ಮಹಿಳೆ ನಿಜವಾದ 2ನೇ ದೈವಿಶಕ್ತಿ: ಡಾ.ಗಂಗಾಂಬಿಕೆ ಅಕ್ಕ

ಬೀದರ್: ಮಾ.25:ಪರಮಾತ್ಮನು ಈ ಸೃಷ್ಟಿಯನ್ನು ನಿರ್ಮಿಸಿ ಮೊದಲನೇ ದೈವಿಶಕ್ತಿಯಾದರೆ, 9 ತಿಂಗಳು ಉದರದಲ್ಲಿ ಮಾನವ ಸಂಪನ್ಮೂಲವನ್ನು ಹೊತ್ತು ಸಂರಕ್ಷಿಸಿ ಧರೆಗೆ ತರುವ ಕಾರ್ಯ ಮಾಡುವ ಮೂಲಕ ಮಹಿಳೆ ನಿಜವಾದ 2ನೇ ದೈವಿಶಕ್ತಿಯಾಗಿದ್ದಾಳೆ ಎಂದು ಬಸವ ಸೇವಾ ಪ್ರತಿಷ್ಟಾನದ ಪೂಜ್ಯ ಡಾ.ಗಂಗಾಂಬಿಕೆ ಅಕ್ಕನವರು ನುಡಿದರು.

ಗುರುವಾರ ಸಂಜೆ ನಗರದ ಜನವಾಡ ರಸ್ತೆಯಲ್ಲಿರುವ ಬ್ರಹ್ಮಾಕುಮಾರೀಸ್ ಕೇಂದ್ರ ಪಾವನಧಾಮ ಅವರಣದಲ್ಲಿ ಬ್ರಹ್ಮಾಕುಮಾರೀಸ್ ಪಾವನಧಾಮ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಮಂಡಳಗಳ ಸಂಯುಕ್ತಾಶ್ರಯದಲ್ಲಿ ‘ಸ್ತ್ರೀ ಸಂತೋಷದಿಂದಿದ್ದರೆ ಕುಟುಂಬದಲ್ಲೂ ಸಂತೋಷ’ ಎಂಬ ಶೀರ್ಷಿಕೆಯಡಿ ಜರುಗಿದ ಅಂತರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ತ್ರೀ ಅಬಲೆಯಲ್ಲ, ಆಕೆ ಸಬಲೆ ಎಂಬುದಕ್ಕೆ ಇಂದು ದೇಶದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವಳು, ವಾಯುಯಾನ, ನೌಕಾಯಾನಗಳ ಪೈಲಟ್ ಆಗಿ ಸಹ ಕಾರ್ಯ ನಿರ್ವಹಿಸುತ್ತಿರುವಳು. ಐ.ಟಿ ತಂತ್ರಜ್ಞಾನದಲ್ಲೂ ಆಕೆ ಮುಂಚೂಣಿಯಲ್ಲಿರುವಳು. ಹೀಗೆ ಎಲ್ಲ ಜಟೀಲ ಕ್ಷೇತ್ರಗಳಲ್ಲೂ ಇಂದು ಮಹಿಳೆ ತನ್ನ ಅದ್ಭುತ ಶಕ್ತಿ ಪ್ರದರ್ಶನ ಮಾಡುತ್ತಿರುವಳು. ಆದರೆ ಪುರುಷ ಪ್ರಧಾನ ಈ ಸಮಾಜದಲ್ಲಿ ಮಹಿಳೆ ಕೇವಲ ಭೋಗದ ವಸ್ತು, ಅಲಂಕಾರದ ಗೊಂಬೆ ಎಂದು ಬಿಂಬಿಸಿ ಆಕೆಗೆ ಜ್ಞಾನ ಹಾಗೂ ಅಧ್ಯಾತ್ಮ ಗೊತ್ತಿಲ್ಲ ಎಂಬುವವರಿಗೆ ಜಗತ್ತಿನ ಸುಮಾರು 146 ದೇಶಗಳಲ್ಲಿ ಕೇವಲ ನಾರಿಶಕ್ತಿ ತನ್ನ ಅದ್ಭುತ ಶಕ್ತಿ ಪ್ರದರ್ಶಿಸಿ ಸುಮಾರು 10 ಸಾವಿರ ಬ್ರಹ್ಮಾಕುಮಾರೀಸ್ ಕೇಂದ್ರಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವರು ಎಂದು ಬಣ್ಣಿಸಿದರು.

ಅಂತ್ರಾಪಾಲಜಿ ಸರ್ವೆ ಪ್ರಕಾರ ಹೆಣ್ಣಿನ ಶರೀರ ಬಲಿಷ್ಟ ಎಂದು ಸಂಭೋದಿಸಲಾಗಿದೆ. ಆಕೆಯಲ್ಲಿ ಅಗಾಧ ಶಕ್ತಿ ಅಡಗಿದೆ ಎಂಬುದು ಆಕೆಗೆ ಅರಿವಾಗಬೇಕಿದೆ. ಆಕೆಯಲ್ಲಿ ತಾಳ್ಮೆ, ಸಹನೆ, ಕರುಣೆ, ಸಾಹಾನುಭೂತಿ, ಸಂಹಿಷ್ಣತೆ ಎಲ್ಲವು ಪ್ರಕೃತಿದತ್ತವಾಗಿ ಬಂದಿವೆ. ಆದ್ದರಿಂದ ಮಹಿಳೆಯಲ್ಲಿ ಈ ಎಲ್ಲ ಗುಣಗಳು ಕೇಂದ್ರಕೃತವಾಗಿರುವುದರಿಂದ ಮಾತ್ರ. ಆಕೆ ಅಧ್ಯಾತ್ಮವನ್ನು ಶ್ರೀಮಂತಗೊಳಿಸಲು ಸಾಧ್ಯವಾಗಿದೆ ಎಂದರು.

ಜಿಲ್ಲೆಯ ಎಲ್ಲ ರಾಜಯೋಗ ಕೇಂದ್ರಗಳ ಮುಖ್ಯಸ್ಥರಾದ ರಾಜಯೋಗಿನಿ ಬ್ರ.ಕು ಪ್ರತಿಮಾ ಬಹೆನ್‍ಜಿ ಸಾನಿಧ್ಯ ವಹಿಸಿ ಮಾತನಾಡಿ, ಮಹಿಳೆಯಲ್ಲಿ ಮಾತೃಶಕ್ತಿ ಇರುವುದರಿಂದಲೇ ನಮಗೆ ಪರಮಾತ್ಮನು ಅಧ್ಯಾತ್ಮದ ಕಲಶ ನಮ್ಮ ತಲೆ ಮೇಲಿಟ್ಟು ಜಗತ್ತಿನಲ್ಲಿ ಈಶ್ವರೀಯ ಸೇವೆ ಮಾಡಲು ಅವಕಾಶ ನೀಡಿರುವನು. ಇಂದು ಪುರುಷರು ಮನೆಯಿಂದ ಹೊರಗೆ ಹೋಗಿ ಬೇಗ ಮನೆಗೆ ಮರಳದೇ ಇರುವುದಕ್ಕೆ ಮನೆಯೊಡತಿಯಾದ ಆಕೆಯ ನಡೆ ಕಾರಣವಾಗಿರುತ್ತದೆ. ಅದಕ್ಕಾಗಿ ಮಹಿಳೆಯಾದವಳು ತನ್ನ ಮನೆಯನ್ನು ಸ್ವರ್ಗವಾಗಿಸಲು ಅಧ್ಯಾತ್ಮವನ್ನು ಮೈಗೂಡಿಸಿಕೊಂಡು ಪುರುಷರು ಮನೆಯಿಂದ ದೂರ ಉಳಿಯದಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದರು.

