ಮಹೇಶ ಪುತ್ತೇದಾರ ವಿರುದ್ಧ ಎಸ್. ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲು ಆಗ್ರಹ

ರಾಯಚೂರು, ಮಾ.೧೫- ವಸತಿ ನಿಲಯಗಳಿಗೆ ಮೂಲಭೂತ ಸೌಕರ್ಯ ಒದಗಿಸದೇ ನಿರ್ಲಕ್ಷ ವಹಿಸಿ ಮೇಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿ ಭ್ರಷ್ಟಾಚಾರ ಎಸಿಗಿದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪುತ್ತೇದಾರ ವಿರುದ್ಧ ಎಸ್. ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ವಸತಿ ನಿಲಯ ವಿದ್ಯಾರ್ಥಿಗಳು ಊಟ ಇಲ್ಲದೇ ಹಸಿವಿನಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದು, ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಮಹೇಶ ಪೋತದಾರ ಅವರು ಸಮಸ್ಯೆಗಳಿಗೆ ಸ್ಪಂಧಿಸದೆ, ಮೇಲಾಧಿಕಾರಿಗಳ ಆದೇಶಗಳನ್ನು ಲೆಕ್ಕಿಸದೆ, ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿರುವ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆಯುತ್ತಿರುವ ವಸತಿ ನಿಲಯಗಳ ಜ್ವಾಲಂತ ಸಮಸ್ಯೆಗಳು ಎದುರಿಸುತ್ತಿದ್ದ, ಕನಿಷ್ಠ ಮೂಲಭೂತ ಸಮಸ್ಯೆಗಳನ್ನು ಸ್ಪಂಧಿಸಲು ವಸತಿ ನಿಲಯಗಳಲ್ಲಿ ಮೇಲ್ವಿಚಾರಕರು ಇಲ್ಲದೆ, ಸುಮಾರು ವರ್ಷಗಳಿಂದ ವಸತಿ ನಿಲಯಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ಊಟ ಕಡಿಮೆ ಬಿದ್ದರೆ ಕೇಳುವವರೆ ಇಲ್ಲಾ. ವಿದ್ಯಾರ್ಥಿಗಳು ಕೇಳಿದರೆ, ಮೇಲ್ವಿಚಾರಕರು ಗುಂಡಾಗಳಿಂದ ಬೆದರಿಸುತ್ತಾರೆ. ಇದಕ್ಕೆ ಸಿಂಧನೂರು ಡಾ.ಬಿ. ಆರ್. ಅಂಬೇಡ್ಕರ್ ವಸತಿ ನಿಲಯ ವಿದ್ಯಾರ್ಥಿಗಳ ಊಟ ವಿಲ್ಲದೆ ಹಸಿವಿನಿಂದ ಬಳಲಿ ಆಸ್ಪತ್ರೆಗೆ ಸೇರಿದ ಉದಾಹರಣೆಯಾಗಿದೆ. ಜಿಲ್ಲೆಯಲ್ಲಿ ಸುಮಾರು ವಸತಿ ನಿಲಯಗಳಲ್ಲಿ ಮೇಲ್ವಿಚಾರಕರು ಇಲ್ಲದ ವಿದ್ಯಾರ್ಥಿಗಳ ಗೋಳು ಕೇಳುವವರು ಇಲ್ಲದಾಗಿದೆ. ಹಾಗೂ ಲಿಂಗಸೂಗೂರು ತಾಲೂಕಿನ ವಸತಿ ನಿಲಯ ವಿದ್ಯಾರ್ಥಿಗಳು ಊಟಕ್ಕಾಗಿ ಪ್ರತಿ ನಿತ್ಯ ಹೋರಾಟ ಮಾಡುತ್ತಿದ್ದಾರೆ ಎಂದು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೇವರಾಜ ಮೇಲ್ವಿಚಾರಕರ ನಿರ್ವಹಿಸುತ್ತಿರುವ ವಸತಿ ನಿಲಯದಲ್ಲಿ ಸುಮಾರು ೧೦ ವರ್ಷಗಳಿಂದ ಮೇಲ್ವಿಚಾರಕರೆ ಇರುವುದಿಲ್ಲ. ಅಲ್ಲಿನ ವಿದ್ಯಾರ್ಥಿಗಳ ಮೊಬೈಲ್‌ಗಳ ಕಳ್ಳತನ, ಊಟಕ್ಕಾಗಿ ಪರದಾಟ ನಡೆದರೂ ಕೇಳುವವರಿಲ್ಲ. ದೇವರಾಜ ಮೇಲ್ವಿಚಾರಕರಿಗೆ ಸಹಾಯಕ ನಿರ್ದೇಶಕರು ಹುದ್ದೆ ಕೊಡಲು ಬರುವುದಿಲ್ಲವೆಂದು ಆಯುಕ್ತರ ಸ್ಪಷ್ಟವಾಗಿ ಆದೇಶ ಇದ್ದರೂ, ರಾಯಚೂರು ತಾಲೂಕಿನ ಸಹಾಯಕ ನಿರ್ದೇಶಕರ ಹುದ್ದೆಗೆ ನಿಯೋಜನೆ ಮಾಡಿದ್ದರು. ಆ ಸಂದರ್ಭದಲ್ಲಿ ಉಪನಿರ್ದೇಶಕರು ಮತ್ತು ದೇವರಾಜ್ ಇವರಿಬ್ಬರು ಕೂಡಿಕೊಂಡು ಕೊಟೆಗಟ್ಟಲೆ ಹಣವನ್ನು ಲೂಟಿ ಮಾಡಿದರು. ಇದರ ಸಂಬಂಧ ಸರ್ಕಾರ ಲೋಕಾಯುಕ್ತ ಅಧಿಕಾರಿಗಳಿಂದ ತನಿಖೆಗೆ ಆದೇಶ ಮಾಡಿದೆ. ಕೂಡಲೇ ಮಹೇಶ ಪುತ್ತೇದಾರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಚನ್ನಬಸವ ಯಕ್ಲಾಪೂರು, ಜೆ. ಪ್ರಕಾಶ ಸಿರವಾರ, ಶರಣಪ್ಪ ದಿನ್ನಿ ಸೇರಿದಂತೆ ಉಪಸ್ಥಿತರಿದ್ದರು.