ಮಹಿಳೆ ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕಿಯವಾಗಿ ಬೇಳೆಯಲು ಸಾಕಷ್ಟು ಅವಕಾಶಗಳಿವೆ :ವೆಂಕಣ್ಣ ಹೊಸಮನಿ

ವಿಜಯಪುರ, ಜು.22-ತೋಟ್ಟಿಲು ತೂಗುವ ಕೈ ಜಗತ್ತನ್ನೆ ತೂಗಬಹುದು, ಮಹಿಳೆ ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕಿಯವಾಗಿ ಬೇಳೆಯಲು ಸಾಕಷ್ಟು ಅವಕಾಶಗಳಿವೆ ಎಂದೂ ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಕಾನೂನು ಸೇವೆಗಳ ಪ್ರಾಧಿಕಾರ ವೆಂಕಣ್ಣ ಹೊಸಮನಿ ಹೇಳಿದರು.
ಅವರು ಕಂದಗಲ ಹಣಮಂತರಾಯ ರಂಗಮಂದಿರದಲ್ಲಿ ಕರ್ನಾಟಕರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ನವದೆಹಲಿ, ಜಿಲ್ಲಾ ಮಹಿಳಾ ಘಟಕ ವಿಜಯಪುರ. ಇವರ ಸಹಯೋಗದಲ್ಲಿ ಮಹಿಳಾ ಹಕ್ಕುಗಳು ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿದರು.
ಹಿಂದೂಳಿದ ಮಹಿಳೆಯರು ಮೌಡ್ಯಗಳನ್ನು, ಮೂಡನಂಬಿಕೆಗಳು ಮತ್ತುದಾಶ್ಯದ ಸಂಕೋಲೆಯನ್ನು ತೊರೆದು ಮುನ್ನುಗಬೇಕು, ಮಹಿಳೆ ಅಬಲೆ ಅಲ್ಲ ಸಬಲೆ ಎನ್ನುವುದನ್ನುತೊರಿಸಬೇಕಾಗಿದೆ. ಆ ನಿಟ್ಟಿನಲ್ಲಿ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಮಹಿಳ ಘಟಕ ವಿಜಯಪುರದವರು ಮಾಡುತ್ತಿರುವುದು ಸ್ಲಾಗ್ಯನಿಯವಾದದ್ದು ಮುಂದಿನ ದಿನಗಳಲ್ಲಿ ಪ್ರತಿ ಹಂತದಲ್ಲಿಯೂ ನಾವು ನಿಮ್ಮಜೋತೆ ನಿಲ್ಲುತ್ತೆವೆ ಎಂದು ಹೇಳಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಸದಸ್ಯರು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಅಧ್ಯಕ್ಷರು ಮಾನವ ಹಕ್ಕುಗಳು ಹಾಗೂ ಭ್ರಪ್ಟಾಚಾರ ಸಂಸ್ಥೆ ನವದೆಹಲಿ ಡಾ// ಮೋಹನರಾವ ನಲವಡೆ ಮಾತನಾಡಿ ವಿಜಯಪುರ ಮಹಿಳಾ ಘಟಕದಅಧ್ಯಕ್ಷೆ ಶ್ರೀಮತಿ ಸಿದ್ದಮ್ಮಾ ಕೊಳುರಗಿ ಏಳುಬಿಳುಗಳನ್ನು ಕಂಡವರು ಇವತ್ತು ಸಾಮಾಜಿP Àರಂಗದಲ್ಲಿ ಪ್ರತಿ ಒಬ್ಬರು ಗುರುತಿಸುವ ಹಾಗೆ ಬೆಳದಿದ್ದಾರೆ. ನನ್ನಂತೆ ಶೋಷಿತ ಸಮುದಾಯದ ಮಹಿಳೆಯರು ಅಭಿವೃಧಿ ಹೊಂದಲು ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದಾರೆ, ಮುಂದಿನ ದಿನಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ಈ ಸಂಘವು ಪ್ರತಿಯೊಂದು ಕ್ಷೇತ್ರದಲ್ಲಿ ಮುಂಚೂನಿಯಲ್ಲಿ ಇರಬೇಕು. ಪ್ರತಿಕ್ಷೇತ್ರದಲ್ಲಿಯೂ ಇವರ ಕಾರ್ಯವನ್ನು ಗುರುತಿಸುಂತಾಗಲು ನಮ್ಮಕೇಂದ್ರ ಸಂಘ ಬೇಂಬಲವಾಗಿ ನಿಲ್ಲುತದೆ ಎಂದೂ ಹೇಳಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ ಜಿಲ್ಲಾ ಸಮಾಜಕಲ್ಯಾಣ ಅಧಿಕಾರಿಗಳಾದ ಶ್ರೀ ರಾಮನಗೌಡ ಕನ್ನೊಳಿ ಮಾತನಾಡಿ ನಮ್ಮ ಇಲಾಖೆಯಲ್ಲಿ ಹಿಂದುಳಿದ ಜಾತಿಯ ಮಹಿಳೆಯರಿಗೆ ಹಲವಾರು ಯೋಜನೆಗಳಿದ್ದು, ಆ ಯೋಜನೆಗಳಿಂದ ಸ್ವಾವಲಂಬಿ ಬದುಕನ್ನು ಕಟ್ಟಿಕೊಳಲು ಪೂರಕವಾಗಿದೆ. ಇಲಿಯ ಮಹಿಳಾ ಶಾಖೆಯವರು ನಮ್ಮನ್ನು ಸಂಪರ್ಕಿಸಿ ಯೋಜನೆಗಳನ್ನು ಪಡೆದುಕೊಳ್ಳಲು ಹಾಗೂ ಇದರ ಸದ್ಬಳಿಕೆಯನ್ನು ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಇನ್ನೂರ್ವಆವ್ಹಾನಿತರಾಗಿ ಅಗಮಿಸಿದ ಡಾ. ಅಂಬೇಡ್ಕರ ನಿಗಮದ ಜಿಲ್ಲಾ ವ್ಯವಸ್ಥಾಪಕಿಯಾದ ರೇಣುಕಾ ಸಾತರಲೆ ಮಾತನಾಡಿ ಡಾ.ಅಂಬೇಡ್ಕರ ನಿಗಮ ಮಹಿಳೆಯರ ಸರ್ವೊತೊಮುಖ ಅಭಿವೃಧಿಯಾಗಿ ಹತ್ತು ಹಲವು ಯೋಜನೆಗಳಿದ್ದು ಶಸಕ್ತರಾಗಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಜಿಲ್ಲಾ ಅಧ್ಯಕ್ಷರಾದ ಸಂತೋಷ ಸಾಲವಾಡಗಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸುನೀಲ ಉಕ್ಕಲಿ ಮಾತನಾಡಿದರು.
