ಮಾಂಜ್ರಾ ತೆರೆಗೆ ಬರಲುಸಿದ್ದ

2005 ರಲ್ಲಿ ನಡೆದ ನೈಜ ಕಥೆಯನ್ನಿಟ್ಟುಕೊಂಡು “ಮಾಂಜ್ರಾ” ಚಿತ್ರ ಸಿದ್ದ ಪಡಿಸಿ ನಿರ್ದೇಶಕ ಮುತ್ತುರಾಜ್ ರೆಡ್ಡಿ ಆಕ್ಷನ್ ಕಟ್ ಹೇಳಿದ್ದಾರೆ
ಈಗಾಗಲೇ ಸೆನ್ಸಾರ್ ಮುಗಿದಿದ್ದು ಮುಂದಿನ ತಿಂಗಳ ಕೊನೆಯವಾರ ಅಥವಾ ಹೊಸ ವರ್ಷದಲ್ಲಿ ಚಿತ್ರ ತೆರೆಗೆ ಬರುವ ಎಲ್ಲಾ ಸಾಧ್ಯತೆಗಳಿವೆ.
ರವಿ ಅರ್ಜುನ್ ಪೂಜೇರ ನಿರ್ಮಿಸುತ್ತಿರುವ ಮಾಂಜ್ರಾ ಚಿತ್ರದ ಚಿತ್ರದ ಟೀಸರ್ ಲಹರಿ ವೇಲು ಬಿಡುಗಡೆಗೊಳಿಸಿ ಶುಭ ಹಾರೈಸಿದ್ದಾರೆ
ಚಿತ್ರಕ್ಕೆ ಸಯ್ಯದ್ ಯಾಸಿನ್ ಹಾಗು ಶರತ್ ಛಾಯಾಗ್ರಹಣ,ಡಾ.ಚಿನ್ಮಯ್ ಎಂ.ರಾವ್ ಸಂಗೀತ‌ ಮತ್ತು ಸಾಹಿತ್ಯ,ಆಕಾಶ್ ಜಾಧವ್ ಹಿನ್ನೆಲೆ ಸಂಗೀತ,ಸಂಗಮೇಶ ಕಮತಿ,ಅಂಜಿಕ್ಯ ಶಿಂಧೆ ಸಂಕಲನ,ಕೌರವ ವೆಂಕಟೇಶ್ ಸಾಹಸ, ರಮ್ಯ ಉಡುಪಿ,ರಕ್ಷಾ ಉಡುಪಿ ನೃತ್ಯ‌ನಿರ್ದೇಶನವಿದೆ.
ಗಣಿ ಸಹ ಸಂಗೀತ,ಗೌತಮ್ ನಾಯ್ಕ್ ಡಿ.ಐ ಚಿತ್ರಕ್ಕಿದೆ.
ರಂಜಿತ್ ಸಿಂಗ್, ಅಪೂರ್ವ,ನಿತ್ಯರಾಜ್, ರಂಜನ್ ಪಣಗುತ್ತಿ,,,ಸಿ.ಎಸ್ ಪಾಟೀಲ್,ನಳಿನ್ ವಿದ್ಯಾಸಾಗರ್,ಮಂಜುನಾಥ ಗೌಡ ಪಾಟೀಲ್ ಮುಂತಾದವರು ಚಿತ್ರದ ತಾರಾ ಬಳಗದಲ್ಲಿದ್ದಾರೆ.