ಮಾಂತ್ರಿಕ ಮೋಡಿಯ ದೃಶ್ಯ ಅನಾವರಣ

* ಚಿ.ಗೋ ರಮೇಶ್

ಕನ್ನಡ ಚಿತ್ರರಂಗದ ಮಾಂತ್ರಿಕ ಶಕ್ತಿಯ ಸರದಾರ ಕ್ರೇಜಿಸ್ಟಾರ್ ರವಿಚಂದ್ರನ್  ಈಗ ಡಾ. ರವಿಚಂದ್ರ ವಿ. ಆಗಿದ್ದು ಹೊಸ ಅವತಾರದಲ್ಲಿ ಗೆಲುವಿನ ಲಯ ಕಂಡುಕೊಳ್ಳಲು ಮುಂದಾಗಿದ್ದಾರೆ. ಡಾ. ರವಿಚಂದ್ರ ಅಭಿನಯದ  ಬಹು ನಿರೀಕ್ಷಿತ ಚಿತ್ರ “ದೃಶ್ಯ-2” ತೆರೆಗೆ ಬರಲು ಸಜ್ಜಾಗಿದ್ದು ಈ ತಿಂಗಳ ಎರಡನೇ ರಾಜ್ಯಾದ್ಯಂತ ತೆರೆಯ ಮೇಲೆ ದೃಶ್ಯ ಅನಾವರಣವಾಗಲಿದೆ.

ಏಳು ವರ್ಷಗಳ ಹಿಂದೆ ತೆರೆಗೆ ಬಂದು ಯಶಸ್ವಿಯಾಗಿದ್ದ ದೃಶ್ಯ ಇದೀಗ ಮತ್ತೊಮ್ಮೆ ಕುತೂಹಲಕಾರಿ ಸಂಗತಿಗಳೊಂದಿಗೆ ತೆರೆಗೆ ಬರಲಿದೆ. ರಾಜೇಂದ್ರ ಪೆÇನ್ನಪ್ಪ ಈ ಬಾರಿ ಸಿಕ್ಕಿಹಾಕಿಕೊಳ್ಳುತ್ತಾರಾ ಅಥವಾ ಪೆÇಲೀಸರಿಗೆ ಮಂಕು ಬೂದಿ ಎರಚುತ್ತಾರಾ ಎನ್ನುವುದು ಸದ್ಯಕ್ಕಿರುವ ಕುತೂಹಲ.

ರಾಜೇಂದ್ರ ಪೆÇನ್ನಪ್ಪ  ಮತ್ತು ಕುಟುಂಬದ ಸದಸ್ಯರಿಗೆ ಶುಭ ಹಾರೈಸಲು ಕಿಚ್ಚ ಸುದೀಪ್ ಆಗಮಿಸಿದ್ದರು. ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ದೃಶ್ಯ-3 ಮೊದಲು ಕನ್ನಡದಲ್ಲಿ ಬರಲಿ ಆನಂತರ ಉಳಿದ ಭಾಷೆಯಲ್ಲಿ ಬರಲಿ ಎನ್ನುವ ಸಲಹೆಯನ್ನೂ ನೀಡಿದರು.

ಈ ವೇಳೆ ಅಪ್ಪನ ಪ್ರೀತಿ, ಅಪ್ಪುವಿನ  ನಗು ನೆನಪು ಮಾಡಿಕೊಂಡು ಮಾತಿಗಿಳಿದ ನಟ ಡಾ.ರವಿಚಂದ್ರ ಅವರು ,ಸುದೀಪ್ ನೋಡಿದರೆ ಏನೋ ಒಂದು ರೀತಿ ಖುಷಿ. ಹೀಗಾಗಿ ಕಾರ್ಯಕ್ರಮಕ್ಕೆ ಬರಬೇಕೆಂದು ಮನವಿ ಮಾಡೋದಿಲ್ಲ  ಆರ್ಡರ್ ಮಾಡೋದು.. ಆತ ಕೂಡ ಅವರ ಕಾರ್ಯಕ್ರಮಕ್ಕೆ ನಾಳೆ ಬನ್ನಿ ಅಂತಾನೆ. ಇದೇ ಕುಟುಂಬದ ಪ್ರೀತಿ. ನಾಯಕನಾಗಿದ್ದ ನನ್ನನ್ನು ಅಪ್ಪನ ಪಾತ್ರಗಳಿಗೆ ಬದಲಾವಣೆ ಮಾಡಿದ್ದೆ ಮಾಣಿಕ್ಯ ಅದು ಸುದೀಪ್ ಎಂದರು.

