ಮಹೇಶ್ ಬಾರ್ಕಿಗೆ ಪಿಹೆಚ್‍ಡಿ ಪದವಿ

ದಾವಣಗೆರೆ,ಮೇ.27; ದಾವಣಗೆರೆ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಮಹೇಶ್ ಬಾರ್ಕಿಯವರು ಗಣಿತಶಾಸ್ತ್ರದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯವು ಪಿಹೆಚ್‍ಡಿ ಪದವಿ ಪ್ರದಾನ ಮಾಡಿದೆ.ಇವರು ಇನ್ವೆಸ್ಟಿಗೇಷನ್ಸ್ ಇನ್ ನೆವನ್‍ಲಿನ್ನಾ ಥಿಯರಿ ಅಂಡ್ ಇಟ್ಸ್ ಅಪ್ಲಿಕೇಷನ್ಸ್ ವಿಷಯದಲ್ಲಿ ಪ್ರಬಂಧ ಮಂಡಿಸಿದ್ದರು. ಇವರಿಗೆ ಕರ್ನಾಟಕ ವಿ.ವಿ ಸಹ ಪ್ರಾಧ್ಯಾಪಕಿ ಡಾ;ಆರ್.ಎಸ್.ದ್ಯಾವನಾಳ ಮಾರ್ಗದರ್ಶಕರಾಗಿದ್ದರು. ಮಹೇಶ್ ಬಾರ್ಕಿ ಇವರು ರಾಣೇಬೆನ್ನೂರು ತಾಲ್ಲೂಕಿನ ಕಾಕೋಳ ಗ್ರಾಮದವÀರು.