ಮಹಿಷಾ ದಸರಾ ಮುಗಿಯುವವರೆಗೂ ಪ್ರತಾಪಸಿಂಹ ಬಂಧಿಸಿ

ಸಂಜೆವಾಣಿ ನ್ಯೂಸ್
ಮೈಸೂರು: ಅ.8:- ಸಂಘರ್ಷ ಪದ ಬಳಕೆ ಮಾಡಿರುವ ಸಂಸದ ಪ್ರತಾಪಸಿಂಹ ಅವರನ್ನು ಮಹಿಷಾದಸರೆಯ ನಮ್ಮ ಕಾರ್ಯಕ್ರಮ ಮುಗಿಯುವವರೆಗೂ ಬಂಧಿಸಿಡಿ ಎಂದು ಮಾಜಿ ಮೇಯರ್ ಪುರುಷೋತ್ತಮ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘರ್ಷ ಎಂದಿದ್ದಿರಿ, ನಿನ್ನನ್ನು ಯಾರು ಸಂಘರ್ಷಕ್ಕೆ ಕರೆದಿದ್ದಾರೋ ಅವರೊಟ್ಟಿಗೆ ಸಂಘರ್ಷ ಮಾಡಿ. ಅವರು ಹೇಳಿದ್ದನ್ನು ಪೆÇಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ನೋಡುತ್ತಾ ಕುಳಿತಿದೆ. ಶೀಘ್ರವೇ ಆತನನ್ನು ಬಂಧಿಸಬೇಕಿತ್ತು. ಯಾರು ಸಂಘರ್ಷ ಎಂಬ ಪದ ಬಳಸುತ್ತಾರೋ ಅವರನ್ನು ಕೂಡಲೇ ಬಂಧಿಸಬೇಕು. ಯಾಕೆ ಇನ್ನೂ ಮಾಡಿಲ್ಲ. ಯಾಕೆ ದೂರು ಕೊಡಬೇಕಂತಲೇ ಖಂಡಿತ. ನಮ್ಮ ಸಮಿತಿ ನಿರ್ಣಯಿಸಿದೆ. ನಮ್ಮ ಕಾರ್ಯಕ್ರಮ ಮುಗಿಯುವವರೆಗೂ ಆತನನ್ನು ಬಂಧನದಲ್ಲಿ ಇರಬೇಕು. ಯಾಕೆಂದರೆ ಇಂತಹವರಿಂದ ಸಮಾಜಕ್ಕೆ ಬಹಳಷ್ಟು ಕೆಡಕು ಆಗುತ್ತದೆ.
ಸಮಾಜವನ್ನು ಎತ್ತಿ ಕಟ್ಟುವ ಕೆಲಸ ಇಂದು ಪ್ರತಾಪಸಿಂಹ ಅವರಿಂದ ಆಗುತ್ತಿದೆ. ಇದು ಚಾಮುಂಡಿ ಬೆಟ್ಟ ಚಲೋ ಎಂಬ ಪದದ ಅರ್ಥ ಚಾಮುಂಡಿ ಬೆಟ್ಟ ಇರಬಾರದೇ, ಅಂದರೆ ಚಾಮುಂಡಿ ಬೆಟ್ಟ ಓಡಿಸಬೇಕೆ, ತೆಗೆದು ಹಾಕಿ ಬಿಡಬೇಕೆಂತಲೇ, ಈತ ಚಾಮುಂಡಿ ಬೆಟ್ಟ ಚಲೋ ಎಂಬ ಹೆಸರನಲ್ಲಿ ರಾಜಕಾರಣ ಮಾಡಿಕೊಂಡು ಜನರಿಗೆ ಸುಳ್ಳುಗಳನ್ನು ಹೇಳಿಕೊಂಡು 5ರಿಂದ 10 ಸಾವಿರ ಜನ ಸೇರಿಸುತ್ತೇನೆ. ಯಾವುದೇ ಕಾರಣಕ್ಕೂ ಪುಷ್ಪಾರ್ಚನೆ ಮಾಡುತ್ತೀವಿ ಎನ್ನುತ್ತಿರಲ್ಲ. ಯಾರಪ್ಪನ ಮನೆ ಆಸ್ತಿ ಅದು, ನಿಮ್ಮನೆ ಜಾಗಕ್ಕೆ ಬಂದಿದ್ದೇವಾ? ನಮ್ಮನ್ನು ಬಂದು ಕೇಳುತ್ತಿದ್ದಿರಲ್ಲ. ಇದು ನಮ್ಮಪ್ಪನ ಮನೆ ಆಸ್ತಿಯೇ ಸಾರ್ವಜನಿಕವಾಗಿ ಅವರಿಗಿಷ್ಟ ಬಂದಂತಹ ಕುಲವನ್ನಾ ಆರಾಧಿಸಲು ಅವಕಾಶವಿದೆ. ಅದನ್ನು ಪ್ರತಿಯೊಬ್ಬರೂ ಗೌರವಿಸಬೇಕಿದೆ ಎಂದರು.
