ಮಹಿಳೆ ಮೇಲೆ ಹಲ್ಲೆ: ಐವರಿಗೆ 1 ವರ್ಷ ಸಜೆ

ಕಲಬುರಗಿ ಜು 26: ಕಮಲಾಪುರ ಪೊಲೀಸ್‍ಠಾಣೆ ವ್ಯಾಪ್ತಿಯ ಸೊಂತ ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ಬಡಿಗೆ ಕಲ್ಲುಗಳಿಂದ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪ ಸಾಬೀತಾದ್ದರಿಂದ 5 ಜನರಿಗೆ 1 ನೇ ಜೆಎಂಎಫ್‍ಸಿ ಪ್ರಧಾನ ನ್ಯಾಯಾಧೀಶರಾದ ಬಸವರಾಜ ನೇಸರಗಿ ಅವರು ವಿವಿಧ ಕಲಂಗಳಡಿ 1 ವರ್ಷ ಸಾದಾಸಜೆ ಮತ್ತು ತಲಾ 3 ಸಾವಿರ ರೂ ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಸೊಂತ ಗ್ರಾಮ ಮಹಿಳೆಯೊಬ್ಬರು ದಾಖಲಿಸಿದ ಪ್ರಕರಣ ವಿರೋಧಿಸಿ 2018 ರ ಏಪ್ರಿಲ್ 18 ರಂದು ಈ ಐದು ಜನ ಮಹಿಳೆ ಮೇಲೆ ಹಲ್ಲೆ ನಡೆಸಿದ್ದರು.
ಸರಕಾರದ ಪರವಾಗಿ 1 ನೇ ಸಹಾಯಕ ಸರ್ಕಾರಿ ಅಭಿಯೋಜಕ ಇಸ್ಮಾಯಿಲ್ ಪಟೇಲ್ ಅವರು ವಾದ ಮಂಡಿಸಿದ್ದರು.