ಮಹಿಳೆ ಸಬಲೀಕರಣಕ್ಕೆ ಶಕ್ತಿ ಯೋಜನೆ

ಕೆಂಗೇರಿ,ಆ.೧೨-ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ’ಶಕ್ತಿ ಯೋಜನೆ’ಯನ್ನು ಜಾರಿಗೆ ತರುವುದರ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು ಗೃಹಲಕ್ಷ್ಮಿಯೋಜನೆಯನ್ನು ರೂಪಿಸಿದೆ. ಮಹಿಳೆಯರ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಕುಟುಂಬದ ನಿರ್ವಹಣೆಯಲ್ಲಿ ಮನೆ ಯಜಮಾನಿಯ ಪಾತ್ರ ಬಹುದೊಡ್ಡದು ಆದ್ದರಿಂದ ಮನೆಯಲ್ಲಿ ನಿರ್ವಹಣೆಗೆ ಅನುಕೂಲವಾಗಲೆಂದು ಸರ್ಕಾರವು ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು ಎರಡು ಸಾವಿರ ರೂ ಜಮಾ ಮಾಡಲು ಯೋಜನೆಯನ್ನು ಅನುಷ್ಠಾನ ಮಾಡಿದೆ. ಎಂದು ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಎಂ. ರಾಜ್ ಕುಮಾರ್ ತಿಳಿಸಿದರು
ಬೆಂಗಳೂರು ದಕ್ಷಿಣ ತಾಲ್ಲೂಕಿನ ತರಳು ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಿ. ಬಾಲರಾಜ್, (ಬಂಡೆ ತಮ್ಮಯ್ಯ) ಹಾಗೂ ಉಪಾಧ್ಯಕ್ಷೆಯಾಗಿ ರೂಪ ವೆಂಕಟೇಶ್ ಆಯ್ಕೆಯಾದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಪೂಜೆಯನ್ನು ಹಮ್ಮಿಕೊಂಡಿದ್ದರು.
ನನ್ನ ಸ್ನೇಹಿತರಾದ ಬಾಲರಾಜ್ ಅಧ್ಯಕ್ಷರಾಗಿದ್ದಾರೆ ಶ್ರೀಮತಿ ರೂಪ ವೆಂಕಟೇಶ್ ರವರು ಉಪಾಧ್ಯಕ್ಷರಾಗಿದ್ದಾರೆ ನನಗೆ ಬಹಳ ಸಂತೋಷವಾಗಿದೆ. ಇವರು ಮುಂದೆ ಒಳ್ಳೆ ಒಳ್ಳೆಯ ಕೆಲಸಗಳನ್ನು ಮಾಡಿ ಬಡವರ ಪರ ಕೆಲಸಗಳನ್ನು ಮಾಡಲಿ. ಇಂದು ಐದು ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರಜಾರಿಗೆ ತಂದಿದೆ. ಹಾಗೆಯೇ ಅಧ್ಯಕ್ಷರು ಉಪಾಧ್ಯಕ್ಷರ ಮೇಲೆ ಸಾಕಷ್ಟು ಜವಾಬ್ದಾರಿಗಳಿವೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದ್ದಾರೆ ಆ ಯೋಜನೆಗಳು ಎಲ್ಲರಿಗೂ ತಲುಪುವ ಹಾಗೆ ಮಾಡಲಿ ಇವರ ಶಕ್ತಿ ಬಡವರ ಪರ ಇರಲಿ ಯಾರೇ ಬರಲಿ ಅವರ ಕೆಲಸಗಳನ್ನು ಮಾಡಿಕೊಡಲು ಈ ಕಛೇರಿ ಉಪಯೋಗವಾಗಲಿ ಎಂದರು
ವಿನಯ್ ಕೆ.ಎಂ. ಮಾತನಾಡಿ ಗ್ರಾಮ ಪಂಚಾಯಿತಿಗೆ ನೂತನವಾಗಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಆಯ್ಕೆಯಾಗಿದ್ದಾರೆ. ಇವರು ಈ ಪಂಚಾಯಿತಿಗೆ ಒಳಪಡುವ ಗ್ರಾಮಗಳಲ್ಲಿ ಅಭಿವೃದ್ಧಿಪರ ಕೆಲಸಗಳನ್ನು ಮಾಡಲಿ ಇವರಿಗೆ ಅವರು ಮಾಡುವ ಕೆಲಸಗಳಲ್ಲಿ ಯಶಸ್ಸನ್ನು ಕಾಣಲಿಎಂದು ಆಶಿಸಿದರು.
ಅಧ್ಯಕ್ಷರಾದ ಬಾಲರಾಜ್ ರವರು ಮಾತನಾಡಿ ಇಂದು ನಾನು ಅಧ್ಯಕ್ಷನಾಗಲು ಕಾಂಗ್ರೆಸ್ ಮುಖಂಡರುಗಳು, ಗ್ರಾಮ ಪಂಚಾಯತಿಯ ಸದಸ್ಯರುಗಳು ನನ್ನ ಎಲ್ಲಾ ಕಾರ್ಯಕರ್ತರು ಕಾರಣಕರ್ತರಾಗಿದ್ದಾರೆ ಎಲ್ಲರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು ಎಂದು ತಿಳಿಸಿದರು.