
ರಾಯಚೂರು,ಏ.೨೮- ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಪ್ರಚಾರಕ್ಕಾಗಿ ರಾಯಚೂರ ನಗರಕ್ಕೆ ಆಗಮಿಸಿರುವ ಕಾಂಗ್ರೆಸ್ ಪಕ್ಷದ ಅಗ್ರಗಣ್ಯ ನಾಯಕ, ವಿಧಾನಸಭೆಯ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕೆಪಿಸಿಸಿ ಹಿಂದುಳಿದ ವಿಭಾಗದ ಕಾರ್ಯದರ್ಶಿ, ಗಂಗಾಮತ ಸಮಾಜದ ಯುವ ನಾಯಕ, ತಲಕಾಯಿ ಮಾರೆಪ್ಪ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ತೆರಳಿ ಬೃಹತ್ ಹೂಮಾಲೆ ಹಾಕಿ ಹೃತ್ಪೂರ್ವಕವಾಗಿ ಬರಮಾಡಿಕೊಂಡರು.
ತಲಕಾಯಿ ಮಾರೆಪ್ಪ ಅವರ ಸನ್ಮಾನಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಧನ್ಯವಾದ ತಿಳಿಸಿದರು ಮತ್ತು ರಾಯಚೂರ ನಗರ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಮಹಮದ್ ಶಾಲಂ ಗೆಲುವಿಗೆ ಯುವ ನಾಯಕರುಗಳು ನೀವು ಅವರ ಪರವಾಗಿ ಶ್ರಮಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಯುವ ನಾಯಕ ರವಿ ಬೋಸರಾಜ ಅವರು ಇದ್ದರು.