ಮಹೇಶ್ ಪೂತೆದಾರ್, ಮಯೂರ ವಿರುದ್ಧ ಅರೆಬೆತ್ತಲೆ ಹೋರಾಟ

ಮಾನ್ವಿ,ಮಾ.೨೩- ತಾಲೂಕಿನ ವಿವಿಧ ಗ್ರಾಮದಲ್ಲಿ ಭೂ ಒಡೆತನ ಯೋಜನೆಯಡಿ ಹಂಚಿಕೆಯಾದ ಪ್ರಕರಣದಲ್ಲಿ ಬಾರಿ ಅಕ್ರಮ ನಡೆದಿದ್ದು ನೈಜ ರೈತರಿಗೆ ಫಲವತ್ತಾದ ಭೂಮಿಯನ್ನು ಹಂಚಿಕೆ ಮಾಡದೆ ಬಂಜರು ಭೂಮಿ, ಹಾಗೂ ಕಾಡು,ಗುಡ್ಡ ಬೆಟ್ಟ, ಕರೆ,ಬಂಡೆ, ಬಿತ್ತನೆಗೆ ಯೋಗ್ಯವಲ್ಲದ ಭೂಮಿಯನ್ನು ನೀಡಿ ಸರ್ಕಾರದ ಹಣವನ್ನು ಲೂಟಿ ಮಾಡಿ ರೈತರಿಗೆ ವಂಚನೆ ಮಾಡಿದ್ದಾರೆ ಎಂದು ಈಗಾಗಲೇ ನಾವು ಉಪವಾಸದ ಹೋರಾಟ ಮಾಡಿದರು ಕೂಡ ನಿರ್ಲಕ್ಷ್ಯ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಮಾ. ೨೬ ರಂದು ಅರಬೆತ್ತಲೆ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ಮುಖಂಡ ಪ್ರಭುರಾಜ ಕೊಡ್ಲಿ ಹೇಳಿದರು.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮಹೇಶ್ ಪೂತೆದಾರ, ಹಾಗೂ ದಲ್ಲಾಳಿ ಮಯೂರ ಇವರು ನಡುವೆ ನಡೆದ ಒಪ್ಪಂದಂತೆ ರೈತರಿಗೆ ಬಿತ್ತನೆಗೆ ಯೋಗ್ಯವಲ್ಲದ ಭೂಮಿಯನ್ನು ಹಂಚಿಕೆ ಮಾಡಿ ಸರ್ಕಾರದ ಹಣವನ್ನು ಎತ್ತುವಳಿ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ನಮ್ಮಲ್ಲಿ ಸಂಪೂರ್ಣ ದಾಖಲೆಗಳಿವೆ ಆದರು ಕೂಡ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗುತ್ತಿಲ್ಲ. ಅದರಂತೆಯೇ ಮಾನವಿ ಪುರಸಭೆ ಇಲಾಖೆಯ ಅಧಿಕಾರಿಗಳು ಈಗಾಗಲೇ ಟೆಂಡರ್ ಕರೆಯುವುದರ ಮೂಲಕ ಹಂಚಿಕೆಯಾದ ಪುರಸಭೆ ಮಳಿಗೆಯನ್ನು ಹಾಜರು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಹಣ ಕಟ್ಟಿ ಪಡೆದುಕೊಂಡ ಮಾಲೀಕರು ನೀಡಬೇಕು ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಈ ಹೋರಾಟವನ್ನು ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸುರೇಶ ನಾಡಗೌಡ, ಮೌನೇಶ, ಪಂಪಾಪತಿ ಹಡಪದ, ಸಾಬೀರಾ ಪಾಷ, ಜಯರಾಜ ಕೊಡ್ಲಿ, ಎಲಿಯಸ್,ರಾಮಣ್ಣ,ಮೌನೇಶ, ಸೇರಿದಂತೆ ಅನೇಕರು ಇದ್ದರು.