ಮಹಿಳೆ ಮುಖ್ಯವಾಹಿನಿಗೆ ಬರಲು ಶರಣರ ಕ್ರಾಂತಿ ಕಾರಣ


ಸಂಜೆವಾಣಿ ವಾರ್ತೆ
ಸಂಡೂರು :ಜು:30: 12ನೇ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಬಸವಾದಿ ಶರಣರ ಸಮಾಜ ಧಾರ್ಮಿಕ ಚಳುವಳಿಯು ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಉಸಿರುಗಟ್ಟುವ ವಾತಾವರಣದಲ್ಲಿ ಬದುಕಿತ್ತಿದ್ದ ಮಹಿಳೆಯನ್ನ ಸಾಮಾಜಿಕ ಆಧಾರದ ಮೇಲೆ ಮುಖ್ಯ ವಾಹಿನಿಗೆ ತರಲು ಶರಣರು ಪ್ರತ್ನಿಸಿದರು. ಶರಣರ ಚಳುವಳಿಯ ಪ್ರಯತ್ನದ ಫಲವಾಗಿ ಮಹಿಳೆ ಪ್ರಾಪಂಚಿಕ ಮತ್ತು ಪಾರಮಾಂತಿಕ 2 ನೆಲೆಗಳಿಗೆ ಮುನ್ನಲೆ ಬರುವಂತಾಯಿತು. ಧರ್ಮ ಶಾಸ್ತ್ರಗಳು ಮಹಿಳೆಯನ್ನ ಸ್ವಂತ್ರವಾಗಿ ಧರ್ಮ ಕಾರ್ಯಕಗಳನ್ನು ಮಾಡಲು ಅನರ್ಹಳು ಎಂದಿವೆ. ಹೆಣ್ಣು, ಹೊನ್ನು, ಮಣ್ಣುಗಳಿಂದ ದೂರವಿರಬೇಕೆಂಬ ಹೇಳಿಕೆಯಿಂದ ಇದರ ಜೊತೆಗೆ ಸೇರಿಸಿ ಮಹಿಳೆಯ ಮಾನ ಅಸ್ತಿತ್ವವನ್ನೇ ಅಲ್ಲಗಳೆಯಲಾಗಿದೆ. ವೈವಾಹಿಕ ಜೀವನದಲ್ಲಿ ನಿವೃತ್ತಿ ಹೊಂದಿಯೇ ಮೋಕ್ಷ ಸಾದಿಸಬೇಕು. ಎಂದು ಹೇಳುವುದರ ಜೊತೆಗೆ ಹೆಣ್ಣಿಗೆ ಸನ್ಯಾಸವನ್ನು ದಿಕ್ಕರಿಸಿ ಅಧ್ಯಾತ್ಮಕ ಜೀವನದಿಂದ ಮಹಿಳೆಯನ್ನ ವಂಚಿತಳಾಗುವಂತೆ ಮಾಡಿದವು. ಇಂಥಹ ಆದರ್ಶ ದಾಂಪತ್ಯ ಜೀವನ ನಡೆಸಿ ಆಧ್ಯಾತ್ಮದ ಶಿಖರವನ್ನೇರಿದ ಮೇರುಗಳಿಗೆ ಹಡಪದ ಅಪ್ಪಣ್ಣ ಲಿಂಗಮ್ಮ ದಂಪತಿಗಳು. ಅಪ್ಪಣ್ಣನವರು ಬಸವ ಪ್ರಿಯನಾದ ಚೆನ್ನಬಸವಣ್ಣನ ಅನುಗ್ರಹ ಪಡೆದ ಸಾದಕ. ಲಿಂಗಮ್ಮ ತಾಯಿ ಚೆನ್ನ ಬಸವಣ್ಣಗೆ ಸಹಾಯಕಿ ಆಗಿದ್ದು, ಅಪ್ಪಣ್ಣನಿಗೆ ಪ್ರಿಯವಾಗಿದ್ದ ಚೆನ್ನಬಸವಣ್ಣನವರ ಅನುಗ್ರಹಕ್ಕೆ ಪಾತ್ರಳಾಗಿದ್ದಳು ಎಂದು ಹೊಸಪೇಟೆಯ ತಾಲ್ಲೂಕು ಶ.ಸ.ಪ. ಅಧ್ಕ್ಷರು ಚಿತ್ತವಾಡಗಿ ಸರ್ಕಾರಿ ಪ್ರೌಢಶಾಲೆಯ ಆಂಗ್ಲ ನಿವೃತ್ತ ಉಪನ್ಯಾಸಕಿ ಎಚ್. ಸೌಭಾಗ್ಯ ಲಕ್ಷ್ಮೀ ತಿಳಿಸಿದರು.
