ಮಾಂಜಾದಾರ ಪಕ್ಷಿಗಳಿಗೆ ಕಂಟಕ

Urban wild life rescue members are rescued 2 crow which was caught in kite tread at mysore bank cricle public leaving the kite to fly on air using dangerous tread even a man can be killed will driving two wheeler on person was injured recently  at myson bank cricle a traffic police who called the wild life rescue team and save the crow 

ಬೆಂಗಳೂರು,ಸೆ.೧೨-ನಗರದಲ್ಲಿ ಗಾಳಿಪಟದ ದಾರಕ್ಕೆ ಸಿಲುಕಿ ಪ್ರಾಣ ಉಳಿಸಿಕೊಳ್ಳಲು ಒದ್ದಾಡುತ್ತಿದ್ದ ಎರಡು ಕಾಗೆಗಳನ್ನು ಇಂದು ಬೆಳಿಗ್ಗೆ ಪಕ್ಷಿ ಪ್ರಿಯರು ರಕ್ಷಣೆ ಮಾಡಿ ಮತ್ತೆ ಹಾರಾಟ ಮಾಡುವಂತೆ ಮಾಡಿದರು. ಮೈಸೂರು ಬ್ಯಾಂಕ್ ವೃತ್ತದ ಆಂಜನೇಯ ದೇವಾಲಯದ ಬಳಿ ಬೆಳಿಗ್ಗೆ ೯ ರ ವೇಳೆ ಎರಡು ಕಾಗೆಗಳ ರೆಕ್ಕೆಗಳಿಗೆ ಗಾಳಿಪಟದ ಮಾಂಜಾದಾರ ಸಿಲುಕಿ ಒದ್ದಾಡುತ್ತಿದ್ದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ನಗರ ವನ್ಯಜೀವಿ ಸ್ವಯಂಸೇವಕರು ರಕ್ಷಿಸಲು ಮುಂದಾಗಿದ್ದಾರೆ. ಕಾಗೆಗಳ ರೆಕ್ಕೆಗಳಿಗೆ ಗಾಳಿಪಟದ ಮಾಂಜಾ ಬದಾರ ಸುತ್ತಿಕೊಂಡಿದ್ದು ರೆಕ್ಕೆ ಸಿಕ್ಕಿಕೊಳ್ಳು ತ್ತಿದ್ದಂತೆ ಸಾಕಷ್ಟು ಒದ್ದಾಡುತ್ತಿದ್ದವು.
ಗಾಳಿಪಟಕ್ಕೆ ಕಟ್ಟಲಾಗಿದ್ದ ಪ್ಲಾಸ್ಟಿಕ್ ದಾರ ಹೆಚ್ಚು ಬಲಶಾಲಿಯಾಗಿದ್ದರಿಂದ ಅವುಗಳಿಗೆ ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದರೂ ಸಾಧ್ಯವಾಗಿಲ್ಲ ಕೂಡಲೇ ಅವುಗಳನ್ನು ಉದ್ದವಾದ ಕೋಲಿನ ಸಹಾಯದಿಂದ ಇಳಿಸಿ ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಲಾಗಿದೆ.
ಇತ್ತೀಚೆಗಷ್ಟೇ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರರೊಬ್ಬರು ಹಣೆಗೆ ಮಾಂಜ ದಾರ ಸಿಲುಕಿ ಗಾಯಗೊಂಡಿದ್ದರು ಮಾಂಜದಾರದಿಂದ ನಗರದ ವಿವಿದೆಢೆ ಕಾಗೆ ಹದ್ದು ಇನ್ನಿತರ ಪಕ್ಷಿ ಗಳು ಸಿಲುಕುತ್ತಿದ್ದು ಪಕ್ಷಿ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.


