕ್ಕೆ ಸಹಕರಿಸುವುದು ಜನತೆಯ ಜವಾಬ್ದಾರಿಯಾಗಿರುತ್ತದೆ ಎಂದು ಮುಖ್ಯಾಧಿಕಾರಿ ವೆಂಕಟೇಶ ತೆಲಂಗ ತಿಳಿಸಿದರು.
ಕಾಳಗಿ ಪಟ್ಟಣದ ಪಂಚಾಯತನ ಕಿರಿಯ ಆರೋಗ್ಯ ನಿರಿಕ್ಷಕ ಆನಂದ ಈ. ಕಾಶಿ ನೇತೃತ್ವದ ಸಿಬ್ಬಂದಿಗಳ ತಂಡ ಪಟ್ಟಣದಾಧ್ಯಂತ ಬುಧವಾರ ಮಿಂಚಿನ ಸಂಚಾರ ಕೈಗೊಂಡು, ಕೊವಿಡ್-19 ಜನಜಾಗೃತಿ ಮೂಡಿಸುವುದು ರೊಂದಿಗೆ ಕಾನೂನು ಪರಿಪಾಲನೆ ಮಾಡದ ಅಂಗಡಿಗಳ ಮಾಲಿಕರಿಗೆ ತಕ್ಕ ದಂಡ ವಿಧಿಸಿ ಎಚ್ಚರಿಕೆ ನೀಡಿದರು.
ಪಟ್ಟಣ ಪಂಚಾಯಿತಿ ಕಿರಿಯ ಆರೋಗ್ಯ ನಿರೀಕ್ಷಕ ಆನಂದ ಈ. ಕಾಶಿ, ದತ್ತಾತ್ರೇಯ ಕಲಾಲ, ಉದಯಕುಮಾರ ಸಿಂಗಶೆಟ್ಟಿ, ಅಪೀಲು ರಾಠೋಡ, ಹಿಂದೂ ಜಾಗೃತಿ ಸೇನೆಯ ಕಾಳಗಿ ನಗರಾಧ್ಯಕ್ಷ ಸುನೀಲ ರಾಜಾಪೂರ, ವಿಶಾಲ ಮೋಟಗಿ ಸೇರಿದಂತೆ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಇದ್ದರು.