ಅವರು ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠದಲ್ಲಿ ದಿವ್ಯ ಸಾನಿಧದಲ್ಲಿ ಅಕ್ಕನಬಳಗದ ಅಧ್ಯಕ್ಷೆ ಜ್ಯೋತಿ ಗುಡೆಕೊಟೆ ನಾಗರಾಜ ಅವರ ಅಧ್ಯಕ್ಷತೆಯಲ್ಲಿ ಅನುಭಾವ – 3 ನಿಜಮುಕ್ತಿ ಲಿಂಗಮ್ಮ ಕುರಿತು ಮಾತನಾಡಿದರು. ಸತಿಪತಿಗಳಿಬ್ಬರು ಹಂಪೆ ಪೀಠಾಧಿಪತಿಗಳಾದ ಗುರು ಚೆನ್ನಮಲ್ಲೇಶ್ವರರು ಸನ್ಯಾಸ ಧರ್ಮವನ್ನು ಸ್ವೀಕರಿಸಿ ದಾಂಪತ್ಯ ಜೀವನ ಶ್ರೇಷ್ಠ ಎಂದು ಭಾವಿಸಿ ಈರ್ವ ದಂಪತಿಗಳು ಸಂಸಾರಿಗಳಾಗಿ ಜೀವನ ನಡೆಸಿ ಸಿದ್ದಿಯ ಶಿಖರವನ್ನೇರಿದು. ಹಡಪದ ಅಪ್ಪಣ್ಣ ಮತ್ತು ಲಿಮಗಮ್ಮ ನವರ ಚಾರಿತ್ರಿಕ ಅಂಶಗಳ ಬಗ್ಗೆ ಬೆಳಕು ಚೆಲ್ಲಿದವರು ರಂಜಾನ್ ದರ್ಗಾದವರು. ನಿಂಗಮ್ಮ ನವರ 114 ವಚನಗಳು ಇವರ ವಚನಗಳನ್ನು ಬೊಧನೆಯ ವಚನಗಳೆಂದೆ ಕರೆಯಾಲಗುತ್ತದೆ. ಲಿಂಗಮ್ಮನ ವಚನಗಳು ಸಂಭಾಷನೆಯಲ್ಲಿರುತ್ತವೆ. ಹೆಚ್ಚಿನ ವಿವರಗಳು ಗದ್ಯಾತ್ಮಕ ಗುಣವನ್ನು ಹೊಂದಿವೆ. ತಾಯಿಯ ವಚನಗಳು ಬೆಡಗಿನ ಬಾಷಣದಿಂದ ಕೂಡಿದ್ದು, ಸಾಮಾಜಿಕ ಚಿತ್ರಣವಿದೆ. ಅಲ್ಲದೇ ಬದುಕನ ಸಾರವನ್ನು ಒಳಗೊಂಡಿವೆ. ನೇರವಾಗಿ ವಿಮರ್ಷೆ ಕಾಣದಿದ್ದರೂ, ಸಮಾಜಿಕ ವಿಷಯಗಳ ವಿಮರ್ಷೆ ಇದೆ. ವಚನಗಳಲ್ಲಿ ತಾತ್ವಿಕ ಬೋದ ಪ್ರದವಾದ ಅಂಶಗಳು ಕಂಡು ಬರುತ್ತಿವೆ. ಶರಣರು ಪ್ರತಿಪಾದಿಸಿದ ಮಾರ್ಗ ಲಿಂಗಾಂಗ ಸಾಮರಸ್ಯ ತಾತ್ರಿವಕ ವಿಚಾರವನ್ನು ವಚನಗಳಲ್ಲಿ ಕಾಣಬಹುದು. ಚೆನ್ನಬಸವೇಶ್ವರ ಎಂಬುದು ಲಿಂಗಮ್ಮ ತಾಯಿಯ ವಚನಗಳ ಅಂಕಿತನಾಮವಾಗಿದೆ.
