
ಸೊರಬ.ಮಾ.9:ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಸದೃಢ ಸಮಾಜ ಕಟ್ಟುವಲ್ಲಿ ಒಬ್ಬ ಸಹನಾಮೂರ್ತಿ ಮಹಿಳೆಯಾಗಿ ಕಾಣುತ್ತಾಳೆ ಎಂದು ಅಕ್ಕನ ಬಳಗದ ಅಧ್ಯಕ್ಷ ರೇಣುಕಮ್ಮ ಗೌಳಿ ಅಭಿಪ್ರಾಯಪಟ್ಟರು. ಪಟ್ಟಣದಲ್ಲಿ ಬುಧವಾರ ಮುರುಗಾ ಮಠದಲ್ಲಿ ವಿಶ್ವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಸಹನಾಶೀಲತೆ ಗುಣವನ್ನು ಹೊಂದಿದ ಮಹಿಳೆ ತಾಯಿಯಾಗಿ. ಗೃಹಿಣಿಯಾಗಿ. ಶಿಕ್ಷಕಿಯಾಗಿ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತಾಳೆ ನೋವು ನಲಿವುಗಳನ್ನು ಸಹಿಸಿಕೊಳ್ಳುವ ಗುಣವುಳ್ಳ ಸಹನಾ ಮೂರ್ತಿ ಮಹಿಳೆಯಾಗಿದ್ದಾಳೆ ಎಂದು ಹೇಳಿದರು. ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಗಾಗಿ ಚಮಚದಿಂದ ಬೆಂಕಿಕಡ್ಡಿ ಹೊರಗೆ ಹಾಕುವುದು, ಮ್ಯೂಸಿಕಲ್ ಚೇರ್, ಹುಣಸೆ ಬೀಜದಿಂದ ಮಾರ್ಚ್ ಎಂಟು ಬರೆಯುವುದು, ಲೆಮನ್ ಮತ್ತು ಚಮಚ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸ್ನೇಹ ಸುರಭಿ ಅಧ್ಯಕ್ಷ ಸರಸ್ವತಿ , ರೇಖಮ್ಮ, ಗಿರಿಜಮ್ಮ, ಜಯಮಾಲಾ, ಪುಷ್ಪ, ಶ್ರೀಮತಿ, ರೂಪ ,ಸುನೀತಾ, ರೇವತಿ,ಉಮಾ, ಸುಧಾ, ಪುಷ್ಪಾ, ಮಾನಸ, ಸವಿತಾ, ಜ್ಯೋತಿ, ಪೂರ್ಣಿಮಾ, ಹರ್ಷಿತ, ಲಕ್ಷ್ಮಿ, ಹೇಮಾ, ಅಮೃತ , ರಾಮ ಮಮತಾ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.