ಮಹಿಳೆ ಶಕ್ತಿವಂತಳಾಗಲು ಶಿಕ್ಷಣ ಪಡೆಯಲು ಕರೆ

(ಸಂಜೆವಾಣಿ ವಾರ್ತೆ)
ಇಂಡಿ : ಮಹಿಳಾ ಸಬಲೀಕರಣ ಎನ್ನುವುದು ಕಾಗದಲ್ಲಿ ಮಾತ್ರ ಗೊಚರಿಸುತ್ತದೆ.ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಗೆ ನಿತ್ಯ ಶೋಷಣೆ ನಡೆಯುತ್ತಿದೆ. ಒರ್ವ ಮಹಿಳೆ ಒಬ್ಬಂಟಿಯಾಗಿ ಹೋಗದಂತ ವಾತಾವರಣ ಇಂದು ನಿರ್ಮಾಣವಾಗಿದೆ.ಹೀಗಾದರೆ ಮಹಿಳಾ ಸ್ವಾತಂತ್ರ್ಯ ಎಲ್ಲಿ ಎಂಬ ಪ್ರಶ್ನೆ ತಲೆದೊರುತ್ತದೆ.ಮಹಿಳಾ ಸಬಲೀಕರಣಕ್ಕೆ ಶರಣೆ ಅಕ್ಕಮಹಾದೇವಿಯವರ ವಚನಗಳು ಸ್ಪೂರ್ತಿಯಾಗಲಿದ್ದು, ಬಸವಣ್ಣವರ ವಚನಗಳಲ್ಲಿ ಸ್ತ್ರೀ ಸ್ವಾತಂತ್ರ್ಯ ಕಾಣಬಹುದು ಎಂದು ಜಗದ್ಗುರು ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಕುಡುವಕ್ಕಲಿಗ ಮಹಾಸಂಸ್ಥಾನ ಗುರುಪೀಠದ ಪಿಠಾಧ್ಯಕ್ಷರು ಜಗದ್ಗುರು ಶ್ರೀ ಡಾ.ಅಭಿನವ ಸಿದ್ದರಾಮೇಶ್ವರ ಮಹಾಸ್ವಾಮೀಜಿ ಹೇಳಿದರು.
ಅವರು ಶನಿವಾರ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಶಸಾಪ ಹಾಗೂ ಕದಳಿ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಂಡ ಇಂಡಿ ತಾಲೂಕ ಪ್ರಥಮ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಶಕ್ತಿವಂತರಾಗಿ,ಸ್ವಾತಂತ್ರ್ಯವಾಗಿ ಹೊರಹೊಮ್ಮಬೇಕಾದರೆ ಮೊದಲು ಶಿಕ್ಷಣವಂತರಾಗಬೇಕು.ನಂತರ ಬಸವಣ್ಣನವರ ವಚನಗಳು ಕರಗತ ಮಾಡಿಕೊಳ್ಳಬೇಕು. 12 ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಮಹಿಳಾ ಶರಣಿಯರಿಗೆ ಹೆಚ್ಚು ಪ್ರಾಶಸ್ತ್ಯ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದರು ಎಂದು ಹೇಳಿದರು.
ಅಥರ್ಗಾ ಗ್ರಾಮದಲ್ಲಿ ಹಮ್ಮಿಕೊಂಡ ಮಹಿಳಾ ಸಮಾವೇಶ ಮಹಿಳೆಯರಿಗೆ ಸೇವಾ ಮನೋಭಾವ ,ಸಂಸ್ಕಾರ ಬೆಳೆಸುವ ಜಾಗ್ರತಿ ಸಮಾವೇಶವಾಗಬೇಕು ಎಂದು ಹೇಳಿದರು.ಇಂದು ಎಲ್ಲರಲ್ಲಿ ಸಂಸಾರದ ಚಿಂತೆ ಹೆಚ್ಚಿದೆ.ಆದರೆ ಅಂದು ಬಸವಣ್ಣನವರು ಸೇರಿದಂತೆ ಎಲ್ಲ ಶರಣ,ಶರಣಿಯರು ಭಗವಂತನ ನೆನೆಯುವ ಚಿಂತೆಯನ್ನು ಮಾಡುವುದರ ಜೊತೆಗೆ ಇತರರ ಸುಖವನ್ನು ಭಯಸಿದ್ದಾರೆ ಎಂದರು.
ಸಮ್ಮೇಳನದ ಸವಾಧ್ಯಕ್ಷೆ ಪರಮಪೂಜನಿಯ ಮಾತಾ ವಚನಶ್ರೀ ತಾಯಿ ಅವರು ಮಾತನಾಡಿ,ಮಹಿಳೆಯರ ಏಳಿಗೆಗೆ ಅಕ್ಕಮಹಾದೇವಿಯರ ವಚನ ಸಾಹಿತ್ಯ ಬಹಳ ಸ್ಪೂರ್ತಿಯಾಗಿದೆ.ಅದು ಮುಂದಿನ ಪೀಳಿಗೆಗೆ ದಾರಿದೀಪವಾಗಿದೆಎಂಬ ವಿಚಾರವನ್ನು ತಿಳಿಸಿದರು.
ಕದಳಿ ವೇದಿಕೆ ತಾಲೂಕು ಅಧ್ಯಕ್ಷೆ ಗಂಗಾಬಾಯಿ ಗಲಗಲಿ ಅಧ್ಯಕ್ಷತೆ ವಹಿಸಿದ್ದರು.ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಂಬುನಾಥ ಕಂಚಾಣಿ,ಗುರುಲಿಂಗವ್ವ ಬಾಳಿ,ಕಾಶೀಬಾಯಿ ಹಂಜಗಿ,ವಿಜಯಲಕ್ಷ್ಮಿ ದೇಸಾಯಿ,ಪಾರ್ವತಿ ಸುರಪೂರ ಇತರರು ವೇದಿಕೆ ಮೇಲೆ ಇದ್ದರು. ಭವಾನಿ ಗುಳೆದಗುಡ್ಡ ಆಶೆಯ ನುಡಿ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ದಾನಪ್ಪ ಬಗಲಿ,ಕಸಾಪ ಅಧ್ಯಕ್ಷ ಡಾ.ಕಾಂತು ಇಂಡಿ,ಕಜಾಪ ಅಧ್ಯಕ್ಷ ಆರ್.ವಿ.ಪಾಟೀಲ,ಎಸ್.ಐ.ಸುಗೂರ,ಜಿ.ಜಿ.ಬರಡೋಲ,ಶಸಾಪ ಯುವ ಘಟಕದ ಅಧ್ಯಕ್ಷ ಡಾ.ದೇವೆಂದ್ರ ಬರಡೋಲ,ರಾಜಶೇಖರ ಉಮರಾಣಿ,ಸುನಿತಾ ಪಾಟೀಲ,ಜಯಶ್ರೀ ಬಿರಾದಾರರ,ಶಶಿಕಲಾ ಬೆಟಗೇರಿ,ರಾಜಶ್ರೀ ಕ್ಷತ್ರಿ,ಸುಮಂಗಲಾ ನಿಂಬಾಳ,ಶೋಭಾ ಪಾಟೀಲ,ಶಶಿಕಲಾ ಮದಬಾವಿ,ಬಿ.ಇ.ಹಿರೇಮಠ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.