ಶರಣೆ ಲಿಂಗಮ್ಮನ ಬೆಡಗಿನ ಬಾಷೆಯ ತಲೆದೂಗಬೇಕಾಗಿದೆ. ಅಕ್ಕಮಹಾದೇವಿ ವಿಷಮ ದಾಂಪತ್ಯವನ್ನು ದಿಕ್ಕರಿಸಿ ವೈರಾಗ್ಯ ರಾಧನೆ ಕಂಡುಕೊಂಡರೆ ಲಿಂಗಮ್ಮ ತಾಯಿ ಸಂಸಾರದಲ್ಲಿ ಇದ್ದು ಕೊಂಡೆ ವೈರಾಗ್ಯವನ್ನೇ ಸಾದಿಸಿದರು. ಲಿಂಗಮ್ಮನ ಮಹಾಬೆಳಗಿನ ಮಾತುಗಲೇ ಒಂದು ಮಹಕಾವ್ಯವಾಗಿದೆ ಎಂದು ಚ.ನಿ. ಹೇಳೀದರೆ ಡಾ. ಸಿ. ವೀರಣ್ಣನವರ ಬೆಳಕಿನ ತತ್ವ ಎಂದು ವಿರಿಸಿದ್ದಾರೆ. ಎಂದು ತಿಳಿಸಿದರು. ನರಿ ಬಸವರಜ ಸಂಗೀತ ಸೇವೆಯನ್ನ ನಡೆಸಿಕೊಟ್ಟರೆ ಕಮ್ಮಾರ ಉಮೆಶ್ ತಬಲ ಸಾಥ್ ನೀಡಿದರು. ಪುರಸಭೆಯ ಮಾಜಿ ಉಪಾಧ್ಯಕ್ಷೆ ಸುಮಿತ್ರಮ್ಮ ಕಾರ್ಯಕ್ರಮವನ್ನು ನಿರೂಪಿಸಿದರು. ಬಳ್ಳಾರಿ ಜಿಲ್ಲಾ ಕದಳಿ ವೇದಿಕೆಯ ಅಧ್ಯ್ಕಷೆ ನೀಲಾಂಬಿಕೆ ಗುಡೆಕೋಟೆ ಕಲ್ಪನ ಶಶಿಕಲಾ ಚಂದ್ರಶೇಖರಪ್ಪ ಶಾಂತಮ್ಮ ಚಿರಂತಯ್ಯ ಹಿರೇಮಠ ಬಂಡೆ ಮ್ಯಾಗಳ ಗಂಗಮ್ಮ ಹಗರಿ ಬಸವರಜಪ್ಪ ನರಸಾಪುರದ ನಾಗರಾಜ ಸುಭಾಷ್ ಶಿಂಧೆ ಗುಡೇಕೊಟೆ ನಾಗರಾಜ ಅಲ್ಲದೇ ಹಲವಾರು ಮಹಾನೀಯರು ಸಮಾರಂಭದಲ್ಲಿ ಭಾಗವಹಿಸಿದರು.