ಮಹಿಳೆ ಹೊಟ್ಟೆಯಲ್ಲಿದ್ದ ಗಡ್ಡೆಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

ಕೋಲಾರ,ಮೇ ೫: ಮಹಿಳೆಯ ಹೊಟ್ಟೆಯಲ್ಲಿದ್ದ ದೊಡ್ಡ ಗಾತ್ರದ ಗಡ್ಡೆ ಹೊಡೆದು ತೀವ್ರ ರಕ್ತಸ್ರಾವವಾಗಿ ಸಾವು ಬದುಕಿನ ಜೊತೆ ಹೋರಾಟ ನಡೆಸುತ್ತಿದ್ದ ಮಹಿಳಿಗೆ ತುರ್ತು ಶಸ್ತ್ರ ಚಿಕಿತ್ಸೆ ಮೂಲಕ ಗಡ್ಡೆಯನ್ನು ಹೊರ ತೆಗೆದು, ಮಹಿಳೆಯ ಪ್ರಾಣ ಉಳಿಸಿ ಡಾ.ಡಿ.ಕೆ.ರಮೇಶ್ ರವರು ಮಾನವೀಯತೆಯನ್ನು ಮೆರೆದಿದ್ದಾರೆ.
ಮುಳಬಾಗಿಲು ತಾಲೂಕಿನ ದೊಡ್ಡ ಬೇವಹಳ್ಳಿ ಗ್ರಾಮದ ನಿವಾಸಿ ವಕೀಲ ಶಂಕರಪ್ಪ ರವರ ಸಂಬಂಧಿ ಲಕ್ಷ್ಮಮ್ಮ (೬೦) ಸುಮಾರು ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಬೇಟಿ ನೀಡಿದ್ದರೂ ಯಾರೂ ಸಹ ಕರೋನಾ ಸಂದರ್ಭದಲ್ಲಿ ಚಿಕಿತ್ಸೆ ನೀಡಲು ವೈದ್ಯರು ಹಿಂದೇಟು ಹಾಕುತ್ತಿದ್ದು, ಇದ್ಯಾವುದನ್ನೂ ಲೆಕ್ಕಿಸದೆ ತುರ್ತು ಪರಿಸ್ಥಿತಿಯಲ್ಲಿದ್ದ ಮಹಿಳೆಯನ್ನು ಉಳಿಸಿಕೊಳ್ಳಲು ಅರವಳಿಕೆ ವೈದ್ಯರನ್ನು ಸಂಪರ್ಕಿಸಿ ಅವರ ಮೊನವೊಲಿಸಿ ಅವರಿಂದ ಚುಚ್ಚುಮದ್ದನ್ನು ಕೊಡಿಸಿ, ಇಂದು ನಗರದ ಎಂ.ಬಿ ರಸ್ತೆಯಲ್ಲಿರುವ ಆರ್.ಕೆ ನರ್ಸಿಂಗ್ ಹೋಮ್‌ನಲ್ಲಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಮಹಿಳೆಯ ಪ್ರಾಣವನ್ನು ಉಳಿಸಿ ಯಶಸ್ವಿಯಾಗಿದ್ದು, ಸಾರ್ವಜನಿಕರು ಡಾ.ಡಿ.ಕೆ ರಮೇಶ್ ರವರ ಸೇವೆಯನ್ನು ಪ್ರಶಂಸಿಸಿದ್ದಾರೆ.
ಡಾ.ಡಿ.ಕೆ ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ದಿನೇದಿನೇ ಕರೋನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದೆ. ಕರೋನಾ ಬಗ್ಗೆ ಯಾವುದೇ ರೀತಿಯ ಭಯ ಪಡುವ ಅವಶ್ಯಕತೆಯಿಲ್ಲ. ಉಸಿರಾಟದ ತೊಂದರೆ ಇದ್ದವರು ಮಾತ್ರ ವೈದ್ಯರನ್ನು ಸಂಪರ್ಕಿಸಿ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವುದು ಉತ್ತಮ. ಸಾರ್ವಜನಿಕರು ಅನವಶ್ಯಕವಾಗಿ ಓಡಾಡುವುದನ್ನು ಬಿಡಬೇಕು. ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಜರ್ ಬಳಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಮನೆಯಲ್ಲಿ ಇರುವ ಮೂಲಕ ತಮ್ಮ ಕುಟುಂಬ ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ತಿಳಿಸಿದರು.
ಲಕ್ಷ್ಮೀದೇವಮ್ಮ ರವರ ಸಂಬಂಧಿ ಎಬಿವಿಪಿ ಮಾಜಿ ಜಿಲ್ಲಾ ಸಂಚಾಲಕ್ ಪ್ರದೀಪ್ ಕುಮಾರ್ ಮಾತನಾಡಿ, ಸುಮಾರು ಆಸ್ಪತ್ರೆಗಳಲ್ಲಿ ತೋರಿಸಿದ್ದರೂ ಸಹ ಶಸ್ತ್ರ ಚಿಕಿತ್ಸೆಗೆ ಯಾರೂ ಮುಂದಾಗಲಿಲ್ಲ. ನಂತರ ಆರ್.ಕೆ.ನರ್ಸಿಂಗ್ ಹೋಮ್‌ನ ಡಾ.ಡಿ.ಕೆ ರಮೇಶ್ ರವರನ್ನು ಸಂಪರ್ಕಿಸಿದ್ದಾಗ ನಮ್ಮ ಕುಟುಂಬಕ್ಕೆ ಧೈರ್ಯ ತುಂಬಿ ಸತತ ನಾಲ್ಕು ಗಂಟೆಗಳ ಕಾಲ ಶಸ್ತ್ರ ನಡೆಸಿ ಹೊಟ್ಟೆಯಲ್ಲಿದ್ದ ಗಡ್ಡೆಯನ್ನು ಹೊರ ತೆಗೆದಯ ಮಹಿಳೆಯ ಪ್ರಾಣ ಉಳಿಸಿದ್ದಾರೆ. ಇಂತಹ ವೈದ್ಯರು ಸಮಾಜಕ್ಕೆ ಬೇಕಾಗಿದೆ ಎಂದು ಡಾ.ಡಿ.ಕೆ ರಮೇಶ್ ರವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.