ಮಾಂಟೆಸೊರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಸಂಜೆವಾಣಿ ವಾರ್ತೆ

ದಾವಣಗೆರೆ. ಜೂ.೬; ಪ್ರತಿಯೊಬ್ಬರೂ ಮನೆಯ ಮುಂದೆ ಒಂದು ಗಿಡ ನೆಡುವುದರ ಮೂಲಕ ಪರಿಸರ ಸಂರಕ್ಷಿಸ ಬೇಕೆಂದು‌ ಕಸರಸ ಅಭಿಯಾನದ ನೇತೃತ್ವ ವಹಿಸಿರುವ ಡಾ.ಶಾಂತಾಭಟ್ ತಿಳಿಸಿದರು.ಮಾಂಟೆಸೊರಿ ಶಾಲೆಯಲ್ಲಿ ನಡೆದ ಪರಿಸರ ದಿನಾಚರಣೆ  ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಪ್ಲಾಸ್ಟಿಕ್ ನಿಂದ ಪರಿಸರಕ್ಕೆ ಆಗುವ ಹಾನಿ ತಿಳಿಸಿ ಅದರ ಬದಲು ಬಟ್ಟೆಯ ಕೈಚೀಲ ಬಳಸಲು ಹಾಗೂ ಪ್ರತಿಯೊಬ್ಬರೂ ಮನೆಯ ಮುಂದೆ ಒಂದು ಗಿಡ ನೆಡುವುದರ ಮೂಲಕ ಪರಿಸರ ಸಂರಕ್ಷಿಸಲು ಕರೆನೀಡಿದರು. ಆಡಳಿತಾಧಿಕಾರಿ ಮಲ್ಲಮ್ಮ ಮಾತನಾಡಿ ನಮಗೆ ಜೀವನಾಡಿಯಾದ ಆಮ್ಲಜನಕ ಗಿಡಮರಗಳಿಂದ ದೊರಕುತ್ತಿದ್ದು ಗಿಡಮರ ಬೆಳಸಲು ತಿಳಿಸಿದರು.ಎರಡನೆ ತರಗತಿ ವಿದ್ಯಾರ್ಥಿ ಮಹಮ್ಮದ್ ಫೈಜಾನ್ ಸರ್ವರನ್ನು ಸ್ವಾಗತಿಸಿದರೆ ವಿದ್ಯಾರ್ಥಿಗಳಾದ ಗಣೇಶ್  ಚೈತ್ರ ರಶ್ಮಿ ಹಾಗೂ ಲಾವಣ್ಯ ಮಾತನಾಡಿದರು. ಶೈಕ್ಷಣಿಕ ಸಲಹೆಗಾರ ಶ್ರೀ ಎಂ.ಎನ್ ಅಮಿತ್ ಹಾಗೂ ಕೋ ಆರ್ಡಿನೇಟರ್ ಶ್ರೀಮತಿ ರಾಬಿಯಾ ಮತ್ತು ಮುಖ್ಯೋಪಾಧ್ಯಾಯರಾದ ಮಹಮದ್ ಫರ್ಹಾನ್ ಉಪಸ್ಥಿತರಿದ್ದರು.ನಂತರ ಮಕ್ಕಳು ಬಡಾವಣೆಯಲ್ಲಿ ನ ಮನೆಮನೆಗೆ ಹೋಗಿ ನಾಗರೀಕರಿಗೆ ತರಕಾರಿ ಸಸಿಗಳನ್ನು  ಬೆಳೆಸುವ ಮಹತ್ವ ತಿಳಿಸಿದರು. ಶಾಲೆಯ ಎಲ್ಲ ಮಕ್ಕಳು ತರಕಾರಿ ಸನೆಗಳನ್ನು ಬೆಳೆಸಲು ಮನೆಗೆ ತೆಗೆದುಕೊಂಡು ಹೋದರು.