ಮಹಿಳೆ ಸಬಲೆ ಮಾತ್ರವಲ್ಲ ಪ್ರಬಲೆಯೂ ಹೌದು

ಧಾರವಾಡ,ಮಾ13: ಸ್ತ್ರೀಯರನ್ನು ನಿರ್ಲಕ್ಷಿಸಿದ ದೇಶಅರ್ಧಕತ್ತಲೆಯಲ್ಲಿಇದ್ದಂತೆ. ಇಂದು ಮಹಿಳೆಯರು ಕೇವಲ ಸಬಲೆ ಮಾತ್ರವಲ್ಲ ಪ್ರಭಲೆಯೂ ಆಗಿದ್ದಾಳೆ.ಮಹಿಳೆಯರನ್ನು ನೋಡುವದೃಷ್ಟಿಕೋನ ಬದಲಾಗಬೇಕಾಗಿದೆ.ಕಾನೂನಿನ ಬಗ್ಗೆ ತಿಳುವಳಿಕೆ ಕನಿಷ್ಠವಾದರೂ ಮಹಿಳೆಗೆ ಬೇಕು ಎಂದು ಶೈಕ್ಷಣಿಕಚಿಂತಕ ಎಂ.ಎಂ.ಚಿಕ್ಕಮಠಅಭಿಪ್ರಾಯಪಟ್ಟರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಶತಾಯುಷಿ ಶ್ರೀಮತಿ ಗೌರಮ್ಮಚೆನ್ನಪ್ಪ ಹಲಗತ್ತಿಕಾರ್ಯಕ್ರಮದಲ್ಲಿಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ-2013ರ ನಿಮಿತ್ತ ‘ಶ್ರಮಿಕ ಮಹಿಳೆ’ ಪ್ರಶಸ್ತಿ ಪ್ರದಾನ ಸಮಾರಂಭದಅತಿಥಿಯಾಗಿ ಆಗಮಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದಅವರು, ಮಹಿಳೆ ಮಾನವ ಸಂತತಿಯತಾಯಿ. ನಮ್ಮ ಸಮಾಜ ಮಹಿಳೆಗೆ ಗ್ರಹದೇವತೆಗ್ರಹಲಕ್ಷ್ಮೀ ಎಂಬ ಶ್ರೇಷ್ಠ ಸ್ಥಾನವನ್ನು ಕಲ್ಪಿಸಿದೆ.ಆದರೆ, ಪುರುಷ ಪ್ರಧಾನ ಸಮಾಜವು ಮಹಿಳೆಯರನ್ನು ಪ್ರತಿ ಹಂತದಲ್ಲಿಯೂಅತ್ಯಂತ ನಿಕೃಷ್ಟವಾಗಿ ಕಾಣುತ್ತಾ ಬಂದಿದೆ.ಅವರು ಪುರುಷ ಸಮಾನವಾದ ಶ್ರಮವನ್ನು ನೀಡಿದರೂ ಅವಳಿಗೆ ಅತಿಕಡಿಮೆ ಕೂಲಿ ವೇತನವನ್ನು ನೀಡಲಾಗುತ್ತಿದೆ.ಕುಟುಂಬದಉತ್ಪಾದನೆಯಲ್ಲಿ ಅವಳ ಶ್ರಮವನ್ನು ಪರಿಗಣಿಸಲಾಗುತ್ತಿಲ್ಲ. ಗೃಹಕೃತ್ಯ ಅವಳ ಕರ್ತವ್ಯದಒಂದು ಭಾಗಎಂದು ತಿಳಿದಿರುವುದು ಶೋಚನೀಯ.ಮಹಿಳೆಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕಿಗೂ ಚ್ಯುತಿಉಂಟಾಗಿದೆ.
ನಮ್ಮ ಸಮಾಜ ಪ್ರತಿಕ್ಷೇತ್ರದಲ್ಲಿ ಪ್ರತಿಕ್ಷಣ ಅವಳನ್ನು ದೈಹಿಕವಾಗಿ, ಮಾನಸಿಕವಾಗಿ ತಾತ್ಸಾರ ಮನೋಭಾವ ಹೊಂದಿದೆ.ದೆಹಲಿಯ ನಿರ್ಭಯಾಳ ಆದದೌರ್ಜನ್ಯ ಪ್ರಕರಣಗಳು ಇನ್ನೂ ನಿರಂತರವಾಗಿ ಸಂಭವಿಸುತ್ತಿರುವುದುಒಂದುದುರಂತ. ಕೃಷಿ, ಕೈಗಾರಿಕೆ, ಕಚೇರಿಗಳಲ್ಲಿ ಮಹಿಳೆಯರಿಗೆ ದೈಹಿಕ, ಮಾನಸಿಕ ಕಿರಿಕಿರಿ ನೀಡುತ್ತಿರುವುದು ವಿಪರ್ಯಾಸ. 21ನೇ ಶತಮಾನದಲ್ಲಿಯೂ ಅನೇಕ ಮಹಿಳೆಯರು ಮೂಲ ಸೌಕರ್ಯಗಳಿಲ್ಲದೆ ಪರಿತಪಿಸುತ್ತಿರುವುದುಅತ್ಯಂತಖೇದಕರವಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತಉಪನಿರ್ದೇಶಕರಾದ ಆರ್.