ಮಾಂಗಲ್ಯಸರ ಅಪಹರಣ

ಶಿವಮೊಗ್ಗ, ಮಾ. ೨೬- ಬೈಕ್ ನಲ್ಲಿ ಆಗಮಿಸಿದ ಇಬ್ಬರುಸರ ಗಳ್ಳರು, ಪತಿಯ ಜೊತೆಬೈಕ್‌ನಲ್ಲಿ ತೆರಳುತ್ತಿದ್ದ ಮಹಿಳೆಯ ಮಾಂಗಲ್ಯಸರ ಅಪಹರಿಸಿ ಪರಾರಿಯಾದ ಘಟನೆ ನಗರದ ಹೊರವಲಯದ ನಿಧಿಗೆ ಬಳಿ ನಡೆದಿದೆ. ಹೊನ್ನವಿಲೆ ಗ್ರಾಮದ ಪ್ರೇಮಾ ಮಾಂಗಲ್ಯಸರ ಕಳೆದು ಕೊಂಡ ಮಹಿಳೆ ಎಂದು ಗುರುತಿಸಲಾಗಿದೆ. ಇವರು ಪತಿ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದ ಹಿಂಬದಿ ಕುಳಿತು ಮಲವಗೊಪ್ಪಕ್ಕೆ ತೆರಳುತ್ತಿದ್ದರು. ಈ ವೇಳೆ ಭದ್ರಾವತಿ ಕಡೆಯಿಂದ ಬೈಕ್‌ನಲ್ಲಿ ಆಗಮಿಸಿದ ಸರಗಳ್ಳರು, ಇವರ ಕೊರಳಲ್ಲಿದ್ದ ಮಾಂಗಲ್ಯಸರ ಕಿತ್ತುಕೊಂಡು ಶಿವಮೊಗ್ಗದೆಡೆಗೆ ಪರಾರಿಯಾಗಿದ್ದಾರೆ.
ಕಳುವಾದ ಸರವು ೪೪ ಗ್ರಾಂ ತೂಕದ್ದಾಗಿದ್ದು, ಅಂದಾಜು ೧.೫೦ ಲಕ್ಷ ರೂ. ಮೌಲ್ಯದ್ದಾಗಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.