ಮಹಿಳೆ, ಮಕ್ಕಳು ಕಾಣೆ : ಸುಳಿವಿಗೆ ಸಹಕರಿಸಲು ಮನವಿ

ಚಾಮರಾಜನಗರ, ನÀ.21-ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದ ಸತ್ಯ ಎಂಬ ಮಹಿಳೆ ಹಾಗೂ ಅವರ ಮಕ್ಕಳಾದ ಪ್ರೀತಮ್ ಮತ್ತು ಪ್ರಿಯದರ್ಶಿನಿ ಅವರು ಕಾಣೆಯಾಗಿದ್ದಾರೆ ಅವರ ಸುಳಿವಿಗೆ ಸಹಕರಿಸಲು ಕುದೇರು ಪೊಲೀಸ್ ಠಾಣೆ ತಿಳಿಸಿದೆ.
ಸತ್ಯ ಅವರಿಗೆ 26 ವರ್ಷ ವಯಸ್ಸು, 5.3 ಅಡಿ ಎತ್ತರ, ದೃಢಕಾಯ ಶರೀರ, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ಹಸಿರು ಬಣ್ಣದ ಡಿಸೈನ್ ಸೀರೆ ರವಿಕೆ ಧರಿಸಿರುತ್ತಾರೆ. ಪ್ರೀತಂ ಅವರಿಗೆ 5 ವರ್ಷ ವಯಸ್ಸು, 3.1/2 ಅಡಿ ಎತ್ತರ, ಕಪ್ಪು ಬಣ್ಣದ ಟೀ ಶರ್ಟು ಕಾಪಿ ಕಲರ್ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ದುಂಡು ಮುಖ ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾರೆ. ಪ್ರಿಯದರ್ಶಿನಿ ಅವರಿಗೆ 1 1/2 ವರ್ಷ ವಯಸ್ಸು, 2 1/2 ಅಡಿ ಎತ್ತರ, ಸಾಧಾರಣಾ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಮತ್ತು ಕಪ್ಪು ಬಣ್ಣದ ಡಿಸೈನ್ ಫ್ರಾಕ್ ಧರಿಸಿದ್ದಾರೆ. ಮಹಿಳೆ ಮತ್ತು ಮಕ್ಕಳು ಪತ್ತೆಯಾದಲ್ಲಿ ಕುದೇರು ಪೊಲೀಸ್ ಠಾಣೆ ಅಥವಾ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ಕುದೇರು ಪೊಲೀಸ್ ಠಾಣೆ ದೂ ಸಂ. 08226-234439, ಪೊಲೀಸ್ ಸಬ್‍ಇನ್ಸ್ ಪೆಕ್ಟರ್ ಮೊ ನಂ 9480804647, ಚಾಮರಾಜನಗರ ಕಂಟ್ರೋಲ್ ರೂಂ 08226-222083, ಫಿರ್ಯಾದಿ ಮಂಗಳಮ್ಮ ಅವರ ಮೊ. ಸಂ. 9741656440 ಅನ್ನು ಸಂಪರ್ಕಿಸುವಂತೆ ಕುದೇರು ಪೊಲೀಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುಟ್ಟಮ್ಮ : ಚಾಮರಾಜನಗರ ತಾಲೂಕಿನ ನಡುಕಲಮೋಳೆ ಗ್ರಾಮದ ಪುಟ್ಟಮ್ಮ ಎಂಬುವವರು ಕಾಣೆಯಾಗಿದ್ದು ಅವರ ಸುಳಿವಿಗೆ ಸಹಕರಿಸಲು ಮನವಿ ಮಾಡಲಾಗಿದೆ.
ಪುಟ್ಟಮ್ಮ ಅವರಿಗೆ 30 ವರ್ಷ ವಯಸ್ಸು, 5 ಅಡಿ ಎತ್ತರ, ಸಾಧರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ ಹೊಂದಿದ್ದು ಕೆಂಪು ಬಣ್ಣದ ನೈಟಿ ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಸುಳಿವು ದೊರೆತಲ್ಲಿ ಸಂತೇಮರಹಳ್ಳಿ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷರಿಗೆ ಮಾಹಿತಿ ನೀಡಬೇಕು ಎಂದು ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.