
ಸಿಂಧನೂರು,ಆ.೨೧-
ದೇಹ ದಾನ ಮಾಡಿದ ಮಹಿಳೆ ಸಾವನ್ನಪ್ಪಿದು ಮಹಿಳೆಯ ದೇಹವನ್ನು ಇಂದು ಕುಟುಂಬಸ್ತರು ಹಾಗೂ ಕಾರುಣ್ಯ ಆಶ್ರಮದ ಸಮ್ಮುಖದಲ್ಲಿ ಮುಂಜಾನೆಗೆ ಜಿಲ್ಲಾ ರಿಮ್ಸ್ ಆಸ್ಪತ್ರೆಗೆ ಹಸ್ತಾಂತರ ಮಾಡಲಾಯಿತು.
ನಗರದ ನಟರಾಜ ಕಾಲೋನಿ ನಿವಾಸಿಯಾದ ಟಿ.ಬಸಮ್ಮ ದಿ.ಟಿ.ಬಸವರಾಜ ಕೆಲವು ದಿನಗಳ ಹಿಂದೆ ಕಾರುಣ್ಯ ಆಶ್ರಮದ ಮೂಲಕ ದೇಹ ದಾನ ನೇತ್ರದಾನದ ನೋಂದಣಿ ಮಾಡಿಸುವ ಮೂಲಕ ಕುಟುಂಬಸ್ಥರ ಸಮಕ್ಷಮದಲ್ಲಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದರು.
ಆಗಸ್ಟ್ ೧೯ ಮಧ್ಯಾಹ್ನ ೧:೩೦ ನಿಮಿಷಕ್ಕೆ ಬಸಮ್ಮ ನಿಧನರಾಗಿದ್ದು, ತಕ್ಷಣವೇ ಅವರ ಕುಟುಂಬದ ಹಿರಿಯರಾದ ಟಿ. ನಾಗರಡ್ಡೆಪ್ಪ, ಸೊಸೆ ಡಾ. ಸ್ವರ್ಣಲತಾ, ಮಕ್ಕಳಾದ ಶರಣಬಸವ, ಶಿವರಾಜ, ಇವರು ಕಾರುಣ್ಯ ಆಶ್ರಮದ ಮೂಲಕ ರಾಯಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ಮಾಹಿತಿ ನೀಡಿ ದೇಹ ದಾನದ ಜವಾಬ್ದಾರಿಯನ್ನು ನಿಭಾಯಿಸಿದರು.
ವೈದ್ಯ ಕುಟುಂಬದ ಟಿ.ಬಸಮ್ಮ ವೈದ್ಯರುಗಳಿಗೆ ಜನ್ಮ ನೀಡುವ ಮೂಲಕ ವೈದ್ಯಕೀಯ ಪ್ರಪಂಚಕ್ಕೆ ದೊಡ್ಡ ಕೊಡುಗೆ ನೀಡಿದ ಕಲ್ಯಾಣ ಕರ್ನಾಟಕದ ಭಾಗದ ಮೊದಲ ಮಹಿಳೆಯಾಗಿದ್ದಾಳೆ ಎಂದು ಕಾರುಣ್ಯ ಆಶ್ರಮದ ಆಡಳಿತಾಧಿಕಾರಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿದರು.
ಮುಕ್ತಿ ಎಂದರೆ ಸಾವಲ್ಲಾ ಸಮಾಜಕ್ಕೆ ಉಪಯೋಗವಾಗುವ ಕಾರ್ಯಗಳು ಈ ತಾಯಿ ತನ್ನ ಮುಕ್ತಿಯನ್ನು ಸಾವಿನ ಮೂಲಕ ಸಮಾಜಕ್ಕೆ ತನ್ನ ದೇಹ ಮಣ್ಣಾಗದೆ ಅಗ್ನಿಸ್ಪರ್ಶವಾಗದೆ ಬದುಕಿರುವ ಜೀವಿಗಳಿಗೆ ಎಲ್ಲಾ ರೋಗಗಳಿಂದ ಮುಕ್ತಿ ಸಿಕ್ಕು ವೈದ್ಯಕೀಯ ಶಿಕ್ಷಣದ ಬೆಳವಣಿಗೆಗೆ ನನ್ನ ದೇಹ ಉಪಯೋಗವಾಗಲಿ ಎನ್ನುವ ಒಂದು ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಇಂದು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ.
ಕಾರುಣ್ಯ ಎನ್ನುವ ಕುಟುಂಬ ನಗರದಲ್ಲಿ ಬರಿ ಅನಾಥ ಜೀವಿಗಳನ್ನು ರಕ್ಷಿಸುವುದಲ್ಲದೆ ಸಮಾಜಕ್ಕೆ ಉಪಯೋಗವಾಗುವ ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಿದೆ. ಈ ತಾಯಿಯ ಮರಣ ಸಮಾಜಕ್ಕೆ ತಿಳಿಸಿಕೊಟ್ಟಿದ್ದು ಪ್ರಥಮ ಅನುಭವ ನಾನು ನನ್ನದು ಎನ್ನುವ ಈ ಸ್ವಾರ್ಥ ಪ್ರಪಂಚದಲ್ಲಿ ನಗರದ ದಂತ ವೈದ್ಯರಾದ ಡಾ.ಸ್ವರ್ಣ ಲತಾ ಇವರ ಸಮಾಜ ಸೇವೆ ಶ್ಲಾಘನೀಯವಾಗಿದೆ.
ಕರುಣಾಮಯಿ ಕಾರುಣ್ಯ ಕುಟುಂಬ ಇವರ ಕುಟುಂಬಕ್ಕೆ ಹೃದಯಪೂರ್ವಕ ಕರುಣೆಯ ಕಾರುಣ್ಯ ಮೂರ್ತಿಗಳು ಎನ್ನುವ ಅಭಿನಂದನೆಗಳನ್ನು ಸಲ್ಲಿಸಿ ಮುಂದಿನ ದಿನಮಾನಗಳಲ್ಲಿ ಈ ಕುಟುಂಬಕ್ಕೆ ವಿಶೇಷ ಗೌರವ ಬಿರುದುಗಳೊಂದಿಗೆ ಸನ್ಮಾನಿಸಲಾಗುವುದು ಎಂದು ತಮ್ಮ ಭಾವನೆಗಳನ್ನು ಹಂಚಿಕೊಂಡರು.
ಟಿ. ನಾಗರಡ್ದೆಪ್ಪ, ಟಿ.ಶರಣಬಸಪ್ಪ, ಡಾ. ಸ್ವರ್ಣ ಲತಾ, ಟಿ. ಶಿವರಾಜ, ಟಿ. ಸುರೇಶ ಹಾಗೂ ಅವರ ಅಪಾರ ಕುಟುಂಬ ವರ್ಗ ಮತ್ತು ಸ್ನೇಹ ಬಳಗದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ರಾಯಚೂರು ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ದೇಹವನ್ನು ಒಪ್ಪಿಸಲಾಯಿತು.