370 ವರ್ಷಗಳ ಕಾಲ ಮಹಾರಾಜರು ಅಂಬಾರಿ ಮೇಲೆ ಕುಳಿತು ಬರುತ್ತಿದ್ದರು. ತದನಂತರ ಎಲ್ಲರೂ ಸೇರಿ ವಿಗ್ರಹವನ್ನು ತಂದು ಇಟ್ಟರೂ ನಾವು ಎಲ್ಲಾದರೂ ಕೇಳಿದ್ದೇವೆಯೇ? ವಿರೋಧ ಮಾಡಿದ್ದೇವೆ?. ನಾವು ಕೇಳಬಹುದಲ್ಲ ಅಂಬೇಡ್ಕರ್, ಕುವೆಂಪು, ವಾಲ್ಮೀಕಿ, ಬುದ್ಧ, ನಾಲ್ವಡಿ, ಕನಕದಾಸರನ್ನು ಇಡೀ ನಾವು ಬೇಡ ಎಂದು ಹೇಳಿದ್ದೇವೆಯೇ? ನಾವಂತೂ ಯಾವುದಕ್ಕೂ ವಿರೋಧ ಮಾಡಿಲ್ಲ. ಈ ಸಂಘರ್ಷದ ಮಾತನ್ನಾಗಲಿ ಅಥವಾ ಸಂಘರ್ಷಕ್ಕಾಗಲಿ ಯಾರನ್ನೂ ಕರೆಯಬಾರದು. ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ಜತೆಯಲ್ಲಿ ಎಲ್ಲಾ ಸಮುದಾಯ ಒಗ್ಗಾಟ್ಟಾಗಿದೆ. ಎಲ್ಲವನ್ನೂ ಒಗ್ಗಾಟಗಿದ್ದೇವೆ. ಧರ್ಮವನ್ನು ಒಡೆಯುವ ಕೆಲಸ ಮಾಡಿಲ್ಲವೆಂದು ಹೇಳಿದರು.
ಚಾಮುಂಡಿ ವಿರೋಧಿಗಳು ನಾವಲ್ಲ: ಯಾರಿಗೂ ಕೂಡ ಮುಜುಗರ ತರುವುದು ನಮ್ಮ ನಾಡ ದೇವತೆ ವಿರುದ್ಧವಲ್ಲ. ಮಹಿಷಾಸುರರ ಭಾವಚಿತ್ರ ಇರುವುದಿರಿಂದ 1973ರಿಂದಲೂ ಮಂಟೆಲಿಂಗಯ್ಯ ಅವರ ಕಾಲದಿಂದಲೂ 2015ರ ಮಹಿಷಾ ಮಂಡಲ ಪುಸ್ತಕದ ಮೂಲಕ ಮಹಿಷಾ ದಸರಾ ಆಚರಣೆ ಮಾಡುತ್ತಿದ್ದೇವೆ. ಯಾವ ವರ್ಷವೂ ಅದನ್ನು ನಿಲ್ಲಿಸಿಲ್ಲ. ಹೀಗಾಗಿ ಈ ವಿಚಾರವಾಗಿ ಎಲ್ಲರೂ ಮಾತನಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಸಂಸದ ಪ್ರತಾಪಸಿಂಹ ಅವರು ಒಂದು ಸಂದೇಶ ಕೊಟ್ಟಿದ್ದಾರೆ. ಚಾಮುಂಡಿ ಬೆಟ್ಟ ಚಲೋ ಎಂಬ ಸಂದೇಶ ನೀಡಿದ್ದು, ಚಾಮುಂಡಿ ಬೆಟ್ಟವನ್ನು ಓಡಿಸಿ ಬಿಡುತ್ತೀವಿ ಎಂಬ ಸಂದೇಶ ಕೊಟ್ಟಿದ್ದಾರೆ. ಅಲ್ಲಿ ಚಾಮುಂಡಿ ಬೆಟ್ಟ ಇರಬಾರದು ಎಂಬ ಪದವನ್ನು ಬಳಸಿ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಗರದ ಎಲ್ಲಾ ಚಾಮುಂಡಿ ಭಕ್ತಾಧಿಗಳಿಗೂ ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಇಂತಹ ಒಬ್ಬ ಸಂಸದರನ್ನು ಇತಿಹಾಸದಲ್ಲಿ ಎಲ್ಲಿಯೂ ನೋಡಿಲ್ಲ. ಬಹಳಷ್ಟು ಮಂದಿ ಸಂಸದರು ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ. ದೇವೇಗೌಡರು, ಅಂಬರೀಶ್, ಸುಮಲತಾ, ವಿಶ್ವನಾಥ್, ಶ್ರೀನಿವಾಸ್ ಪ್ರಸಾದ್, ದಾಸಪ್ಪ ಸೇರಿ ಅನೇಕರು