ಸಿ. ಹಲಗತ್ತಿ ದತ್ತಿದಾನಿಗಳ ಪರವಾಗಿ ಮಾತನಾಡಿ, ಪ್ರತಿಯೊಬ್ಬತಾಯಿಯುಕುಟುಂಬ ವತ್ಸಲರಾಗಿರುತ್ತಾರೆ. ಹಾಗೆಯೇ ನಮ್ಮತಾಯಿಯು ಹತ್ತು ಮಕ್ಕಳನ್ನ ಹೆತ್ತರು ಕಷ್ಟಗಳು ನೂರಾರು ಬಂದರುಅವನೆಲ್ಲಾ ಎದುರಿಸಿ ನಮ್ಮನ್ನು ಬೆಳೆಸಿದವಳು. ಇದು ಭಾರತದಎಲ್ಲತಾಯಂದಿಯರಲ್ಲಿರುವ ಶ್ರೇಷ್ಠ ಗುಣವು ಹೌದು.ಕೂಡುಕುಟುಂಬದಲ್ಲಿ ತಾಯಿಯಾದವಳು ಆಲದ ಮರದಂತೆಎಲ್ಲರನ್ನುತನ್ನ ಹೃದಯದಲ್ಲಿಇಟ್ಟುಕೊಂಡು ಸಮಾನತೆಯಲ್ಲಿ ಪ್ರೀತಿಸುವಳು ಮತ್ತು ನೋಡಿಕೊಳ್ಳುವಳು.ಇದಕ್ಕೆ ನನ್ನತಾಯಿ ಹೊರತಾಗಿಲ್ಲ. ನೊರೊಂದು ವರ್ಷ ಕಳೆದರೂ ಕುಟುಂಬದ ಮೇಲಿನ ಕಾಳಜಿ ಮತ್ತು ಪ್ರೀತಿ ಎಳ್ಳಷ್ಟು ಕಡಿಮೆಯಾಗಿಲ್ಲ. ಇದು ನಮ್ಮತಾಯಿಯ ವಿಶೇಷತೆಎಂದರು.
ವೇದಿಕೆಯಲ್ಲಿದತ್ತಿದಾನಿ ರತ್ನಾ ಶಂಕರ ಹಲಗತ್ತಿ, ಚಂದ್ರಕಾಂತ ಬೆಲ್ಲದಇದ್ದರು.
ಶಾರದಾ ಶಿವಣ್ಣ ಬೆಲ್ಲದಅವರು ಈ ವರ್ಷದ ಶ್ರಮಿಕ ಮಹಿಳೆ ಪ್ರಶಸ್ತಿಗೆ ಭಾಜನರಾದ ಶ್ರೀಮತಿ ಕಮಲಾಕ್ಷಿ ಮಂಜುನಾಥಗಡೇದರಿಗೆ ಪ್ರದಾನ ಮಾಡಿದರು. ನಿವೃತ್ತ ಶಿಕ್ಷಕಿ ಕಲ್ಪನಾ ಕಳಸಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿ.ಮ. ರಾಚಯ್ಯನವರತಾಯಿಕುರಿತು ಕವನ ವಾಚನ ಮಾಡಿದರು.
ಶಂಕರ ಕುಂಬಿ ಸ್ವಾಗತಿಸಿದರು.ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಮಹೇಶ ಹೊರಕೇರಿಕಾರ್ಯಕ್ರಮ ನಿರೂಪಿಸಿದರು.ಡಾ. ಜಿನದತ್ತ ಹಡಗಲಿ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ಮಾಲತಿ ಪಟ್ಟಣಶೆಟ್ಟಿ, ಶಿವಾನಂದ ಭಾವಿಕಟ್ಟಿ, ಶಂಕರ ಹಲಗತ್ತಿ, ವೀರಣ್ಣಒಡ್ಡೀನ, ಗುರು ಹಿರೇಮಠ, ವಿಶ್ವೇಶ್ವರಿ ಹಿರೇಮಠ, ಡಾ.ಧನವಂತ ಹಾಜವಗೋಳ, ನಿಂಗಣ್ಣಕುಂಟಿ, ಬಿ.ಎಸ್. ಶಿರೋಳ, ಮೋಹನ ಸಿದ್ಧಾಂತಿ, ಸುರೇಶ ಹೊರಕೇರಿ, ಪಾರ್ವತಿ ಹಾಲಭಾವಿ, ಗೀತಾ ಕುಂಬಿ, ಶಶಿಧರ ತೋಡಕರ, ಮಿನಾಕ್ಷಿತೋಡಕರ, ಮಂಜುನಾಥಯರಗಟ್ಟಿ, ಸೋಮನಾಥ ಹಲಗತ್ತಿ, ಜಗದೀಶ ಬರದೇಲಿ, ಡಾ. ಚಿದಾನಂದ ಮಾನಸಕಟ್ಟಿ, ಎ.ಎಸ್. ದೇಸಾಯಿ, ಅನಿತಾಚಿಕ್ಕಮಠ, ಎಚ್.ಎಫ್. ಸಮುದ್ರಿ, ಕೋಟಿಗೌಡರ.ಡಾ. ಬಾಳಪ್ಪಾ ಚಿನಗುಡಿ, ರಾಜೇಂದ್ರ ಸಾವಳಗಿ, ಅಶೋಕ ನಿಡವಣಿ, ಮಹಾಂತೇಶ ನರೇಗಲ್ ಸೇರಿದಂತೆ ಹಲಗತ್ತಿಕುಟುಂಬದವರು ಉಪಸ್ಥಿತರಿದ್ದರು.