ಮಹಿಳೆ ಸಬಲೀಕರಣವಾದರೆ ಸಮಾಜದ ಅಭಿವೃದ್ಧಿ

ಕನಕಪುರ, ಜೂ.೧೨- ಈವರೆಗೂ ರಾಜ್ಯದಲ್ಲಿ ಯಾವುದೇ ಸರ್ಕಾರಗಳು ನೀಡದ ಐತಿಹಾಸಿಕ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. ಮುಂದೆ ಯಾವುದೇ ಸರ್ಕಾರವು ಈ ಯೋಜನೆಗಳನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರವಿ ತಿಳಿಸಿದರು.
ಇಲ್ಲಿನ ಸಾರಿಗೆ ಬಸ್ ನಿಲ್ದಾಣದಲ್ಲಿ ಸಾರಿಗೆ ಇಲಾಖೆ ಮೂಲಕ ಭಾನುವಾರದಿಂದ ಪ್ರಾರಂಭಗೊಂಡ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಸಮಾಜದಲ್ಲಿ ಮಹಿಳೆ ಸಬಲೀಕರಣವಾದರೆ ಸಮಾಜ ಅಭಿವೃದ್ಧಿ ಆದಂತೆ, ಆ ನಿಟ್ಟಿನಲ್ಲಿ ಇಲಿಯತನಕ ಮಹಿಳೆಯರ ಅಭಿವೃದ್ಧಿಗೆ ಯಾವುದೆ ಸರ್ಕಾರ ಒತ್ತು ಕೊಟ್ಟಿರಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವು ಮಹಿಳೆಯರಿಗಾಗಿಯೇ ಶಕ್ತಿ ಯೋಜನೆ ತಂದಿದೆ ಎಂದರು.
ರಾಜ್ಯದ ಒಂದು ಮೂಲೆಯಿಂದ ಮತ್ತೊಂದು ಮೂಲಿಗೆ ಮಹಿಳೆಯರು ಉಚಿತವಾಗಿ ಓಡಾಡಬಹುದಾಗಿದೆ, ಇದಕ್ಕೆ ಯಾವುದೆ ಮಿತಿ ಇರುವುದಿಲ್ಲ, ಇದೊಂದು ಐತಿಹಾಸಿಕ ನಿರ್ಧಾರವಾಗಿದ್ದು ಈ ಯೋಜನೆಯನ್ನು ಯಾವ ದೇಶದಲ್ಲೂ ಜಾರಿಗೆ ತಂದಿಲ್ಲವೆಂದು ತಿಳಿಸಿದರು.
ಹಿಂದಿನ ಬಿಜೆಪಿ ಸರ್ಕಾರವು ಶೇ.೪೦ ರಷ್ಟು ಕಮೀಷನ್ ಪಡೆದು ಜನರ ಹಿತವನ್ನು ಮರೆತಿದ್ದರು, ಜನರ ನಿರೀಕ್ಷೆಗಳನ್ನು ಹುಸಿಕೊಳಿಸಿದ್ದರು. ಅದಕ್ಕಾಗಿ ರಾಜ್ಯದ ಜನತೆ ಅವರನ್ನು ದಿಕ್ಕರಿಸಿ ಮನೆಗೆ ಕಳಿಸಿ, ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಪ್ರಮಾಣದಲ್ಲಿ ಆಶೀರ್ವದಿಸಿದ್ದಾರೆ, ಕಾಂಗ್ರೆಸ್ ಕೊಟ್ಟ ಗ್ಯಾರಂಟಿಗಳನ್ನು ಈಡೇರಿಸುತ್ತಿದೆ ಎಂದರು.
ಮೋದಿ ಪರ: ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಮಾದ್ಯಮಗಳು ಮೋದಿ ಪರವಾಗಿದ್ದು, ಕಾಂಗ್ರೆಸ್‌ಗೆ ಬಹುಮತ ಬರುತ್ತದೆ ಎಂದು ಗಟ್ಟಿಯಾಗಿ ಹೇಳಲು ಸಿದ್ದರಿರಲಿಲ್ಲ. ಮತ ಏಣಿಕೆ ದಿನ ೧೧ ಗಂಟೆಯಾದರೂ ಜನರ ತೀರ್ಪನ್ನು ಒಪ್ಪಿಕೊಳ್ಳಲು ಸಿದ್ದವಿಲ್ಲದೆ ನಂತರದಲ್ಲಿ ಅನಿವಾರ್ಯವಾಗಿ ಜನರ ತೀರ್ಪನ್ನು ಒಪ್ಪಿಕೊಂಡವು ಎಂದರು.
ಹೊಂದಾಣಿಕೆ: ಕಾಂಗ್ರೇಸ್ ಪಕ್ಷ ನೀಡಿದ್ದ ಗ್ಯಾರಂಟಿಗಳನ್ನು ಜಾರಿಗೊಳಿಸಲು $ ೫೭೦೦೦ ಕೋಟಿ ಅಗತ್ಯವಿದೆ, ಈ ಹಣ ಹೊಂದಿಸಿಕೊಳ್ಳಲು, ಕಳೆದ ಭ್ರಷ್ಟ ಸರ್ಕಾರದಲ್ಲಿ ಕಮಿಷನ್ ಮತ್ತು ಸೋರಿಕೆಯನ್ನು ತಡೆದರೆ ಸಾಕು. ಈ ಯೋಜನೆಗೆ ಬೇಕಾದ ಹಣವನ್ನು ಹೊಂದಿಸಿಕೊಳ್ಳಬಹುದಾಗಿದೆ, ಇದನ್ನು ನಮ್ಮ ನಾಯಕರು ಮಾಡಲಿದ್ದಾರೆ ಎಂದರು.
ಬಿಡಿಡಿಸಿ ಬ್ಯಾಂಕ್ ನಿರ್ದೇಶಕ ವಿಜಯ್‌ದೇವ್, ರೂರಲ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಎಚ್.ಕೆ.ಶ್ರೀಕಂಠು, ತಹಸೀಲ್ದಾರ್ ಸ್ಮಿತಾರಾಮು, ಸಾರಿಗೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.