ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

ಹೊನ್ನಾಳಿ.ಜ.೧೪: ತಾಲೂಕಿನ ಯಕ್ಕನಹಳ್ಳಿ ಹಳೇ ಗ್ರಾಮದಲ್ಲಿ ಶ್ರೀ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ವಿಶೇಷ ಪೂಜೆ   ವೈಭವದಿಂದ ನೆರವೇರಿತು.ಇದಾದ ಬಳಿಕ,  ಯಕ್ಕನಹಳ್ಳಿ ಗ್ರಾಮದ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸುವ ಮೂಲಕ ಶ್ರೀ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವನ್ನು ಆಚರಿಸಲಾಯಿತು. ಗ್ರಾಮದ ಪುರುಷರು-ಮಹಿಳೆಯರು ಸಹಭೋಜನ ಸ್ವೀಕರಿಸಿದ್ದು ವಿಶೇಷವಾಗಿತ್ತು.ಯಕ್ಕನಹಳ್ಳಿ ಗ್ರಾಮದ ಸಮಸ್ತ ಮುಖಂಡರು ಪಾಲ್ಗೊಂಡಿದ್ದರು.