ಮಹಿಳೆ ಸ್ವಾವಲಂಬನೆಯ ಶಕ್ತಿಯಾಗುತ್ತಿದ್ದಾಳೆ

ಧಾರವಾಡ,ಮಾ7 : ಹಿಂದೆ ಪರಾವಲಂಬಿಯಾಗಿದ್ದ ಮಹಿಳೆ ಇಂದು ಶಿಕ್ಷಣದಿಂದ ಪ್ರಜ್ಞಾವಂತಳಾಗಿ ಸ್ವಾವಲಂಬನೆಯ ಶಕ್ತಿಯಾಗಿ ಪ್ರಗತಿಯ ಹಾದಿಯಲ್ಲಿ ಹೆಜ್ಜೆಇಡುತ್ತಿರುವುದುಆಶಾದಾಯಕ ಬೆಳವಣಿಗೆ ಎಂದು ವಿಶ್ರಾಂತ ಪ್ರಾಧ್ಯಾಪಕಿಡಾ. ಗುರುದೇವಿ ಹುಲೆಪ್ಪನವರಮಠಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ಮಹಿಳಾ ದಿನಾಚರಣೆಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ, ಸಮಾರೋಪ ನುಡಿಗಳನ್ನಾಡಿ, ಮಹಿಳೆಯರು ಇಂದುತಮ್ಮಕಾರ್ಯಕ್ಷಮತೆ, ಕುಶಲತೆ ಹಾಗೂ ಕರ್ತವ್ಯ ಪ್ರಜ್ಞೆಯಿಂದದೇಶದ ಆಡಳಿತ, ಉದ್ಯಮಕ್ಷೇತ್ರದಲ್ಲಿಅಪಾರ ಸಾಧನೆ ಮಾಡುತ್ತಿದ್ದಾಳೆ ಎಂದರು.
12 ನೇ ಶತಮಾನದಲ್ಲಿ ಸ್ತ್ರೀಯರಿಗೆ ಅನುಭವ ಮಂಟಪದ ಮೂಲಕ ಸಿಕ್ಕ ಸ್ವಾತಂತ್ರ್ಯ ಹಾಗೂ ಸಮಾನತೆಯಿಂದಧಾರ್ಮಿಕಕ್ಷೇತ್ರದಲ್ಲೂ ವಚನ ಸಾಹಿತ್ಯರಚಿಸುವಂತಾಯಿತು.ಮಹಿಳೆ ಇಂದುತನ್ನಜೀವನ ಹೇಗಿರಬೇಕೆಂಬುದನ್ನು ನಿರ್ಧರಿಸುವಲ್ಲಿ ಸ್ವತಂತ್ರತೆ ಹೊಂದಿದ್ದಾಳೆ.ಸ್ತ್ರೀಯರು ಪುರುಷರಷ್ಟೇ ಹಕ್ಕು ಬಾಧ್ಯತೆಗಳನ್ನು ಹೊಂದಿದ್ದರಿಂದಕುಟುಂಬದಲ್ಲಿ ಸಮರಸದಜೀವನಅಗತ್ಯ.ಅಂದಾಗ ಮಹಿಳೆಯರು ಇನ್ನೂ ಹೆಚ್ಚು ಸಾಧನೆ ಮಾಡಲು ಸಾಧ್ಯವಾಗುತ್ತದೆ.ಸ್ತ್ರೀಯರು ಇಂದು ಅಬಲೆಯರಲ್ಲ, ಸಬಲೆಯರೂ, ಪ್ರತಿಭಾವಂತರೂಆಗಿದ್ದಾರೆಎಂದರು.
ಕ.ವಿ.ವ.ಸಂಘದಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ, ಮಹಿಳಾ ವೇಷ ಭೂಷಣ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಇಂಥ ಕಾರ್ಯಕ್ರಮಗಳು ಪ್ರಜ್ಞಾವಂತ ಸುಶಿಕ್ಷಿತ ಮಹಿಳೆಯರು ಸೇರಿದಂತೆ ಅಶಿಕ್ಷಿತರಿಗೂ ಆಯೋಜಿಸಿದರೆ ಇಡಿ ಮಹಿಳಾ ಸಮುದಾಯಕ್ಕೆಗೌರವ ಬಂದಂತೆಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ.ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ಮಾತನಾಡಿ, ಸಂಘವು ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.ಇದು ಭವಿಷ್ಯಕ್ಕೊಂದು ಭರವಸೆಯಕಾರ್ಯಕ್ರಮ .ಸಂಘವು ಇನ್ನೂಇಂಥ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ಮಾಡುತ್ತದೆಎಂದರು.
ಡಾ. ಶೈಲಜಾಅಮರಶೆಟ್ಟಿ ಸ್ವಾಗತಿಸಿದರು.ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು.ಡಾ. ಜಿನದತ್ತ ಹಡಗಲಿ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರೊ.ಮಾಲತಿ ಪಟ್ಟಣಶೆಟ್ಟಿ, ಶಿವಾನಂದ ಭಾವಿಕಟ್ಟಿ, ಶಂಕರ ಹಲಗತ್ತಿ, ಶಂಕರ ಕುಂಬಿ, ವೀರಣ್ಣಒಡ್ಡೀನ ಮತ್ತು ಪ್ರೊ.ಎಸ್. ಶಾರದಾ ಹಾಗೂ ಶಾರದಾ ಕೌದಿ, ಎಂ. ಎಸ್. ನರೇಗಲ್ಲ ಮತ್ತಿತರರು ಭಾಗವಹಿಸಿದ್ದರು.