ಕಾರ್ಯಕ್ರಮ ಸಂಘಟಿಸಿದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾದ ಸಿದ್ದಮ್ಮಾ ಕೊಳುರಗಿ ಮಾತನಾಡಿ ಈ ಜಿಲ್ಲೆಯಲ್ಲಿ ಸಾಕಷ್ಟು ಹಿಂದುಳಿದ ಮಹಿಳೆಯರು ಹಲವಾರು ಯೋಜನೆಗಳಿಂದ ವಂಚಿತರಾಗಿದ್ದಾರೆ ಎಲ್ಲರನ್ನು ಮುಂಚೂನಿಗೆ ತರಲ್ಲು ನಿರಂತರವಾಗಿ ಕಾರ್ಯಕ್ರಮ, ತರಬೇತಿಯನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮಾಡಲಾಗುವುದು. ಕೇಂದ್ರ ಸಂಘ ಮತ್ತುರಾಜ್ಯ ಸಂಘ ಮುಂದಿನ ದಿನಗಳಲ್ಲಿ ನಮಗೆ ಮಾರ್ಗದರ್ಶನ ಸಹಕಾರ ನೀಡಲು ಮನವಿ ಮಾಡಿದರು.
ವೇದಿಕೆ ಮೇಲೆ ಎಚ.ಆರ್,ಎ.ಸಿ.ಎಪ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಂಕರ, ಕಾರ್ಯದರ್ಶಿ ರಾಜುಸಮಾಜ ಸೇವಕಿ ಎನ್.ಆರ್ ನಾಗರತ್ನ, ಜಾಗೃತಿ ಮಹಿಳಾ ಸಂಘದಸಲಹಾ ಸಮಿತಿಯಅಧ್ಯಕ್ಷರಾದರವಿ ಕಿತ್ತೂರ ಉಪಸ್ಥಿತರಿದರು, ಇದೆ ಸಂದರ್ಭದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷರುಗಳಾದ ಯಶೋದಾ ಮೇಲಿನಕೆರಿ, ರೇಣುಕಾ ಮಾದರ (ಅರಳದಿನ್ನಿ), ನಂದಾಗುನ್ನಾಪುರ, ಜಯಶ್ರೀ ಬಿಂಗಿ, ಶಿವಲಿಲಾ ಚಲವಾದಿ, ಪುಷ್ಪಾ ಮನ್ನೂರ, ಮಲ್ಲಮ್ಮಾ ಹವಳಗಿ, ಜಯಶ್ರೀ ಚಿಗರಿ, ಕಸ್ತೂರಿಬಾಯಿ ಪಾಟೀಲ, ಉಮಾಶ್ರೀ ವಾಘಮೊರೆ, ಚಂದಾಬಾಯಿ ಮಾದರ, ಪಾರ್ವತಿ ಮಾದರ, ಯಲ್ಲವ್ವ ಕತ್ನಳಿ, ರೇಣುಕಾ ಬಗಲಿ, ರೇವಮ್ಮಾಗಾಡಿವಡ್ಡರಇವರಿಗೆ ಪದಗ್ರಹಣ ಮಾಡಿಗುರುತಿನಚೀಟಿ ಮತ್ತು ಅಧಿಕಾರ ಪತ್ರವನ್ನು ವಿತರಿಸಲಾಯಿತ್ತು. ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ಭಾಗವಹಿಸಿ ಕಾರ್ಯಕ್ರಮನ್ನು ಯಶಸ್ವಿಗೊಳಿಸಿದರು. ಅಶೋಕ ಕಾಳೆ ಸ್ವಾಗತಿಸಿದರು, ಶ್ರೀಮತಿ ಮಠಪತಿ ನಿರೂಪಿಸಿದರು, ನಂದಾಗುನ್ನಾಪುರ ವಂದಿಸಿದರು.