ಮಹಿಳೆ ಹೊಟ್ಟೆಯಿಂದ ೧೬ಕೆಜಿ ಗಡ್ಡೆ ಹೊರತೆಗೆದ ವೈದ್ಯರು

ಭೋಪಾಲ್ (ಮಧ್ಯಪ್ರದೇಶ), ಮಾ.೨೨: ಇಪ್ಪತ್ತು ವರ್ಷದ ಮಹಿಳೆಯ ಹೊಟ್ಟೆಯಿಂದ ಸುಮಾರು ೧೬ ಕೆಜಿ ಗಡ್ಡೆಯೊಂದನ್ನ ಹೊರತೆಗೆದಿರುವಂತಹ ಘಟನೆ ಭೋಪಾಲ್‌ನ ಖಾಸಗೀ ಆಸ್ಪತ್ರೆಯೊಂದರಲ್ಲಿ ಬೆಳಕಿಗೆ ಬಂದಿದೆ.
ಭೋಪಾಲ್ ನ ಖಾಸಗೀ ಆಸ್ಪತ್ರೆಯ ವೈದ್ಯರು ಸುಮಾರು ಆರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ, ೨೦ ವರ್ಷ ವಯಸ್ಸಿನ ಮಹಿಳೆಯ ಹೊಟ್ಟೆಯಿಂದ ಗಡ್ಡೆಯನ್ನ ಹೊರ ತೆಗೆದಿದ್ದಾರೆ.
ಆಸ್ಪತ್ರೆಯ ವ್ಯವಸ್ಥಾಪಕ ದೇವೇಂದ್ರ ಚಂದೋಲಿಯಾಸೈಡ್ ಈ ಕುರಿತು ಮಾತನಾಡಿ, ಇದು ಅಂಡಾಶಯದ ಗೆಡ್ಡೆಯಾಗಿದ್ದು, ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದರು. ಅಲ್ಲದೆ ಎರಡು ದಿನಗಳ ಹಿಂದೆ, ಮಹಿಳೆ ರಾಜ್‌ಗರಂಡ್‌ನಿಂದ ಬಂದಿದ್ದು, ಊಟ ಮಾಡುವ ವೇಳೆ ಹಾಗೂ ನಡೆಯುವಾಗ ತುಂಬಾ ತೊಂದರೆ ಅನುಭವಿಸುತ್ತಿದ್ದಳು, ನಂತರ ಆಕೆಯನ್ನ ಪರೀಕ್ಷಿಸಲಾಗಿ,
ಆಕೆಯ ಹೊಟ್ಟೆಯಲ್ಲಿ ಗಡ್ಡೆ ಇರುವುದು ತಿಳಿದು ಬಂದಿದ್ದು,
ಆಕೆಗೆ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಗಡ್ಡೆಯನ್ನ ಹೊರತೆಗೆದಿರುವುದಾಗಿ
ತಿಳಿಸಿದ್ದಾರೆ. ಅಲ್ಲದೆ ಮಹಿಳೆಆರೋಗ್ಯವಾಗಿದ್ದು,
ಈ ಗೆಡ್ಡೆಯನ್ನು ಅಂಡಾಶಯದ ಎಂದು ಕರೆಯಲಾಗುತ್ತದೆ ಎಂದರು. ಮಹಿಳೆಯ ತೂಕವು ೪೮ ಕಿಲೋಗ್ರಾಂ ಮತ್ತು ಗಡ್ಡೆಯ ತೂಕ ೧೬ ಆಗಿತ್ತು ಕೆಜಿ ಇದ್ದ ಪರಿಣಾಮ ಇದು ಪ್ರಮುಖ ಶಸ್ತ್ರಚಿಕಿತ್ಸೆಯಾಗಿತ್ತು. ಸಮಯಕ್ಕೆ ಸರಿಯಾಗಿ ಗಡ್ಡೆಯನ್ನವ ತೆಗೆಯದಿದ್ದರೆ ಆಕೆಯ ಬದುಕುಳಿಯುವ ಸಾಧ್ಯತೆಗಳು ಕಡಿಮೆಯಾಗುತ್ತಿದ್ದವು. ಶಸ್ತ್ರಚಿಕಿತ್ಸೆ ಸುಮಾರು ಆರು ಗಂಟೆಗಳ ಕಾಲ ನಡೆಯಿತು. ಅವಳು ಅಪಾಯದಿಂದ ಹೊರಗುಳಿದಿದ್ದಾಳೆ “ಎಂದು ಅವರು ಹೇಳಿದರು