ದೃಶ್ಯ-2  ಚಿತ್ರದಲ್ಲಿ  ಕೆಮಿಸ್ಟ್ರಿ,  ಬಯೋಲಜಿ, ಮ್ಯಾಥಮೆಟಿಕ್ ಚೆನ್ನಾಗಿರಬೇಕು. ಎಲ್ಲವೂ ಚೆನ್ನಾಗಿದ್ದ ಹಿನ್ನೆಲೆಯಲ್ಲಿ ಚಿತ್ರ ಚೆನ್ನಾಗಿ ಬಂದಿದೆ. ತಂದೆ ಮಗಳ ಬಾಂಧವ್ಯ ಕುಟುಂಬ ಕಣ್ಣಿಗೆ ಕಟ್ಟಿದೆ ಹಾಗೆ ಇದೆ. ಚಿತ್ರದ ಕಲಾವಿದರೊಂದಿಗೆ ಏಳು ವರ್ಷದಿಂದ ಬಾಂಡಿಂಗ್ ಚೆನ್ನಾಗಿದೆ  ಎನ್ನುವ ವಿವರ ನೀಡಿದರು.

ನಿರ್ದೇಶಕ ಪಿ.ವಾಸು,  ದೃಶ್ಯ ಕುಟುಂಬ ಇಲ್ಲಿದೆ. ಖುಷಿಯ ಸಂಗತಿ,ದೃಶ್ಯ ಎಲ್ಲರಿಗೂ ಗೊತ್ತು. ತೆಲುಗು, ಮಲೆಯಾಳಂ ನಲ್ಲಿ ನೋಡಿರಿತ್ತೀರಾ ಆದರೆ ಕನ್ನಡದಲ್ಲಿ ಕುತೂಹಲ ಮತ್ತಷ್ಟು ಹೆಚ್ಚಿದೆ. ಅದು ಏನು ಎನ್ನುವುದನ್ನು ಸಿನಿಮಾದಲ್ಲಿ ನೋಡಬೇಕು. ಎಮೋಷನ್ ಚೆನ್ನಾಗಿ ಮೂಡಿ ಬಂದಿದೆ. ದೃಶ್ಯ ಚಿತ್ರ ನೋಡಿದ ಮೇಲೆ  ಕುಟುಂಬದಲ್ಲಿ  ಇಂತಹ ಘಟನೆ ಆದರೆ  ಅದರಿಂದ ಹೇಗೆ ಹೊರಬರಬೇಕು ಎನ್ನುವ ವಿಷಯದ ಬಗ್ಗೆ ಚರ್ಚೆ ಆಗಲಿದೆ. ಚಿತ್ರ ನೋಡುವಾಗ ಟೆಶ್ಯನ್ ಹೆಚ್ಚಾಗಲಿದೆ ಎಂದರು.

ನಾಯಕಿ ನವ್ಯನಾಯರ್,  ಕನ್ನಡದಲ್ಲಿಯೂ ದೃಶ್ಯ -2 ಗೆ ನಿರೀಕ್ಷೆ ಹೆಚ್ಚಲಿದೆ.ಚಿತ್ರೀಕರಣದಲ್ಲಿ  ಕುಟುಂಬದ ರೀತಿ ಇದ್ದೆವು.ಚಿತ್ರ ಚೆನ್ನಾಗಿ ಮೂಡಿಬಂದಿದೆ. ಮಲೆಯಾಳಂನಲ್ಲಿ ಅತ್ಯುತ್ತಮವಾಗಿ ಮೂಡಿ ಬಂದಿದೆ ಎನ್ನುವ ವಿವರ ನೀಡಿದರು. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್,  ಚಿತ್ರದ ಕಲಾವಿದರಾದ ಪ್ರಮೋದ್ ಶೆಟ್ಟಿ, ನಾರಾಯಣ ಸ್ವಾಮಿ, ಲಾಸ್ಯ, ಅರೋಹಿನಾರಾಯಾಣ್ ಸೇರಿದಂತೆ ಮತ್ತಿತರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ಕನ್ನಡದಲ್ಲಿ ಮೊದಲು ಬರಲಿ

ದೃಶ್ಯ-3 ಚಿತ್ರ ಕನ್ನಡ ಭಾಷೆಯಲ್ಲಿ ಮೊದಲ ಬರಲಿ ಆನಂತರ ಉಳಿದ ಭಾಷೆಯಲ್ಲಿ ತೆರೆಗೆ ಬರಲು ಎಂದು ನಟ ಕಿಚ್ಚ ಸುದೀಪ್ ಚಿತ್ರತಂಡಕ್ಕೆ ಸಲಹೆ ನೀಡಿದರು. ಮಾಣಿಕ್ಯ ಚಿತ್ರದ ಚಿತ್ರೀಕರಣದ ಸಮಯದಲ್ಲಿ ರವಿ ಅಣ್ಣನಿಗೆ ದೃಶ್ಯ ಚಿತ್ರ ತೋರಿಸಿದ್ದೆ. ನಾನೇ ನಿರ್ಮಾಣ ಮಾಡಲು ಕೂಡ ಮುಂದಾಗಿದ್ದೆ ಆದರೆ ಕಾರಣಾಂತರದಿಂದ ಸಾಧ್ಯವಾಗಲಿಲ್ಲ. ಚಿತ್ರಕ್ಕೆ ಮತ್ತು ತಂಡಕ್ಕೆ ಒಳಿತಾಗಲಿ ಎಂದರು.