ಮಹೇಶ್ವರಸ್ವಾಮಿ ಗೆ ಗೌರವ ಡಾಕ್ಟರೇಟ್

(ಸಂಜೆವಾಣಿ ವಾರ್ತೆ)
ಬಳ್ಳಾರಿ:ನ.29- ಏಷ್ಯಾ ವೇದಿಕ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿಯ ಘಟಿಕೋತ್ಸವ ನಿನ್ನೆ  ತಮಿಳುನಾಡಿನ ಹೊಸೂರಿನಲ್ಲಿ ನಡೆಯಿತು.
ಈ ಘಟಿಕೋತ್ಸವದಲ್ಲಿ  ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಕೆ. ಎಂ. ಮಹೇಶ್ವರಸ್ವಾಮಿ  ಇವರ ಶೈಕ್ಷಣಿಕ ಸೇವೆ,  ಹೋರಾಟಗಳನ್ನು ಪರಿಗಣಿಸಿ   ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದೆ.