ಮಹಿಳೆ ಭಾರತದ ರಕ್ಷಣಾ ಸೇನೆ ಸೇರಲು ವಿಫುಲ ಅವಕಾಶಃ ಮೇಜರ ಶೃತಿ ನೈಯರ

ವಿಜಯಪುರ, ಡಿ.7-ಇಂದಿನ ಮಹಿಳೆ ಭಾರತದ ರಕ್ಷಣಾ ಸೇನೆ ಸೇರಲು ವಿಫಲ ಅವಕಾಶ ಸ್ಥಳಿಯ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ಮಹಿಳಾ ಘಟಕದಿಂದ ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ಸಬಲಿಕರಣದ ದೃಷ್ಠಿಯಿಂದ ಇಂದಿನ ಮಹಿಳೆ ಮತ್ತು ಭಾರತದ ಸೇನೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು
ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಮತ್ತು ಮಹಿಳೆಯರನ್ನು ಆದರಿಸಿ ಸ್ಪೂರ್ತಿದಾಯಕ ಉಪನ್ಯಾಸ ನೀಡಲು ಆಗಮಿಸಿದ 36 ಎನ್.ಸಿ.ಸಿ ಬಟಾಲಿಯನ್‍ದ ಆಡಳಿತ ಅಧಿಕಾರಿಗಳಾದ ಮೇಜರ ಶೃತಿ ನೈಯರ ರವರು ಮಾತನಾಡಿ ಪ್ರಸ್ತೂತ ಭಾರದ ಸೇನೆಯಲ್ಲಿ ಮಹಿಳೆಯರಿಗೆ ಸಾಕಷ್ಟು ಅವಕಾಶಗಳಿವೆ ಸೇನೆಗಳ ಬಗ್ಗೆ ಮಹಿಳೆಯರಲ್ಲಿದ್ದ ತಾತ್ಸಾರ ಹಾಗೂ ಅಂಜಿಕೆ ಬಾವನೆಯನ್ನು ಮನಸ್ಸಿನಿಂದ ಕಿತ್ತೊಗೆಯಬೇಕು ಎಂದು ಕರೆ ನೀಡಿದರು.
ತಾವು ಸೇನೆಯನ್ನು ಸೇರಿದ ಜೀವನದ ಕತೆಯನ್ನು ಅತ್ಯಂತ ಮಾರ್ಮಿಕವಾಗಿ ಹೇಳುತ್ತಾ ನಾನು ಮೊದಲು ಸೇನೆಗೆ ಆಹಾರ ಒದಗಿಸುವ ವಿಭಾಗದಲ್ಲಿ ಭರ್ತಿಯಾಗಿ ನಂತರ ಎರಡು ಪರೀಕ್ಷೆಗಳಲ್ಲಿ ಯಶಸ್ವಿ ಹೊಂದಿ ಇಂದುರುವೆ ಸಭೆಗೆ ತಿಳಿಸಿದರು. ಇಂದಿನ ವಿದ್ಯಾರ್ಥಿನಿಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆಯ ಮೆಟ್ಟಿಲನ್ನು ಏರುತ್ತಿದ್ದಿರಿ ಅದರಂತೆ ಸೇನಯನ್ನು ಸ್ವಲ್ಪ ಪ್ರಯತ್ನದಿಂದ ಸೇರ್ಪಡೆ ಹೊಂದಬಹುದು ಅದಲ್ಲದೆ ಮಹಿಳೆಯರು ಸೇನೆಯಲ್ಲಿ ಇರುವದನ್ನು ಸಮಾಜ ಅತ್ಯಂತ ಗೌರವದಿಂದ ಕಾಣುತ್ತದೆ ಅಷ್ಟೆ ಅಲ್ಲದೆ ಮಹಿಳೆರಿಗೆ ಸೇನೆಯಲ್ಲಿ ವಿಶೇಷ ಸ್ಥಾನಮಾನ ನೀಡುತ್ತಾ ಅತ್ಯಂತ ಸುರಕ್ಷಿತವಾಗಿ ನೋಡಿಕೊಳ್ಳುವ ಕಾರ್ಯ ನಡೆಯುತ್ತದೆ ಅಂತ ವಿದ್ಯಾರ್ಥಿನೀಯರಿಗೆ ತಿಳಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಶರದ ರೊಡಗಿಯವರು ಮಾತನಾಡಿ ಜಾಗತಿಕವಾಗಿ ಎಲ್ಲ ಕ್ಷೇತ್ರದಿಂದ ಯಶಸ್ವಿ ವ್ಯಕ್ತಿಗಳನ್ನು ಸ್ಪೂರ್ತಿದಾಯಕ ಉಪನ್ಯಾಸ ಏರ್ಪಡಿಸಿ ವಿದ್ಯಾರ್ಥಿನಿಯರನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನವನ್ನು ಮುಂದುವರೆಸುತ್ತವೆ ಅಂತ ಹೆಳುತ್ತಾ ನಮ್ಮ ಮಹಾವಿಯದ್ಯಾಲಯದಿಂದ ವಿದ್ಯಾರ್ಥಿನಿಯರು ಶೈಕ್ಷಣನಿಕವಾಗಿ ಸಾಕಷ್ಟು ಮುಂದೆವರೆದಿದ್ದರೂ ಸಹ ಸೇನೆಯನ್ನು ಸೇರುವ ಅವಕಾಶಗಳಿಂದ ದೂರ ಉಳಿದು ಬಿಟ್ಟಿದ್ದರು ಕಾರಣ ವಿದ್ಯಾರ್ಥಿನಿಯರು ತಮ್ಮ ಬುದ್ದಿ ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಿಸಿಕೊಂಡು ಸೇನಾ ಕ್ಷೇತ್ರದಲ್ಲಿ ಆಸಕ್ತಿ ವಹಿಸಲು ಕರೆ ನೀಡಿದರು.
ಡಾ. ಭಕ್ತಿ ಮಹಿಂದ್ರಕರ ಸ್ವಾಗತಿಸಿದರು, ಮಹಿಳಾ ವಿಭಾಗದ ಮುಖ್ಯಸ್ಥೆ ಡಾ. ಮಾಹಾನಂದಾ ಪಾಟೀಲ ಅತಿಥಿಗಳನ್ನು ಪರಿಚಯಿಸಿ, ಮಹಿಳಾ ವಿಭಾಗದ ಕಾರ್ಯಗಳನ್ನು ಸಭೆಗೆ ತಿಳಿಸಿದರು. ಪ್ರೊ ಫಾತಿಮಾ ರವರು ಸಭೆಯನ್ನು ನಡೆಸಿಕೊಟ್ಟರು.