ಮಾಂಕ್ ದಿ ಯಂಗ್ ಪೋಸ್ಟರ್ ಬಿಡುಗಡೆ

ಹೊಸಬರ  “ಮಾಂಕ್ ದಿ ಯಂಗ್”  ಚಿತ್ರದ ಪೋಸ್ಟರ್ ಅನ್ನು ನಟ ರಿಷಭ್ ಶೆಟ್ಟಿ, ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ವೇಳೆ ಮಾತಿಗಿಳಿದ ಮಾಸ್ಚಿತ್ ಸೂರ್ಯ, ವಿಂಟೇಜ್, ಫ್ಯಾಂಟಸಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ.‌ ಚಿತ್ರೀಕರಣ ಪೂರ್ಣಗೊಂಡಿದೆ.

ಚಿತ್ರದ ಐದು ನಿರ್ಮಾಪಕರು ಅಭಿನಯಿಸಿರುವುದು ವಿಶೇಷ ಎಂದರು. ನಿರ್ಮಾಪಕ ಹಾಗೂ ನಾಯಕ ಸರೋವರ ಮಾತನಾಡಿ, ಚಿತ್ರ ಸಹ ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ ಎಂದರೆ, ನಾಯಕಿ ಸೌಂದರ್ಯ ಗೌಡ, ನಟಿಸುವ ಆಸೆ. ಆದರೆ ಅದಕ್ಕೆ ಮನೆಯವರ ಸಪೋರ್ಟ್ ಇರಲಿಲ್ಲ. ಎಂಜಿನಿಯರಿಂಗ್ ಓದಿ ಹೈದರಾಬಾದಿನಲ್ಲಿ ಕೆಲಸ ಮಾಡಿದ್ದೇನೆ. ಆದರೆ ನಟನೆಯ ಮೇಲಿನ ಆಸಕ್ತಿಯಿಂದ ಕೆಲಸ ಬಿಟ್ಟು ಬಂದು ಚಿತ್ರದಲ್ಲಿ ನಟಿಸಿದ್ದೇನೆ. ಇದು ನನ್ನ ಮೊದಲ ಚಿತ್ರ. ಮಾಡಲಿಂಗ್ ನಲ್ಲೂ ಕೆಲಸ ಮಾಡಿದ್ದೇನೆ ಎಂದರು.

ನಿರ್ಮಾಪಕರಲ್ಲಿ ಒಬ್ಬರಾದ ಕರ್ನಲ್ ರಾಜೇಂದ್ರನ್ ಸೇನೆಯಲ್ಲಿ ನಲವತ್ತು ವರ್ಷ ಸೇವೆ ಸಲ್ಲಿಸಿದ್ದೇನೆ. ಅಲ್ಲಿಂದ ಬಂದ ಮೇಲೆ  ನಟಿಸುವ ಆಸೆಯಾಯಿತು.ಇದು ಎರಡನೇ ಚಿತ್ರ. ಈ ಚಿತ್ರದ ಪಾತ್ರ ಕೂಡ ಚೆನ್ನಾಗಿದೆ ಎಂದರು .

ನಿರ್ಮಾಪಕರು ಹಾಗೂ ನಟರೂ ಆಗಿರುವ ವಿನಯ್ ಬಾಬು ರೆಡ್ಡಿ, ಲಾಲ್ ಚಂದ್,  ಗೋಪಿ ಚಂದ್ ಸಹ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಹಿರಿಯ ನಟಿ ಉಷಾ ಭಂಡಾರಿ  ಪಾತ್ರದ ಬಗ್ಗೆ ವಿವರಣೆ ನೀಡಿದರು.