ಹೀಗೆ ನಡೆದುಕೊಂಡಿಲ್ಲ. ಇಂತಹ ಅವಿವೇಕತನದಿಂದ ಮಾತನಾಡುವ ಸಂಸದನನ್ನು ನಾವು ಇದುವರೆವಿಗೂ ಎಲ್ಲಿಯೂ ನೋಡಿಲ್ಲ. ಬಹಳಷ್ಟು ನೋವಾಗುತ್ತದೆ. ನೀವು ಯಾರೊಟ್ಟಿಗೆ ಸ್ಪರ್ಧೆಗಿಳಿದಿದ್ದರಿ, ಯಾಕೆ ಸ್ಪರ್ಧೆಗಿಳಿದಿದ್ದರಿ ಎಂಬುದು ತಿಳಿಯುತ್ತಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಕ್ಕೆ ಹಿಂದುಳಿದ ವರ್ಗವನ್ನು ಎತ್ತಿ ಕಟ್ಟುವುದು. ಶೋಷಿತ ಸಮಾಜವನ್ನು ಎತ್ತಿ ಕಟ್ಟುವುದು. ಮತಕ್ಕಾಗಿ ಈ ರಾಜಕಾರಣ ಮಾಡುತ್ತಿದ್ದಾರೆ ಎಂದರೆ ನಿನ್ನಂತಹ ದಡ್ಡ ಸಂಸದನನ್ನು ನಾನೆಂದು ನೋಡಿಲ್ಲ. ಹಿಂದು-ಮುಸ್ಲಿಂರಾಯಿತು. ಈಗ ದಲಿತರ ವಿರುದ್ಧ ಹಿಂದುಳಿದ ವರ್ಗದವನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇದಕ್ಕೆಲ್ಲಾ ನವು ಕಿವಿಗೊಡುವುದಿಲ್ಲ ಎಂದರು.
ನಾವು ಚಾಮುಂಡಿ ವಿರೋಧಿಗಳಲ್ಲ. ವೈಯುಕ್ತಿಕ ದ್ವೇಷಕ್ಕಿಳಿಯುವುದು ನಮ್ಮ ಮನಸ್ಥಿತಿಯಲ್ಲ. ಹೀಗಾಗಿ ನಾವು ಯಾವ ಸಂಘರ್ಷಕ್ಕೂ ಇಳಿಯದೇ ಕಾರ್ಯಕ್ರಮ ಮಾಡುತ್ತೇವೆ. ನಾವು ಬೇರೊಬ್ಬರ ಭಾವನೆಗೆ ಧಕ್ಕೆ ತರುವ ಪ್ರಯತ್ನ ಮಾಡುವುದಿಲ್ಲ. ಅಂದು ಆಶೋಕಪುರಂನಿಂದ ಮಹಿಷನ ಬಳಿಗೆ ಸಾವಿರಾರು ಮಂದಿ ಬೈಕ್ ರ್ಯಾಲಿ ನಡೆಸಿ ಮಹಿಷನಿಗೆ ಪುಷ್ಪಾರ್ಚನೆ ಮಾಡುತ್ತೇವೆ. ಬಳಿಕ ವಿವಿಧ ಕಲಾತಂಡಗಳ ಜತೆ ಒಂದು ಸ್ತಬ್ಧಚಿತ್ರದಲ್ಲಿ ಬುದ್ಧ, ಬಸವಣ್ಣ, ಪುಲೆ, ಆಶೋಕ, ಕುವೆಂಪು, ವಾಲ್ಮೀಕಿಯವರ ಭಾವಚಿತ್ರ ಮೆರವಣಿಗೆ ಹಾಗೂ ಬುದ್ಧ ರಥವು ಸಹ ಸಂಚರಿಸಿ ಟೌನ್ ಹಾಲ್‍ನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಅವರು ಬೇಕಿದ್ದರೇ ಚಾಮುಂಡಿಯನ್ನು ಸುತ್ತುವರೆದೂ ರಕ್ಷಣೆ ಕೊಡಲಿ ನಮ್ಮ ಅಭ್ಯಂತರ ಇಲ್ಲ. ಅವರ ಆಚರಣೆಗೆ ನಾವು ಅಡ್ಡಿಯಾಗುವುದಿಲ್ಲ. ನಮ್ಮ ಆಚರಣೆಗೆ ಅವರು ಸಹ ಅಡ್ಡಿಯಾಗಬಾರದು ಎಂದರು.
ನಾವು ಬುದ್ಧನ ಅನುಯಾಯಿಗಳಾಗಿದ್ದು ಶಾಂತಿ, ಸಾಮರಸ್ಯದ ಸಂದೇಶ ಸಾರುವುದೇ ನಮ್ಮ ಮೂಲ ಉದ್ದೇಶ ಎಂದು ಹೇಳಿದರು. ಸೋಮಯ್ಯ ಮಲೆಯೂರು, ಲೇಖಕ ಸಿದ್ದಸ್ವಾಮಿ, ಕೃಷ್ಣಮೂರ್ತಿ ಚಮರಂ, ದ್ವಾವಪ್ಪನಾಯಕ ಇನ್ನಿತರರು ಉಪಸ್ಥಿತರಿದ್ದರು.