ಯುವಕ ಸಾವು
ಗಾಳಿಪಟ ಹಾರಿಸಲು ಬಳಸಲಾಗುವ ಮಾರಕ ಚೈನೀಸ್ ಕೈಟ್ ಮಾಂಜಾ ದಾರಕ್ಕೆ ಯುವಕನೊಬ್ಬ ಬಲಿಯಾಗಿರುವ ಘಟನೆ ಕಳೆದ ಆಗಷ್ಟ್ ನಲ್ಲಿ ದೆಹಲಿಯಲ್ಲಿ ನಡೆದಿತ್ತು. ಸಿವಿಲ್ ಎಂಜಿನಿಯರ್ ಆಗಿರುವ ಮಾನವ್ ಶರ್ಮಾಅವರು ಸೋದರಿಯರೊಂದಿಗೆ ರಕ್ಷಾ ಬಂಧನ ಹಬ್ಬ ಆಚರಿಸಿದ್ದರು. ನಂತರ ತಮ್ಮ ಸೋದರ ಸಂಬಂಧಿಯನ್ನು ಭೇಟಿಯಾಗಲು ಬುದ್ಧ ವಿಹಾರದ ತಮ್ಮ ನಿವಾಸದಿಂದ ಹರಿನಗರಕ್ಕೆ ಸೋದರಿಯರೊಂದಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾರೆ. ಈ ವೇಳೆ ದೆಹಲಿ ಪಶ್ಚಿಮ ವಿಹಾರದ ಫ್ಲೈಓವರ್ ಮೇಲೆ ಗಾಳಿಪಟವೊಂದರ ಮಾಂಜಾ ದಾರ ಅವರ ಕುತ್ತಿಗೆಯನ್ನು ಸುತ್ತಿಕೊಂಡು ಸೀಳಿದೆ. ಇದರಿಂದ ಕುತ್ತಿಗೆಯಲ್ಲಿ ಆಳವಾಗಿ ಗಾಯ ಮಾಡಿದೆ. ಅವಘಡಕ್ಕೆ ಸಿಲುಕುತ್ತಲೇ ಮಾನವ್ ಶರ್ಮ ವಾಹನದಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೊತ್ತಿಗಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಾಂಜಾ ದಾರದ ಅವಘಡಗಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ ೧೫ ದೂರುಗಳು ಬಂದಿದ್ದವು ಎನ್ನಲಾಗಿದೆ. ಈ ಘಟನೆಗಳಲ್ಲಿ ೮ ಮಂದಿ ಗಾಯಗೊಂಡಿದ್ದಾರೆ.ಇದೇ ರೀತಿ ನಗರದ ಹಲವೆಡೆ ಮಾಂಜಾದಾರದಿಂದ ಒಂದಲ್ಲ ಒಂದು ಅವಘಡ ಸಂಭವಿಸಿವೆ.

ಗಾಂಜಾ ಮಾರಾಟ ಆರೋಪಿ ಸೆರೆ
ಬೆಂಗಳೂರು, ಸೆ.೧೨- ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಕಲಾಸಿಪಾಳ್ಯ ಪೊಲೀಸರು ೭೫೦ಗ್ರಾಂ ತೂಕದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ನಿನ್ನೆ ಕಾರ್ಯಾಚರಣೆ ನಡೆಸಿದ ಪೊಲೀಸರು ಜಾವೀದ್ ಅಹಮದ್ ಅಲಿಯಾಸ್ ತೋತಾ ಜಾವೀದ್ (೪೩) ನನ್ನು ಬಂಧಿಸಿದ್ದಾರೆ.
ಈತನ ಬಳಿ ಇದ್ದ ೩೦ ಸಾವಿರ ಮೌಲ್ಯದ ಮುಕ್ಕಾಲು ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬೈಕ್ ಟ್ರಾಕ್ಟರ್ ಡಿಕ್ಕಿ ಇಬ್ಬರು ಸಾವು
ಬೆಂಗಳೂರು,ಸೆ.೧೨-ಬೈಕ್- ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಚಿಂತಾಮಣಿ ತಾಲೂಕಿನ ಟಿ.ಹೊಸಹಳ್ಳಿ ಗೇಟ್ ಬಳಿ ಘಟನೆ ನಡೆದಿದೆ. ಬಾಗೇಪಲ್ಲಿ ಮೂಲದ ಗಡ್ಡಂಪಲ್ಲಿಯ ಕಾರ್ತಿಕ್ (೧೮), ಪವನ್ (೨೦) ಮೃತಪಟ್ಟ ವರು.ಅಪಘಾತ ನಡೆಯುತ್ತಿದ್ದಂತೆ ಟ್ರ್ಯಾಕ್ಟರ್ ಸಮೇತ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಬೈಕ್ ಸವಾರರು ಬಾಗೇಪಲ್ಲಿಯಿಂದ ಚಿಂತಾಮಣಿಗೆ ಹೋಗುತ್ತಿದ್ದಾಗ ಚಿಂತಾಮಣಿಯಿಂದ ಬಾಗೇಪಲ್ಲಿ ಕಡೆಗೆ ಬರುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.