ಲಿಂಗರಾಜಪ್ಪ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯೆ ವಿನಿತಾ ಪಾಟೀಲ ಮುಖ್ಯ ಅತಿಥಿಗಳಾಗಿ ಮಾತನಾಡಿ, ಸ್ತ್ರೀ ಸಂತೋಷವಾಗಿದ್ದರೆ ಒಂದು ಕುಟುಂಬ ಅಲ್ಲ ತನ್ನ ತವರು ಹಾಗೂ ಗಂಡನ ಮನೆ ಎರಡರಲ್ಲೂ ಸಂತೋಷ ಇಡಬಹುದು. ಮಹಿಳೆ ಕೌಟೊಂಬಿಕ ಉನ್ನತಿಗೆ ಮನೆಯಿಂದ ಹೊರ ಹೋಗಿ ದುಡಿಯುತ್ತಾಳೆ. ಸ್ವತಂತ್ರ ಪೂರ್ವದಲ್ಲೂ ಸಹ ಆಕೆ ದೇಶಕ್ಕಾಗಿ ಪ್ರಾಣ ತೆತ್ತಿರುವ ತಾಜಾ ನಿದರ್ಶನಗಳಿವೆ. ಇಂದು ಮಹಿಳೆ ಎಲ್ಲ ರಂಗಗಳಲ್ಲಿದ್ದರೂ ಅವಳ ¸ಂಖ್ಯೆಯಲ್ಲಿ ಗಣನಿಯ ಕೊರತೆ ಕಂಡು ಬರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸ್ತ್ರೀ ರೋಗ ತಜ್ಞೆ ಡಾ.ಜೋತ್ಸ್ನಾ ಹಣಮಶೆಟ್ಟಿ ಮಾತನಾಡಿ, ನಾವು ಮೊದಲು ನಮ್ಮ ಆತ್ಮವನ್ನು ಶಕ್ತಿಯುತವನ್ನಾಗಿಸಬೇಕಿದೆ. ಆರೋಗ್ಯಕರ ಸ್ಪರ್ಧೆ ಮಾಡದೇ ಇರುವುದು, ದೂರು ಸಲ್ಲಿಸುವುದು ಹಾಗೂ ಇತರರೊಂದಿಗೆ ಹೋಲಿಕೆ ಮಡಿಕೊಳ್ಲುವುದನ್ನು ನಿಲ್ಲಿಸಬೇಕು. ಜೀವನದಲ್ಲಿ ಬರುವ ಸುಖ, ದುಖಗಳನ್ನು ದಮನವಾಗಿಸಲು ನಮ್ಮ ಆತ್ಮವನ್ನು ಶಕ್ತಿಶಾಲಿಯನ್ನಾಗಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.

ಪಾವನಧಾಮದ ಹಿರಿಯ ರಾಜಯೋಗ ಶಿಕ್ಷಕಿ ಬಿ.ಕೆ ಗುರುದೇವಿ ಅಕ್ಕನವರು ಪ್ರಾಸ್ತಾವಿಕ ಮಾತನಾಡಿದರು. ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಮಂಡಳದ ಅಧ್ಯಕ್ಷೆ ಡಾ.ಗುರಮ್ಮ ಸಿದ್ದಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಾಂಖ್ಯಿಕ ಅಧಿಕಾರಿ ಸುವರ್ಣಾ ಯದಲಾಪುರೆ ಹಾಗೂ ಇನ್ನರ್‍ವಿಲ್ ಕ್ಲಬ್‍ನ ಕಾರ್ಯದರ್ಶಿ ಉಮಾ ಗಾದಗೆ ವೇದಿಕೆಯಲ್ಲಿದ್ದರು.

ಇದೇ ಸಂದರ್ಭದಲ್ಲಿ ರೇಣುಕಾ, ಮಂಜುಳಾ ರಾಜಕುಮಾರ, ವಿಜಯಮಾಲಾ ಬಿರಾದಾರ, ಲಕ್ಷ್ಮೀ, ಮೇನಕಾ ಬಸವರಾಜ ಹಾಗೂ ಇತರರನ್ನು ಸನ್ಮಾನಿಸಲಾಯಿತು.

ಆರಂಭದಲ್ಲಿ ಶೀತಲ ಪಾಂಚಾಳ ಪ್ರಾಥ್ರ್ನಿಸಿದರು. ಬಿ.ಕೆ ಮಹಾನಂದಾ ಸ್ವಾಗತಿಸಿ, ಬಿ.ಕೆ ರೇಣುಕಾ ಕಾರ್ಯಕ್ರಮ ನಿರೂಪಿಸಿದರು.